ಕಾರ್ಯಾಚರಣೆ ಸಂದರ್ಭದಲ್ಲಿ ತಜ್ಞರು ಅರವಳಿಕೆ ಮದ್ದು ನೀಡಿದ ಬಳಿಕವೂ ಸುಮಾರು ಒಂದೂವರೆ ಗಂಟೆ ಕಾಲ ನಿಲ್ಲದೆ ಅಧಿಕಾರಿಗಳನ್ನು ಸತಾಯಿಸಿತ್ತು ಮಕ್ನಾ ಆನೆ (ದಂತವಿಲ್ಲದ ಗಂಡು ಆನೆ). ಸಾಕಾನೆಗಳ ಜೊತೆ ಹತ್ತಾರು ಕಿಲೋಮೀಟರ್ ಸುತ್ತಾಡಿ ಕಡೆಗೂ ಪುಂಡಾನೆ ಸೆರೆ ಹಿಡಿಯಲಾಗಿದ್ದು, ಕಾಡಾನೆ ಸೆರೆಯಿಂದ ಸ್ಥಳೀಯರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.