Bengaluru: ಪ್ರೀತಿಸಿದ ಹುಡುಗಿಗಾಗಿ ಅಸ್ಸಾಂನಿಂದ ಬಂದ; ಮದುವೆ ಮಾಡಿಕೊಳ್ಳಲು ಎಟಿಎಂ ದೋಚಿದ

ಕೆಲಸ ಮಾಡುತ್ತಿದ್ದ ಸ್ಥಳದಲ್ಲಿಯೇ ಹಣ ಕದ್ದು ಪ್ರೀತಿಸಿದ ಯುವತಿಯನ್ನು ಮದುವೆಯಾಗುವ ಕನಸು ಕಂಡಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿದ್ದಾರೆ.

First published:

  • 18

    Bengaluru: ಪ್ರೀತಿಸಿದ ಹುಡುಗಿಗಾಗಿ ಅಸ್ಸಾಂನಿಂದ ಬಂದ; ಮದುವೆ ಮಾಡಿಕೊಳ್ಳಲು ಎಟಿಎಂ ದೋಚಿದ

    ಎಟಿಎಂ ಕೇಂದ್ರದ ಸಿಬ್ಬಂದಿಯೇ ಕನ್ನ ಹಾಕಿರುವ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಅಸ್ಸಾಂ ಮೂಲದ ದೀಪೋಂಕರ್ ಎಂಬಾತ ಕೆಲಸ ಅರಸಿ ಬೆಂಗಳೂರಿಗೆ ಬಂದಿದ್ದನು.

    MORE
    GALLERIES

  • 28

    Bengaluru: ಪ್ರೀತಿಸಿದ ಹುಡುಗಿಗಾಗಿ ಅಸ್ಸಾಂನಿಂದ ಬಂದ; ಮದುವೆ ಮಾಡಿಕೊಳ್ಳಲು ಎಟಿಎಂ ದೋಚಿದ

    ಪ್ರೀತಿಸಿದ ಯುವತಿಯನ್ನು ಮದುವೆಯಾಗಲು ಆರ್ಥಿಕವಾಗಿ ಸಬಲನಾಗಬೇಕೆಂದು ದೀಪೋಂಕರ್ ಬೆಂಗಳೂರಿಗೆ ಬಂದಿದ್ದನು. ಬೆಂಗಳೂರಿನಲ್ಲಿ ಸೆಕ್ಯೂರಿಟಿ ಗಾರ್ಡ್​ ಕೆಲಸಕ್ಕೆ ಸಹ ಸೇರಿದ್ದನು.

    MORE
    GALLERIES

  • 38

    Bengaluru: ಪ್ರೀತಿಸಿದ ಹುಡುಗಿಗಾಗಿ ಅಸ್ಸಾಂನಿಂದ ಬಂದ; ಮದುವೆ ಮಾಡಿಕೊಳ್ಳಲು ಎಟಿಎಂ ದೋಚಿದ

    ಇದೀಗ ಎಟಿಎಂ ದೋಚಿ ಖಾಕಿ ಕೈಗೆ ಸಿಕ್ಕಿಬಿದ್ದಿದ್ದಾನೆ. ದೀಪೋಂಕರ್ ಕಳ್ಳತನದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    MORE
    GALLERIES

  • 48

    Bengaluru: ಪ್ರೀತಿಸಿದ ಹುಡುಗಿಗಾಗಿ ಅಸ್ಸಾಂನಿಂದ ಬಂದ; ಮದುವೆ ಮಾಡಿಕೊಳ್ಳಲು ಎಟಿಎಂ ದೋಚಿದ

    ಆರು ತಿಂಗಳ ಹಿಂದೆ ಬೆಂಗಳೂರಿಗೆ ಬಂದಿದ್ದ ದೀಪೋಂಕರ್ ವಿಲ್ಸನ್ ಗಾರ್ಡನ್​​ನ ಯೂನಿಯನ್ ಬ್ಯಾಂಕ್​​​ನ ಸಿಡಿಎಂ ಮಷಿನ್ ಇರೋ ಒಂದು ಎಟಿಎಂನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದನು.

