Davanagere Accident: ಸಂಕ್ರಾಂತಿಯಂದು ಭೀಕರ ಅಪಘಾತ; ನಶೆಯಲ್ಲಿ ನಿದ್ದೆಗೆ ಜಾರಿದ ಚಾಲಕ: ಏಳು ಜನರ ದುರ್ಮರಣ
Accident: ಸಂಕ್ರಾಂತಿ ಹಬ್ಬದಂದು ಜವರಾಯನ ಅಟ್ಟಹಾಸಕ್ಕೆ ಏಳು ಜನರ ಪ್ರಾಣಪಕ್ಷಿ ಹಾರಿ ಹೋಗಿದೆ. ಇಂದು ಬೆಳ್ಳಗೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲುಕಿನ (Jagaluru, Davanagere) ಕಾನನಕಟ್ಟೆ (NH 13) ಬಳಿ ಅಪಘಾತ ಸಂಭವಿಸಿದೆ.
ವೇಗವಾಗಿ ಬರುತ್ತಿದ್ದ ಇಂಡಿಕಾ ಕಾರ್ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಏಳು ಜನರು ಸಾವನ್ನಪ್ಪಿದ್ದಾರೆ. ಕಾರ್ ಚಾಲಕ ಮದ್ಯ ಸೇವನೆ ಮಾಡಿದ ಪರಿಣಾಮ ಅಪಘಾತ ಸಂಭವಿಸಿದೆ ಎಂದು SP ಸಿಬಿ ರಿಷ್ಯಂತ್ ಮಾಹಿತಿ ನೀಡಿದ್ದಾರೆ.
2/ 5
ಅಪಘಾತದ ತೀವ್ರತೆಗೆ ಸ್ಥಳದಲ್ಲಿಯೇ ಆರು ಜನರು ಸಾವನ್ನಪ್ಪಿದ್ರೆ, ಒಬ್ಬರು ಆಸ್ಪತ್ರೆಯ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ.
3/ 5
ಮೃತರನ್ನು ಮಲ್ಲಂಗೋವ(22), ಸಂತೋಷ್(21), ಸಂಜೀವ್(20), ಜೈಭೀಮ್(18), ರಾಘು(23), ಸಿದ್ದೇಶ್(20), ವೇದಮೂರ್ತಿ(18) ಎಂದು ಗುರುತಿಸಲಾಗಿದೆ. ಮೃತದೇಹಗಳನ್ನು ಜಗಳೂರು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
4/ 5
ಇಂಡಿಕಾ ಕಾರ್ ಬೆಂಗಳೂರಿನಿಂದ ಹೊಸಪೇಟೆಯತ್ತ ಹೊರಟಿತ್ತು, ಮಾರ್ಗ ಮಧ್ಯೆಯೇ ಈ ದುರಂತ ಸಂಭವಿಸಿದೆ. ಮೃತರಲ್ಲಿ ನಾಲ್ವರು ಯಾದಗಿರಿ ಜಿಲ್ಲೆಯ ಶಹಪುರ ಮತ್ತು ಇಬ್ಬರು ವಿಜಯನಗರ ಜಿಲ್ಲೆಯ ಕೂಡ್ಲಿಗೆ ಮತ್ತು ಒಬ್ಬರು ವಿಜಯಪುರ ಜಿಲ್ಲೆಯ ತಾಳಿಕೋಟೆ ಪಟ್ಟಣದ ಮೂಲದವರು ಎಂದು ತಿಳಿದು ಬಂದಿದೆ.
5/ 5
ಅಪಘಾತದ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ SP ರಿಷ್ಯಂತ್ ಪರಿಶೀಲನೆ ನಡೆಸಿದ್ದಾರೆ, ಸದ್ಯ ಹೆದ್ದಾರಿಗೆ ಅಡ್ಡಲಾಗಿದ್ದ ಕಾರ್ ಸರಿಸಿ ವಾಹನ ಸಂಚಾರಕ್ಕೆ ಸುಗಮ ವ್ಯವಸ್ಥೆ ಕಲ್ಪಿಸಲಾಗಿದೆ.