ಹಂಪಿಯಲ್ಲಿ ಮನುಷ್ಯರಂತೆ ಹಲ್ಲುಗಳಿರುವ ಮೀನು ಪತ್ತೆ.. ಏನಿದರ ನಿಗೂಢ ರಹಸ್ಯ?
ಕೊಪ್ಪಳ: ಇಂದಿನ ವೈಜ್ಞಾನಿಕ ಯುಗದಲ್ಲೂ ಪ್ರಕೃತಿ, ಮನುಷ್ಯನ ಕೈಗೆಟುಕದ ಅದೆಷ್ಟೋ ರಹಸ್ಯಗಳನ್ನು ತನ್ನೊಳಗೆ ಉದುಗಿಸಿಟ್ಟುಕೊಂಡಿದೆ. ಎಲ್ಲವನ್ನು ಬಲ್ಲೆವು ಎಂಬ ನಮ್ಮೆಲ್ಲರಿಗೂ ನಿಸರ್ಗ ಆಗಾಗ್ಗೆ ಅಚ್ಚರಿಗಳನ್ನು ಕೊಡುತ್ತಲೇ ಇರುತ್ತೆ. ಅಂತಹದ್ದೇ ಒಂದು ಸುದ್ದಿ ಇಲ್ಲಿದೆ ನೋಡಿ.
ಮಾನವರ ಮುಖವನ್ನೇ ಹೋಲುವ ವಿಚಿತ್ರ ಮೀನೊಂದು ಕರ್ನಾಟಕದಲ್ಲಿ ಪತ್ತೆಯಾಗಿದೆ. ಕೊಪ್ಪಳದ ವಿರುಪಾಪುರ ಗಡ್ಡೆಯ ನದಿ ಪಾತ್ರದಲ್ಲಿ ಪತ್ತೆಯಾಗಿರುವ ಮೀನು ಎಲ್ಲರ ಅಚ್ಚರಿಗೆ ಕಾರಣವಾಗಿದೆ.
2/ 4
ಹಂಪಿ ಮತ್ತು ವಿರುಪಾಪುರ ಗಡ್ಡೆ ಮಧ್ಯೆ ಹರಿಯುವ ನದಿಯಲ್ಲಿ ಪತ್ತೆಯಾಗಿರುವ ಮೀನಿನ ಬಾಯಿಯಲ್ಲಿ ಮನುಷ್ಯನಂತೆ ಹಲ್ಲುಗಳು ಇವೆ. ಮೀನನ್ನು ನೋಡಿ ಸ್ಥಳೀಯರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
3/ 4
ರಫಿ ಎನ್ನುವ ವ್ಯಕ್ತಿ ಮೀನು ಹಿಡಿಯುವಾಗ ಗಾಳಕ್ಕೆ ಈ ವಿಚಿತ್ರ ಮೀನು ಸಿಕ್ಕಿ ಬಿದ್ದಿದೆ. ನಿತ್ಯ ಹಂಪಿ ಹಾಗೂ ವಿರುಪಾಪುರ ಗಡ್ಡಿ ನದಿಯಲ್ಲಿ ಬೋಟ್ ನಡೆಸುವ ರಫಿ, ಈ ಹಿಂದೆ ಎಂದೂ ಈ ರೀತಿಯ ಮೀನನ್ನು ನೋಡಿಲ್ಲವಂತೆ.
4/ 4
ಸ್ಥಳೀಯರು ಕೂಡ ಇದೇ ಮೊದಲ ಬಾರಿ ನಾವು ಇಂಥಹ ಮೀನನ್ನು ನೋಡಿದ್ದು ಎನ್ನುತ್ತಿದ್ದಾರೆ. ಅಪರೂಪದ ಮೀನನನ್ನು ಮತ್ತೆ ನದಿಗೆ ಬಿಟ್ಟಿರುವುದಾಗಿ ರಫಿ ತಿಳಿಸಿದ್ದಾರೆ.