ಆಡಿದ ಮಾತುಗಳಿಗೆ ಕ್ಷಮೆ ಕೇಳಿದ ರಮೇಶ್ ಕುಮಾರ್

ಮಾಜಿ ಸ್ಪೀಕರ್, ಶಾಸಕ ರಮೇಶ್ ಕುಮಾರ್ ನಿನ್ನೆ ಅಧಿವೇಶನದಲ್ಲಿ ಆಡಿದ ಮಾತುಗಳಿಗೆ ಟ್ವಿಟರ್ ಮೂಲಕ ಕ್ಷಮೆ ಕೇಳಿದ್ದಾರೆ. ನಿನ್ನೆ ಅಧಿವೇಶನದಲ್ಲಿ ಆಡಿತ ಮಾತುಗಳಿಗೆ ಭಾರೀ ವಿರೋಧ ವ್ಯಕ್ತವಾಗಿತ್ತು. ಮಹಿಳಾ ಸಂಘಟನೆಗಳು ಕ್ಷಮೆ ಕೇಳುವಂತೆ ಆಗ್ರಹಿಸಿದ್ದವು.

First published:

  • 15

    ಆಡಿದ ಮಾತುಗಳಿಗೆ ಕ್ಷಮೆ ಕೇಳಿದ ರಮೇಶ್ ಕುಮಾರ್

    ಇಂದು ಬೆಳಗ್ಗೆ ಟ್ವೀಟ್ ಮಾಡಿರುವ ರಮೇಶ್ ಕುಮಾರ್, ಅತ್ಯಾಚಾರ ಕುರಿತು ವಿಧಾನಸಭೆಯಲ್ಲಿ ನಾನು ಆಡಿದ ಅಸಡ್ಡೆ ಮತ್ತು ನಿರ್ಲಕ್ಷ್ಯದ ಮಾತುಗಳಿಗೆ ಪ್ರಾಮಾಣಿಕ ಕ್ಷಮೆಯನ್ನು ವ್ಯಕ್ತಪಡಿಸಲು ಬಯಸುತ್ತೇನೆ. ಇದು ಉದ್ದೇಶಪೂರ್ವಕವಾದ ಹೇಳಿಕೆ ಆಗಿರಲಿಲ್ಲ ಮತ್ತು ಘೋರ ಅಪರಾಧವನ್ನು ಅಲಕ್ಷಿಸದಿರುವುದು ಆಗಿರಲಿಲ್ಲ. ಮುಂದೆ ಈ ರೀತಿ ಪದ ಬಳಸದಂತೆ ಎಚ್ಚರಿಕೆ ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

    MORE
    GALLERIES

  • 25

    ಆಡಿದ ಮಾತುಗಳಿಗೆ ಕ್ಷಮೆ ಕೇಳಿದ ರಮೇಶ್ ಕುಮಾರ್

    ‘ದೆರ್‌ ಈಸ್‌ ಎ ಸೇಯಿಂಗ್‌, ವೆನ್‌ ರೇಪ್‌ ಈಸ್‌ ಇನೆವಿಟೆಬಲ್‌ ಲೆಟ್‌ ಲೇಡೌನ್‌ ಅಂಡ್‌ ಎಂಜಾಯ್‌’ (ಅಂದರೆ, ಅತ್ಯಾಚಾರದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದಿದ್ದರೆ, ಮಲಗಿ ಆನಂದಿಸಿ) ಎಂದು ಹೇಳಿದ್ದರು. ಈ ಹೇಳಿಕೆಗೆ ವಿರೋಧ ವ್ಯಕ್ತಪಡಿಸಬೇಕಿದ್ದ ಸ್ಪೀಕರ್ ವಿಶ್ವೇಶರ ಹೆಗಡೆ ಕಾಗೇರಿ ಸಹ ನಕ್ಕಿದ್ದು, ಚರ್ಚೆಗೆ ಗ್ರಾಸವಾಗಿತ್ತು.

    MORE
    GALLERIES

  • 35

    ಆಡಿದ ಮಾತುಗಳಿಗೆ ಕ್ಷಮೆ ಕೇಳಿದ ರಮೇಶ್ ಕುಮಾರ್

    ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಮಹಿಳಾ ಶಾಸಕಿಯರು, ಈ ರೀತಿಯ ಹೇಳಿಕೆ ಖಂಡನೀಯ. ಈ ಮಾತುಗಳನ್ನು ಹಿಸ್ಟರಿಯಿಂದ ತೆಗೆದು ಹಾಕುವಂತೆ ಹೇಳಲಾಗುವುದು. ಶಾಸಕರು ಸಹ ಸದನದಲ್ಲಿಯೇ ಆಗ್ರಹಿಸಲಾಗುವುದು ಎಂದು ತಿಳಿಸಿದ್ದಾರೆ.

    MORE
    GALLERIES

  • 45

    ಆಡಿದ ಮಾತುಗಳಿಗೆ ಕ್ಷಮೆ ಕೇಳಿದ ರಮೇಶ್ ಕುಮಾರ್

    ಜವಾಬ್ದಾರಿ ಸ್ಥಾನದಲ್ಲಿರುವಂತಹ ಹಿರಿಯ ಶಾಸಕರು ಈ ರೀತಿಯ ಮಾತುಗಳನ್ನಾಡುವುದು ಎಷ್ಟು ಸರಿ? ಸದನದ ಗೌರವವನ್ನು ಕಡಿಮೆ ಮಾಡುವ ಮಾತುಗಳನ್ನು ಬಳಸಬಾರದು. ಕ್ಷಮೆಯಿಂದ ಆಡಿದ ಮಾತುಗಳು ಮರೆಯಾಗಲ್ಲ ಎಂದು ಮಹಿಳಾ ಸಂಘಟನೆಗಳು ಅಸಮಾಧಾನ ಹೊರ ಹಾಕಿವೆ.

    MORE
    GALLERIES

  • 55

    ಆಡಿದ ಮಾತುಗಳಿಗೆ ಕ್ಷಮೆ ಕೇಳಿದ ರಮೇಶ್ ಕುಮಾರ್

    ಈ ಹಿಂದೆಯೂ ಸ್ಪೀಕರ್ ಸ್ಥಾನದಲ್ಲಿದ್ದಾಗಲೇ ರಮೇಶ್ ಕುಮಾರ್ ಅತ್ಯಾಚಾರದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದು ರಾಷ್ಟ್ರೀಯ ವಾಹಿನಿಗಳಲ್ಲಿಯೂ ಸುದ್ದಿಯಾಗಿತ್ತು.

    MORE
    GALLERIES