    MORE
    GALLERIES

  • 58

    Bengaluru: ಪ್ರೀತಿಸಿದ ಹುಡುಗಿಗಾಗಿ ಅಸ್ಸಾಂನಿಂದ ಬಂದ; ಮದುವೆ ಮಾಡಿಕೊಳ್ಳಲು ಎಟಿಎಂ ದೋಚಿದ

    ಇದೇ ವೇಳೆ ಸಿಡಿಎಂ ಮಷಿನ್​​ಗೆ ಬರೋ ಸಿಬ್ಬಂದಿಯನ್ನ ಪರಿಚಯ ಮಾಡಿಕೊಂಡು ಪಾಸ್​​ವರ್ಡ್ ತಿಳಿದುಕೊಂಡಿದ್ದನು. ಬಳಿಕ ಮಧ್ಯರಾತ್ರಿ ವೇಳೆ ಹಂತ ಹಂತವಾಗಿ ಎಟಿಎಂನಲ್ಲಿ ಬರೋಬ್ಬರಿ 19 ಲಕ್ಷ ದೋಚಿ ಅಸ್ಸಾಂಗೆ ಎಸ್ಕೇಪ್ ಆಗಿದ್ದನು.

    MORE
    GALLERIES

  • 68

    Bengaluru: ಪ್ರೀತಿಸಿದ ಹುಡುಗಿಗಾಗಿ ಅಸ್ಸಾಂನಿಂದ ಬಂದ; ಮದುವೆ ಮಾಡಿಕೊಳ್ಳಲು ಎಟಿಎಂ ದೋಚಿದ

    ಎಟಿಎಂನಲ್ಲಿ ಹಣ ಮಿಸ್ ಆಗ್ತಿರೋದನ್ನ ಪರಿಶೀಲಿಸಿದಾಗ ಸಿಸಿಟಿವಿಯಲ್ಲಿ ಸೆಕ್ಯೂರಿಟಿ ಗಾರ್ಡ್ ಕೈ ಚಳಕ ಬಯಲಿಗೆ ಬಂದಿದೆ. 19 ಲಕ್ಷ ಹಣ ದೋಚಿ ಅಸ್ಸಾಂನಲ್ಲಿ ಆರೋಪಿ ಹೋಟೆಲ್ ಒಂದನ್ನ ತೆರೆಯಲು ಪ್ಲಾನ್ ಮಾಡಿದ್ದನು. (ಸಾಂದರ್ಭಿಕ ಚಿತ್ರ)

    MORE
    GALLERIES

  • 78

    Bengaluru: ಪ್ರೀತಿಸಿದ ಹುಡುಗಿಗಾಗಿ ಅಸ್ಸಾಂನಿಂದ ಬಂದ; ಮದುವೆ ಮಾಡಿಕೊಳ್ಳಲು ಎಟಿಎಂ ದೋಚಿದ

    ಬಳಿಕ ಮದುವೆ ಆಗಬೇಕು ಅಂತಲೂ ಪ್ಲಾನ್ ಮಾಡಿದ್ದನು. ಅಷ್ಟರಲ್ಲಿ  ವಿಲ್ಸನ್ ಗಾರ್ಡನ್ ಪೊಲೀಸರು ಅಸ್ಸಾಂಗೆ ತೆರಳಿ ಆರೋಪಿಯನ್ನ ಬಂಧಿಸಿ ಕರೆತಂದಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 88

    Bengaluru: ಪ್ರೀತಿಸಿದ ಹುಡುಗಿಗಾಗಿ ಅಸ್ಸಾಂನಿಂದ ಬಂದ; ಮದುವೆ ಮಾಡಿಕೊಳ್ಳಲು ಎಟಿಎಂ ದೋಚಿದ

    ಪ್ರೀತಿಸಿದ್ದ ಗೆಳತಿ ಜೊತೆ ಮದುವೆಯಾಗೋ ಕನಸು ಕಾಣ್ತಿದ್ದ ದೀಪೋಂಕರ್ ಈಗ ಪರಪ್ಪನ ಅಗ್ರಹಾರ ಸೇರಿದ್ದಾನೆ. (ಸಾಂದರ್ಭಿಕ ಚಿತ್ರ)

    MORE
    GALLERIES