ಸಿದ್ದೇಶ್ವರ ಸ್ವಾಮೀಜಿ ಎಲ್ಲಾ ಮಠಾಧೀಶರಂತೆ ಕಾವಿ ತೊಡುತ್ತಿರಲಿಲ್ಲ. ಅವರು ಶುಭ್ರ ಬಿಳಿ ಬಣ್ಣದ ಬಟ್ಟೆ ತೊಡುತ್ತಿದ್ದರು, ಅವರ ಮನಸ್ಸೂ ಬಟ್ಟೆಯಂತೆ ಶುಭ್ರವಾಗಿತ್ತು. ಅಧಿಕಾರ, ಹಣ, ಆಸ್ತಿಗೆ ಆಸೆಪಡದ ಅವರು ಪದ್ಮಶ್ರಿ, ಗೌರವ ಡಾಕ್ಟರೇಟ್ಗಳನ್ನೇ ತಿರಸ್ಕರಿಸಿದ್ದರು ಅಂದರೆ ನೀವು ನಂಬುತ್ತೀರಾ?
ಸಿದ್ದೇಶ್ವರ ಸ್ವಾಮೀಜಿ ಎಲ್ಲಾ ಮಠಾಧೀಶರಂತೆ ಕಾವಿ ತೊಡುತ್ತಿರಲಿಲ್ಲ. ಅವರು ಶುಭ್ರ ಬಿಳಿ ಬಣ್ಣದ ಬಟ್ಟೆ ತೊಡುತ್ತಿದ್ದರು, ಅವರ ಮನಸ್ಸೂ ಬಟ್ಟೆಯಂತೆ ಶುಭ್ರವಾಗಿತ್ತು. ಅಧಿಕಾರ, ಹಣ, ಆಸ್ತಿಗೆ ಆಸೆಪಡದ ಅವರು ಪದ್ಮಶ್ರಿ, ಗೌರವ ಡಾಕ್ಟರೇಟ್ಗಳನ್ನೇ ತಿರಸ್ಕರಿಸಿದ್ದರು ಅಂದರೆ ನೀವು ನಂಬುತ್ತೀರಾ?
2/ 8
2018ರಲ್ಲಿ ಭಾರತ ಸರಕಾರ ಸಿದ್ದೇಶ್ವರ ಶ್ರೀಗಳಿಗೆ ದೇಶದ ಪ್ರತಿಷ್ಠಿತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀಯನ್ನು ಘೋಷಿಸಿತ್ತು. ಆದರೆ ಶ್ರೀಗಳು ಗೌರವಪೂರ್ವಕವಾಗಿಯೇ ಆ ಪ್ರಶಸ್ತಿಯನ್ನು ತಿರಸ್ಕರಿಸಿದ್ದರು.
3/ 8
“ಪ್ರಶಸ್ತಿಗೆ ನಾನು ಅರ್ಹನಲ್ಲ. ನನಗಿಂತ ಹೆಚ್ಚಿನ ಸಾಧನೆ ಮಾಡಿದವರು ಸಾಕಷ್ಟಿದ್ದಾರೆ. ಅವರಿಗೆ ನೀಡಿ. ನಮ್ಮ ಮೇಲಿನ ಪ್ರೀತಿ, ಗೌರವಕ್ಕೆ ಧನ್ಯವಾದಗಳು” ಹೀಗಂತ ಪ್ರಧಾನಿಗೆ ಪತ್ರ ಬರೆದು ಪ್ರಶಸ್ತಿ ನಿರಾಕರಿಸಿದ್ದರು.
4/ 8
90ರ ದಶಕದಲ್ಲಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಶ್ರೀಗಳಿಗೆ ಗೌರವ ಡಾಕ್ಟರೇಟ್ ನೀಡಲು ಮುಂದಾಗಿತ್ತು. ಆಗಲೂ ಸಿದ್ದೇಶ್ವರ ಸ್ವಾಮೀಜಿ ಆ ಗೌರವ ನಯವಾಗಿ ತಿರಸ್ಕರಿಸಿದ್ದರು.
5/ 8
ಜಗದ್ವಿಖ್ಯಾತ ಮೈಸೂರು ದಸರೆ ಉದ್ಘಾಟನೆಗೆ ಸರಕಾರ ಶ್ರೀಗಳನ್ನು ಆಯ್ಕೆ ಮಾಡಿದಾಗ ಅದಕ್ಕೂ ನಿರಾಕರಿಸಿದ್ದರು. ಎಲ್ಲಿಯೂ ಪ್ರಚಾರ ಬಯಸದೇ ತಮ್ಮ ಕಾಯಕದಲ್ಲೇ ಈ ಕಾಯಕಯೋಗಿ ಮಗ್ನರಾಗಿದ್ದರು.
6/ 8
ಕರ್ನಾಟಕ ಸರ್ಕಾರ ಜ್ಞಾನ ಯೋಗಾಶ್ರಮಕ್ಕೆ ಬಜೆಟ್ನಲ್ಲಿ 50 ಲಕ್ಷ ರೂ. ಮಂಜೂರು ಮಾಡಿತ್ತು. ಆದರೆ ಆಶ್ರಮದವರು ಅದನ್ನೂ ಸಹ ಸ್ವೀಕರಿಸದೇ ಸರಕಾರಕ್ಕೆ ಮರಳಿಸಿದ್ದರು.
7/ 8
ಜ್ಞಾನ ಪ್ರಸಾರಕ್ಕೆ ಮೀಸಲಿರುವ ಆಶ್ರಮಕ್ಕೆ ಸರಕಾರದ ಅನುದಾನದ ಅವಶ್ಯಕತೆಯಿಲ್ಲ. ಈ ಹಣವನ್ನು ಬೇರೆ ಒಳ್ಳೆಯ ಕಾರ್ಯಕ್ಕೆ ಬಳಕೆ ಮಾಡಿ ಎಂದು ಸರಕಾರಕ್ಕೆ ಕೃತಜ್ಞತಾ ಪೂರ್ವಕ ಪತ್ರ ಬರೆದು, ಅನುದಾನವನ್ನು ಮರಳಿಸಿದ್ದರು.
8/ 8
ಇದೀಗ ಮರಣದಲ್ಲೂ ಶ್ರೀಗಳು ಸರಳತೆ ಮೆರೆದಿದ್ದಾರೆ. ನನ್ನನ್ನು ಮಣ್ಣು ಮಾಡುವಂತಿಲ್ಲ, ಅಗ್ನಿ ಸ್ಪರ್ಶ ಮಾಡಬೇಕು, ಚಿತಾಭಸ್ಮವನ್ನು ನದಿ ಅಥವಾ ಸಮುದ್ರದಲ್ಲಿ ವಿಸರ್ಜಿಸಿ, ಶ್ರಾದ್ಧೀಯ ಕರ್ಮಗಳನ್ನು ಮಾಡುವಂತಿಲ್ಲ ಅಂತ 2014ರಲ್ಲಿಯೇ ವಿಲ್ ಬರೆದಿದ್ದಾರಂತೆ. ಅಲ್ಲದೇ ಯಾವುದೇ ರೀತಿಯ ಸ್ಮಾರಕಗಳನ್ನು ನಿರ್ಮಿಸಬೇಡಿ ಅಂತ ಹೇಳಿದ್ದರಂತೆ.