COVID 19: ನಿಧಾನಗತಿಯಲ್ಲಿ ಮತ್ತೆ ಹೆಚ್ಚಾಗ್ತಿದೆ ಮಹಾಮಾರಿ ಕೊರೊನಾ

ದೇಶದಲ್ಲಿ ಕೊರೊನಾ ಅಬ್ಬರ ಇಳಿಯುತ್ತಿದೆ ಅನ್ನೋ ಹೊತ್ತಿಗೆ ನಿಧಾನಗತಿಯಲ್ಲಿ ಮತ್ತೆ ಏರಿಕೆ ಆಗಿದೆ. ಇತ್ತ ರಾಜ್ಯದಲ್ಲಿಯೂ ಕೊರೊನಾ ಸಂಖ್ಯೆಗಳು ಏರಿಕೆಯಾಗುತ್ತಿರೋದು ಜನರಲ್ಲಿ ಆತಂಕ ಸೃಷ್ಟಿಸಿದೆ.

First published:

  • 17

    COVID 19: ನಿಧಾನಗತಿಯಲ್ಲಿ ಮತ್ತೆ ಹೆಚ್ಚಾಗ್ತಿದೆ ಮಹಾಮಾರಿ ಕೊರೊನಾ

    ಭಾರತದಲ್ಲಿ ಸತತ 2ನೇ ದಿನವೂ 300ಕ್ಕೂ ಅಧಿಕ ಹೊಸ ಪ್ರಕರಣಗಳು ದಾಖಲಾಗಿದ್ದು, ಭಾನುವಾರ ಬೆಳಗ್ಗೆ 324 ಪ್ರಕರಣಗಳು ದೃಢಪಟ್ಟಿವೆ. ಆದ್ರೆ ಯಾವುದೇ ಸಾವು ಸಂಭವಿಸಿಲ್ಲ. (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    COVID 19: ನಿಧಾನಗತಿಯಲ್ಲಿ ಮತ್ತೆ ಹೆಚ್ಚಾಗ್ತಿದೆ ಮಹಾಮಾರಿ ಕೊರೊನಾ

    ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 2791ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಈವರೆಗೂ 220.64 ಕೋಟಿ ಕೋವಿಡ್​ ಡೋಸ್ ಮಾತ್ರ ನೀಡಲಾಗಿದೆ. ಕೊರೊನಾ ಪ್ರಕರಣಗಳು 97 ದಿನಗಳ ಬಳಿಕ 300ರ ಗಡಿ ದಾಟಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    COVID 19: ನಿಧಾನಗತಿಯಲ್ಲಿ ಮತ್ತೆ ಹೆಚ್ಚಾಗ್ತಿದೆ ಮಹಾಮಾರಿ ಕೊರೊನಾ

    ಕರ್ನಾಟಕ ಆರೋಗ್ಯ ಇಲಾಖೆ ಕೋವಿಡ್ ಬುಲೆಟಿನ್ ಪ್ರಕಟಿಸಿದ್ದು, ಮಾರ್ಚ್ 5ರಂದು ರಾಜ್ಯದಲ್ಲಿ 64 ಹೊಸ ಪ್ರಕರಣಗಳು ವರದಿಯಾಗಿವೆ. ಸದ್ಯ ರಾಜ್ಯದಲ್ಲಿ 415 ಸಕ್ರಿಯ ಕೊರೊನಾ ಪ್ರಕರಣಗಳಿವೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    COVID 19: ನಿಧಾನಗತಿಯಲ್ಲಿ ಮತ್ತೆ ಹೆಚ್ಚಾಗ್ತಿದೆ ಮಹಾಮಾರಿ ಕೊರೊನಾ

    ಮಾರ್ಚ್ 5ರಂದು 40 ಜನರು ಕೋವಿಡ್​ನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದಾರೆ. ರಾಜ್ಯದಲ್ಲಿ ಇದುವರೆಗೂ ಮಹಾಮಾರಿ ಕೊರೊನಾಗೆ 40,269 ಜನರು ಮೃತಪಟ್ಟಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    COVID 19: ನಿಧಾನಗತಿಯಲ್ಲಿ ಮತ್ತೆ ಹೆಚ್ಚಾಗ್ತಿದೆ ಮಹಾಮಾರಿ ಕೊರೊನಾ

    ರಾಜ್ಯದಲ್ಲಿ ಮಹಾಮಾರಿ ಕೊರೊನಾ ಬಳಿಕ ಮತ್ತೊಂದು ವೈರಸ್​ ಪತ್ತೆಯಾಗಿದೆ. ದೇಶಾದ್ಯಂತ H3N2 ವೈರಸ್ ಹಾವಳಿ ಹೆಚ್ಚಾಗುತ್ತಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    COVID 19: ನಿಧಾನಗತಿಯಲ್ಲಿ ಮತ್ತೆ ಹೆಚ್ಚಾಗ್ತಿದೆ ಮಹಾಮಾರಿ ಕೊರೊನಾ

    ಕೆಮ್ಮು, ನೆಗಡಿ, ಜ್ವರ ಈ ವೈರಸ್​ನ ಲಕ್ಷಣಗಳಾಗಿದೆ. ILI, SARI ಕೇಸ್‌ಗಳಿಗಿಂತ ಈ ವೈರಸ್ ಮಾರಕವಾಗಿದೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆ ಇಂದು ಆರೋಗ್ಯ ಸಚಿವ ಸುಧಾಕರ್ ನೇತೃತ್ವದಲ್ಲಿ ತಜ್ಞರ ಜೊತೆ ಸಭೆ ನಡೆಸಲಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    COVID 19: ನಿಧಾನಗತಿಯಲ್ಲಿ ಮತ್ತೆ ಹೆಚ್ಚಾಗ್ತಿದೆ ಮಹಾಮಾರಿ ಕೊರೊನಾ

    ಇಂದು ನಡೆಯುವ ಸಭೆಯಲ್ಲಿ ವೈರಸ್ ತಡೆ, ಚಿಕಿತ್ಸೆ ವಿಧಾನ ಬಗ್ಗೆ ಚರ್ಚಿಸಲಿದ್ದಾರೆ. ಬಳಿಕ ಆರೋಗ್ಯ ಇಲಾಖೆಯಿಂದ ಹೊಸ ಗೈಡ್ ಲೈನ್ಸ್ ಬಿಡುಗಡೆ ಮಾಡುವ ಸಾಧ್ಯತೆಯಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES