ಚನ್ನಪಟ್ಟಣ ಬಳಿ ಸಂಸದರ ಕಾರು ಅಪಘಾತಕ್ಕೊಳಗಾಯಿತೇ? ಏನಾಯ್ತು ಎಂದು ತಿಳಿಸಿದ Pratap Simha

ರಾಮನಗರ: ಮುದುಗೆರೆ ಬಳಿ ಸಂಸದ ಪ್ರತಾಪ್ ಸಿಂಹ ಕಾರು ಪಲ್ಟಿಯಾಗಿದೆ ಎಂಬ ಸುದ್ದಿ ಕೆಲ ಕಾಲ ಹರಿದಾಡಿ ಆತಂಕ ಸೃಷ್ಟಿಯಾಗಿತ್ತು. ಚನ್ನಪಟ್ಟಣದ ಮುದುಗೆರೆ ಬಳಿ ಚಾಲಕನ ನಿಯಂತ್ರಣ ತಪ್ಪಿ ಕಾರು ಅಪಘಾತಕ್ಕೊಳಗಾದ (Car Accident) ಬಗ್ಗೆ ಸಂಸದ ಪ್ರತಾಪ್ ಸಿಂಹ ಸ್ಪಷ್ಟನೆ ನೀಡಿದ್ದಾರೆ.

First published:

 • 15

  ಚನ್ನಪಟ್ಟಣ ಬಳಿ ಸಂಸದರ ಕಾರು ಅಪಘಾತಕ್ಕೊಳಗಾಯಿತೇ? ಏನಾಯ್ತು ಎಂದು ತಿಳಿಸಿದ Pratap Simha

  ಬೆಂಗಳೂರಿನ ವೈಟ್ ಫೀಲ್ಡ್ ನಿವಾಸಿ ಉನ್ನಿಕೃಷ್ಣ ಎಂಬುವರ ಕಾರ್ ಪಲ್ಟಿಯಾಗಿದೆ. ಬೆಂಗಳೂರಿನಿಂದ ಮೈಸೂರಿಗೆ ತೆರಳುವಾಗ ಘಟನೆ ನಡೆಸಿದೆ. ಅಪಘಾತ ನಡೆದಾಗ ನಾನು ಸಮೀಪದ ಹೋಟೆಲ್ನಲ್ಲಿದ್ದೆ ಎಂದು ಸಂಸದರು ಊಹಾಪೋಹಗಳನ್ನು ಅಲ್ಲಗಳೆದಿದ್ದಾರೆ.

  MORE
  GALLERIES

 • 25

  ಚನ್ನಪಟ್ಟಣ ಬಳಿ ಸಂಸದರ ಕಾರು ಅಪಘಾತಕ್ಕೊಳಗಾಯಿತೇ? ಏನಾಯ್ತು ಎಂದು ತಿಳಿಸಿದ Pratap Simha

  ಕಾರ್ ನಲ್ಲಿದ್ದ ಕುಟುಂಬದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪ್ರತಾಪ್ ಸಿಂಹ ಅಲ್ಲೇ ಇದ್ದ ಹೋಟೆಲ್ ನಲ್ಲಿ ಊಟ ಮಾಡ್ತಿದ್ದರು. ಈ ಹಿನ್ನೆಲೆ ಅವರ ಕಾರು ಅಪಘಾತಕ್ಕೊಳಗಾಗಿದೆ ಎಂಬ ವದಂತಿ ಹಬ್ಬರಿತ್ತು. (ಪ್ರಾತಿನಿಧಿಕ ಚಿತ್ರ)

  MORE
  GALLERIES

 • 35

  ಚನ್ನಪಟ್ಟಣ ಬಳಿ ಸಂಸದರ ಕಾರು ಅಪಘಾತಕ್ಕೊಳಗಾಯಿತೇ? ಏನಾಯ್ತು ಎಂದು ತಿಳಿಸಿದ Pratap Simha

  ವಿಡಿಯೋ ಮೂಲಕ ಕಾರು ಅಪಘಾತದ ಬಗ್ಗೆ ಸಂಸದ ಪ್ರತಾಪ್ ಸಿಂಹ ಸ್ಪಷ್ಟನೆ ನೀಡಿದ್ದಾರೆ. ಚನ್ನಪಟ್ಟಣದ ಹೋಟೆಲ್ ನಲ್ಲಿ ಊಟ ಮಾಡ್ತಿದ್ದೆವು. ಆಗ ಇನೋವಾ ಕಾರ್ ನ ಟೈಯರ್ ಬಸ್ಟ್ ಆಗಿ ಪಲ್ಟಿಯಾಯ್ತು. ಆದರೆ ಬೆಂಗಳೂರು - ಮೈಸೂರು ಹೆದ್ದಾರಿಯಲ್ಲಿ ಯಾರು ವಾಹನಗಳನ್ನ ನಿಲ್ಲಿಸಲಿಲ್ಲ. ಆಗ ಹೋಟೆಲ್ ನಲ್ಲಿ ಊಟ ಮಾಡ್ತಿದ್ದ ನಾವು ಓಡಿ ಹೋದೆವು.

  MORE
  GALLERIES

 • 45

  ಚನ್ನಪಟ್ಟಣ ಬಳಿ ಸಂಸದರ ಕಾರು ಅಪಘಾತಕ್ಕೊಳಗಾಯಿತೇ? ಏನಾಯ್ತು ಎಂದು ತಿಳಿಸಿದ Pratap Simha

  ಕೇರಳದಿಂದ ಬರುತ್ತಿದ್ದ ಕುಟುಂಬ ಸುರಕ್ಷಿತವಾಗಿದೆ. ತಕ್ಷಣ ಬಾಡಿಗೆ ಕಾರಿನಲ್ಲಿ ಅವರನ್ನ ಬೆಂಗಳೂರಿಗೆ ಕಳುಹಿಸಲಾಯಿತು. ದೊಡ್ಡಮಟ್ಟದ ಅಪಘಾತ ಆಗಿರಲಿಲ್ಲ, ಕುಟುಂಬಸ್ಥರು ತುಂಬಾನೇ ಭಯಗೊಂಡಿದ್ದರು. ಈ ರೀತಿ ಅಪಘಾತವಾದಾಗ ಸಾರ್ವಜನಿಕರು ಸ್ಪಂದಿಸಬೇಕು ಎಂದರು.

  MORE
  GALLERIES

 • 55

  ಚನ್ನಪಟ್ಟಣ ಬಳಿ ಸಂಸದರ ಕಾರು ಅಪಘಾತಕ್ಕೊಳಗಾಯಿತೇ? ಏನಾಯ್ತು ಎಂದು ತಿಳಿಸಿದ Pratap Simha

  ಜನ ಕನ್ಫೂಸ್ ಮಾಡಿಕೊಂಡು ನನಗೆ ಕಾಲ್ ಮಾಡ್ತಿದ್ದಾರೆ. ನನ್ನ ಕಾರು ಅಪಘಾತವಾಗಿಲ್ಲ, ನಾನು ಸುರಕ್ಷಿತವಾಗಿದ್ದೇನೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು.

  MORE
  GALLERIES