Karnataka Politicsನಲ್ಲಿ ಮಹತ್ವದ ಬೆಳವಣಿಗೆ: ಹುಬ್ಬೇರಿಸಿದ ರಮೇಶ್ ಜಾರಕಿಹೊಳಿ, ಯತ್ನಾಳ್ ರಹಸ್ಯ ಸಭೆ

ವಿಜಯಪುರ: ರಾಜ್ಯ ರಾಜಕೀಯದಲ್ಲಿ (Karnataka Politics) ಮಹತ್ವದ ಬೆಳವಣಿಗೆ ಆಗಿದೆ. ಮಾಜಿ ಸಚಿವ ರಮೇಶ್ ಜಾರಕಿಹೊಳಿ (Ramesh jarkiholi) ಹಾಗೂ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಭೇಟಿಯಾಗಿದ್ದು, ಬಿಜೆಪಿ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

First published:

  • 15

    Karnataka Politicsನಲ್ಲಿ ಮಹತ್ವದ ಬೆಳವಣಿಗೆ: ಹುಬ್ಬೇರಿಸಿದ ರಮೇಶ್ ಜಾರಕಿಹೊಳಿ, ಯತ್ನಾಳ್ ರಹಸ್ಯ ಸಭೆ

    ವಿಜಯಪುರಕ್ಕೆ ಭೇಟಿ ನೀಡಿದ ಮಾಜಿ ಸಚಿವ ರಮೇಶ ಜಾರಕಿಹೊಳಿ, ಯತ್ನಾಳ ತೋಟದ ಮನೆಯಲ್ಲಿ ರಹಸ್ಯ ಸಭೆ ನಡೆಸಿದರು. ಉಭಯ ನಾಯಕರು ಗಂಭೀರ ಚರ್ಚೆಯಲ್ಲಿ ತೊಡಗಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

    MORE
    GALLERIES

  • 25

    Karnataka Politicsನಲ್ಲಿ ಮಹತ್ವದ ಬೆಳವಣಿಗೆ: ಹುಬ್ಬೇರಿಸಿದ ರಮೇಶ್ ಜಾರಕಿಹೊಳಿ, ಯತ್ನಾಳ್ ರಹಸ್ಯ ಸಭೆ

    ಸುಮಾರು ಒಂದು ಗಂಟೆಗೂ ಹೆಚ್ಚಿನ ಸಮಯದವರೆಗೂ ರಮೇಶ ಜಾರಕಿಹೊಳಿ ಹಾಗೂ ಶಾಸಕ ಯತ್ನಾಳ್ ಮಾತುಕತೆ ನಡೆಸಿದ್ದಾರೆ. ಇಬ್ಬರೂ ನಾಯಕರು ಮುಂದಿನ ರಾಜಕೀಯ ನಡೆ ಬಗ್ಗೆ ಚರ್ಚಿಸಿದ್ದಾರೆ ಎನ್ನಲಾಗುತ್ತಿದೆ.

    MORE
    GALLERIES

  • 35

    Karnataka Politicsನಲ್ಲಿ ಮಹತ್ವದ ಬೆಳವಣಿಗೆ: ಹುಬ್ಬೇರಿಸಿದ ರಮೇಶ್ ಜಾರಕಿಹೊಳಿ, ಯತ್ನಾಳ್ ರಹಸ್ಯ ಸಭೆ

    ಸಿಡಿ ಪ್ರಕರಣದಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ರಮೇಶ್ ಜಾರಕಿಹೊಳಿ ಮತ್ತೆ ಸಂಪುಟ ಸೇರಲು ಕಸರತ್ತು ನಡೆಸುತ್ತಿದ್ದಾರೆ. ಇನ್ನು ಯತ್ನಾಳ್ ಅವರು ಬಿ.ಎಸ್.ಯಡಿಯೂರಪ್ಪ ಸರ್ಕಾರದ ವಿರುದ್ಧ ಬಂಡಾಯವೆದ್ದಿದ್ದರು. ಸಿಎಂ ಸ್ಥಾನದಿಂದ ಬಿಎಸ್ ವೈ ಇಳಿದರೂ ಯತ್ನಾಳ್ ಗೆ ಮಂತ್ರಿ ಪಟ್ಟ ಸಿಕ್ಕಿರಲಿಲ್ಲ.

    MORE
    GALLERIES

  • 45

    Karnataka Politicsನಲ್ಲಿ ಮಹತ್ವದ ಬೆಳವಣಿಗೆ: ಹುಬ್ಬೇರಿಸಿದ ರಮೇಶ್ ಜಾರಕಿಹೊಳಿ, ಯತ್ನಾಳ್ ರಹಸ್ಯ ಸಭೆ

    ಮಾಜಿ ಸಚಿವ ಹಾಗೂ ಶಾಸಕ ಇಬ್ಬರೂ ಸಂಪುಟ ಸೇರಲು ತುದಿಗಾಲಲ್ಲಿ ನಿಂತಿದ್ದಾರೆ. ಮಂತ್ರಿ ಪಟ್ಟ ದಕ್ಕಿಸಿಕೊಳ್ಳು ರಣತಂತ್ರ ರೂಪಿಸಿರಬಹುದು ಎಂಬ ಬಗ್ಗೆ ಚರ್ಚೆ ರಾಜಕೀಯ ಪಡಸಾಲೆಯಲ್ಲಿ ನಡೆಯುತ್ತಿದೆ.

    MORE
    GALLERIES

  • 55

    Karnataka Politicsನಲ್ಲಿ ಮಹತ್ವದ ಬೆಳವಣಿಗೆ: ಹುಬ್ಬೇರಿಸಿದ ರಮೇಶ್ ಜಾರಕಿಹೊಳಿ, ಯತ್ನಾಳ್ ರಹಸ್ಯ ಸಭೆ

    ನೆರೆಯ ಮಹಾರಾಷ್ಟ್ರದ ಸಾಂಗ್ಲಿಯಿಂದ ನೇರವಾಗಿ ಯತ್ನಾಳ್ ತೋಟದ ಮನೆಗೆ ಆಗಮಿಸಿದ ರಮೇಶ ಜಾರಕಿಹೊಳಿ ಮಾತುಕತೆ ಬಳಿಕ ಬೆಳಗಾವಿಗೆ ತೆರಳಿದರು. ರಮೇಶ ಜಾರಕಿಹೊಳಿ ತೆರಳಿದ ಬಳಿಕ ಯತ್ನಾಳ್ ಸಿಂದಗಿ ಪಟ್ಟಣಕ್ಕೆ ತೆರಳಿದರು.

    MORE
    GALLERIES