ಸೆಷನ್ನಲ್ಲಿ ಜನಾರ್ದನ ರೆಡ್ಡಿ ಕೂಡಾ ಗಮನ ಸೆಳೆದರು. ಜನಾರ್ದನ ರೆಡ್ಡಿ ಭಗವಂತ ಹಾಗೂ ಗಂಗಾವತಿಯ ಅಂಜನಾದ್ರಿ ಹನುಮಂತನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ಇದಕ್ಕೂ ಮುನ್ನ ಮಾತನಾಡಿದ ಜನಾರ್ದನ ರೆಡ್ಡಿ ಅವರು, 12 ವರ್ಷದ ನಂತರ ಮತ್ತೆ ವಿಧಾನಸೌಧಕ್ಕೆ ಹೆಜ್ಜೆ ಇಡುತ್ತಿದ್ದೇನೆ. ನಮ್ಮ ಪಕ್ಷಕ್ಕೆ ಸಾಕಷ್ಟು ಆಶೀರ್ವಾದ ಮಾಡಿದರೂ, ನಾನು ಗೆದ್ದು ವಿಧಾನಸೌಧ ಪ್ರವೇಶ ಮಾಡಿದ್ದೇನೆ. ಕರ್ನಾಟಕದ ಜನರ ಒಳಿತಿಗಾಗಿ ಕಲ್ಯಾಣ ರಾಜ್ಯದ ಅಭಿವೃದ್ಧಿಗೆ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.
ಇನ್ನು, ಚನ್ನಗಿರಿ ಶಾಸಕ ಬಸವರಾಜ್ ಶಿವಗಂಗಾ ಡಿಕೆ ಶಿವಕುಮಾರ್ ಹೆಸರೇಳಿ ಪ್ರತಿಜ್ಞಾ ವಿಧಿ ಸ್ವೀಕರಿಸಿದ್ದಾರೆ. ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ವ್ಯಕ್ತಿ ಹಾಗೂ ದೇವರ ಹೆಸರು ಬಳಕೆ ಮಾಡಿ ಪ್ರತಿಜ್ಞಾ ವಿಧಿಸ್ವೀಕಾರ ಮಾಡಿದ್ದಾರೆ. ಯಾರೂ ವೈಯಕ್ತಿಕ ಹೆಸರು ತೆಗೆದುಕೊಳ್ಳುವುದು ಬೇಡ ಅಂತಾ ಹಂಗಾಮಿ ಸ್ಪೀಕರ್ ಸೂಚನೆ ನೀಡಿದ್ದರು. ಆದರೂ ಈ ಇಬ್ಬರು ಶಾಸಕರು ಎಡವಟ್ಟು ಮಾಡಿದ್ದರು. ಬಳಿಕ ಭಗವಂತನ ಹೆಸರು ಅಥವಾ ಸಂವಿಧಾನ ಪ್ರಕಾರ ಅಂತ ಪದ ಬಳಸಿ ಅಂತ ಸಲಹೆ ನೀಡಿದರು.