ತಾಯಿಗೆ ಸ್ನಾನ ಮಾಡಿಸುವಾಗ ಎಂಜಾಯ್ ಮಾಡಿದ ಪುಟಾಣಿ ಆನೆ ಮರಿಯೊಂದು ಇಡೀಗ ಭಾರೀ ವೈರಲ್ ಆಗುತ್ತಿದೆ. ಆನೆ ಮರಿಯ ಮುದ್ದಾದ ತುಂಟಾಟದ ಫೋಟೋ, ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಾಣಿ ಪ್ರಿಯರು ಹಂಚಿಕೊಳ್ಳುತ್ತಿದ್ದಾರೆ.
2/ 8
ಪ್ರಖ್ಯಾತ ಆನೆ ಶಿಬಿರವಾದ ಶಿವಮೊಗ್ಗದ ಸಕ್ರೆಬೈಲಿನಲ್ಲಿ ಆನೆ ಮರಿಯ ಚಂದದ ಆಟಕ್ಕೆ ಸಾರ್ವಜನಿಕರು ನಿಬ್ಬೆರಗಾಗಿದ್ದಾರೆ.
3/ 8
ತಾಯಿ ಜೊತೆ ಪುಣಾಣಿ ಆನೆ ಮರಿ ನೀರಿನಲ್ಲಿ ಆಟ ಆಡುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದ್ದು ಸಕ್ರೆಬೈಲಿಗೆ ಬಂದಿದ್ದ ಪ್ರವಾಸಿಗರ ಕಣ್ಮನ ಸೆಳೆಯುತ್ತಿದೆ.
4/ 8
ಹಲವು ವರ್ಷಗಳಿಂದ ಕುಂತಿ ಆನೆ ಸಕ್ರೆಬೈಲಿ ಬಿಡಾರದಲ್ಲಿತ್ತು. ಇತ್ತೀಚೆಗಷ್ಟೇ ಈ ಮರಿಗೆ ಕುಂತಿ ಆನೆ ಜನ್ಮ ನೀಡಿತ್ತು. ಇದೇ ಆನೆ ಮರಿಯ ವಿಡಿಯೋ ಇದೀಗ ಅಚ್ಚರಿ ಮೂಡಿಸುತ್ತಿದೆ.
5/ 8
ಕೆಲವೇ ದಿನಗಳ ಹಿಂದೆ ಹುಟ್ಟಿದ ಆನೆಮರಿಗೆ ಇನ್ನೂ ಕೂಡ ಹೆಸರಿಟ್ಟಿಲ್ಲ. ಸದ್ಯ ಹೆಸರಿಡುವ ಮುನ್ನವೇ ತನ್ನ ತಾಯಿಯ ಜೊತೆಗೆ ನೀರಾಟ ಆಡಿ ಮರಿಯಾನೆ ಭಾರೀ ವೈರಲ್ ಆಗಿದೆ.
6/ 8
ನಮ್ಮ ಶಿವಮೊಗ್ಗದ ಸಕ್ರೇಬೈಲ್ ಬಿಡಾರದ ಆನೆಗಳು ಉತ್ತರ ಪ್ರದೇಶದಲ್ಲಿ ತುಂಬಾ ಫೇಮಸ್ ಅಂತೆ. ಆ ವಾತಾವರಣಕ್ಕೆ ಚೆನ್ನಾಗಿ ಒಗ್ಗಿಕೊಳ್ಳುತ್ತವಂತೆ.
7/ 8
ಹೀಗಾಗಿ 2017ರಲ್ಲೂ ರಾಜ್ಯದಿಂದ ಉತ್ತರ ಪ್ರದೇಶಕ್ಕೆ ಕಳುಹಿಸಿದ್ದ 10 ಆನೆಗಳ ಪೈಕಿ ಸಕ್ರೆಬೈಲ್ ಬಿಡಾರದಿಂದ ನಾಲ್ಕು ಆನೆಗಳು ದೂದ್ವಾ ಟೈಗರ್ ರಿಸರ್ವ್ ಸೇರಿದ್ದವು.
8/ 8
ಹೀಗೆ ಶಿವಮೊಗ್ಗದ ಸಕ್ರೇಬೈಲ್ ಆನೆ ಶಿಬಿರ ಆಗಾಗ ಹಲವು ಕುತೂಹಲಕರ ಸುದ್ದಿಗಳಿಂದ ಗಮನ ಸೆಳೆಯುತ್ತಲೇ ಇರುತ್ತದೆ.
First published:
18
Shivamogga Elephant Photos: ತಾಯಿಗೆ ಸ್ನಾನ ಮಾಡಿಸುವಾಗ ಎಂಜಾಯ್ ಮಾಡಿದ ಮರಿ ಆನೆ
ತಾಯಿಗೆ ಸ್ನಾನ ಮಾಡಿಸುವಾಗ ಎಂಜಾಯ್ ಮಾಡಿದ ಪುಟಾಣಿ ಆನೆ ಮರಿಯೊಂದು ಇಡೀಗ ಭಾರೀ ವೈರಲ್ ಆಗುತ್ತಿದೆ. ಆನೆ ಮರಿಯ ಮುದ್ದಾದ ತುಂಟಾಟದ ಫೋಟೋ, ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಾಣಿ ಪ್ರಿಯರು ಹಂಚಿಕೊಳ್ಳುತ್ತಿದ್ದಾರೆ.