Bengaluru: ಉಂಡ ಮನೆಗೆ ಕನ್ನ ಹಾಕಿ ನೇಪಾಳಕ್ಕೆ ಜೋಡಿ ಜೂಟ್; ಸೆಕ್ಯುರಿಟಿಯಿಂದಲೇ ಕಳ್ಳತನ
ಮನೆ ಕಳ್ಳತನ ಆಗಬಾರದು ಎಂದು ಭದ್ರತಾ ಸಿಬ್ಬಂದಿಯನ್ನು ನೇಮಕ ಮಾಡಲಾಗುತ್ತದೆ. ಅಪಾರ್ಟ್ಮೆಂಟ್ಗಳಲ್ಲಿ ಈ ಭದ್ರತೆ ಇನ್ನು ಹೆಚ್ಚಾಗಿರುತ್ತದೆ. ಆದ್ದರಿಂದ ಕಳ್ಳತನ ತಡೆಯಹುದು ಎಂಬುವುದು ಬಹುತೇಕರ ಲೆಕ್ಕಾಚಾರ ಆಗಿರುತ್ತದೆ.
ರಾಜಧಾನಿ ಬೆಂಗಳೂರಿನಲ್ಲಿ ನೇಪಾಳಿ ಮೂಲದವರೇ ಸೆಕ್ಯುರಿಟಿ ಸಿಬ್ಬಂದಿಯಾಗಿರುತ್ತಾರೆ. ಆದರೆ ಇವರು ನೇಪಾಳಕ್ಕೆ ಹೊರಡುವ ಮುನ್ನ ತಾವು ಕೆಲಸ ಮಾಡುತ್ತಿದ್ದ ಸ್ಥಳದಲ್ಲಿಯೇ ಕಳ್ಳತನ ಮಾಡಿ ಎಸ್ಕೇಪ್ ಆಗುತ್ತಾರೆ.
2/ 8
ಇದೀಗ ಇಂತಹುವುದೇ ಒಂದು ಘಟನೆ ಬೆಳಕಿಗೆ ಬಂದಿದೆ. ಜಾಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಗೋಲ್ಡನ್ ಬೆಲ್ ಅಪಾರ್ಟ್ಮೆಂಟ್ನಲ್ಲಿ ಕಳ್ಳತನ ನಡೆದಿದೆ.
3/ 8
ಕಳೆದ 9 ವರ್ಷಗಳಿಂದ ಗೋಲ್ಡನ್ ಬೆಲ್ ಅಪಾರ್ಟ್ಮೆಂಟ್ನಲ್ಲಿ ನೇಪಾಳ ಮೂಲದ ಶಿವರಾಜ್ ಮತ್ತು ಜಯಂತಿ ದಂಪತಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡಿಕೊಂಡಿದ್ದರು.
4/ 8
ಕಳೆದ 9 ವರ್ಷಗಳಿಂದ ಒಂದೇ ಕಡೆ ಕೆಲಸ ಮಾಡಿಕೊಂಡಿರುವ ಕಾರಣ ಅಪಾರ್ಟ್ಮೆಂಟ್ ನಿವಾಸಿಗಳ ವಿಶ್ವಾಸವನ್ನು ಶಿವರಾಜ್ ಮತ್ತು ಜಯಂತಿ ಗಳಿಸಿದ್ದರು.
5/ 8
ಅಪಾರ್ಟ್ಮೆಂಟ್ನಲ್ಲಿಯ ನಿವಾಸಿಗಳ ಮಾಹಿತಿ ದಂಪತಿಗೆ ಗೊತ್ತಿತ್ತು. ಇದನ್ನೇ ಬಂಡವಾಳ ಮಾಡಿಕೊಂಡ ದಂಪತಿ ಫ್ಲ್ಯಾಟ್ಗೆ ನುಗ್ಗಿ ಕಳ್ಳತನಗೈದು ಜೂಟ್ ಆಗಿದ್ದಾರೆ.
6/ 8
ಫ್ಲ್ಯಾಟ್ವೊಂದರ ನಿವಾಸಿಗಳು ಮೂರು ದಿನಕ್ಕಾಗಿ ಕೊಡಗಿಗೆ ತೆರಳಿದ್ದರು. ಈ ವಿಷಯ ಅರಿತ ಶಿವರಾಜ್ ಮತ್ತು ಜಯಂತಿ ಮನೆಗೆ ಕನ್ನ ಹಾಕಿದ್ದಾರೆ.
7/ 8
ಹಣ, 230 ಗ್ರಾಂ ಚಿನ್ನಾಭರಣ 2 ಲ್ಯಾಪ್ ಟಾಪ್ ಕದ್ದು ಎಸ್ಕೇಪ್ ಶಿವರಾಜ್ ದಂಪತಿ ಜೂಟ್ ಆಗಿದ್ದಾರೆ. ದಂಪತಿ ಹಣ ಮತ್ತು ನಗದು ಜೊತೆ ನೇಪಾಳಕ್ಕೆ ಎಸ್ಕೇಪ್ ಆಗಿರುವ ಶಂಕೆ ವ್ಯಕ್ತವಾಗಿವೆ.
8/ 8
ಈ ಸಂಬಂಧ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.