Yadagiri: ಆಲಿಕಲ್ಲು ಮಳೆಗೆ ತತ್ತರಿಸಿದ ಅನ್ನದಾತ; ನೆಲ ಕಚ್ಚಿದ ಮೆಣಸಿನಕಾಯಿ, ಪಪ್ಪಾಯ, ಭತ್ತದ ಬೆಳೆ

ಆಲಿಕಲ್ಲು ಮಳೆ ಸುರಿದ ಪರಿಣಾಮ ಅಪಾರ ಪ್ರಮಾಣದ ಮೆಣಸಿನಕಾಯಿ ಬೆಳೆ ಹಾನಿಯಾಗಿದೆ. ಬೆಳೆಹಾನಿ ಪ್ರದೇಶಕ್ಕೆ ಶಹಾಪುರ ಶಾಸಕ ಶರಣಬಸ್ಸಪ್ಪಗೌಡ ದರ್ಶನಾಪುರ, ಜಿಲ್ಲಾಧಿಕಾರಿ ಡಿಸಿ ಸ್ನೇಹಲ್ ಆರ್ ಭೇಟಿ ನೀಡಿ ಬೆಳೆ ಹಾನಿ ಪರಿಶೀಲನೆ ಮಾಡಿದ್ದಾರೆ.

First published:

  • 17

    Yadagiri: ಆಲಿಕಲ್ಲು ಮಳೆಗೆ ತತ್ತರಿಸಿದ ಅನ್ನದಾತ; ನೆಲ ಕಚ್ಚಿದ ಮೆಣಸಿನಕಾಯಿ, ಪಪ್ಪಾಯ, ಭತ್ತದ ಬೆಳೆ

    ಯಾದಗಿರಿ: ಬಿಸಿಲಿನ ಧಗೆಗೆ ಜನರು ತತ್ತರಿಸಿ ಹೋಗಿದ್ದರು. ಆದರೆ ಬೇಸಿಗೆ ಆರಂಭದಲ್ಲಿಯೇ ವರುಣ ದೇವ ಭಾರೀ ಅವಾಂತರ ಮಾಡಿದ್ದಾನೆ. ಆಲಿಕಲ್ಲು ಮಳೆಗೆ ಅನ್ನದಾತರು ಈಗ ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ. ಬೃಹತ್ ಗಾತ್ರದ ಆಲಿಕಲ್ಲುಗಳು ಧರೆಗುರುಳಿದ್ದ ಪರಿಣಾಮ ಅಪಾರ ಪ್ರಮಾಣದ ಬೆಳೆ ನೀರು ಪಾಲಾಗಿದೆ.

    MORE
    GALLERIES

  • 27

    Yadagiri: ಆಲಿಕಲ್ಲು ಮಳೆಗೆ ತತ್ತರಿಸಿದ ಅನ್ನದಾತ; ನೆಲ ಕಚ್ಚಿದ ಮೆಣಸಿನಕಾಯಿ, ಪಪ್ಪಾಯ, ಭತ್ತದ ಬೆಳೆ

    ಹವಾಮಾನ ವೈಪರಿತ್ಯದಿಂದಾಗಿ ರಾಜ್ಯದ ಹಲವೆಡೆ ವರುಣನ ಆರ್ಭಟ ಶುರುವಾಗಿದೆ. ನಿನ್ನೆ ತಡರಾತ್ರಿ ಹಾಗೂ ಬೆಳಗಿನ ಜಾವ ಯಾದಗಿರಿ ಯಲ್ಲಿ ಆಲಿಕಲ್ಲು ಸಹಿತ ಮಳೆಯಾಗಿದೆ.ಯಾದಗಿರಿ ನಗರದಲ್ಲಿ ವರುಣನ ಆರ್ಭಟಕ್ಕೆ ರಸ್ತೆಗಳು ಜಲಾವೃತಗೊಂಡಿವೆ. ನಗರದ ರೈಲ್ವೆ ನಿಲ್ದಾಣ ರಸ್ತೆ ಜಲಾವೃತ ಗೊಂಡಿದ್ದು ವಾಹನ ಸವಾರರು ಪರದಾಡುವಂತಾಗಿತ್ತು.

    MORE
    GALLERIES

  • 37

    Yadagiri: ಆಲಿಕಲ್ಲು ಮಳೆಗೆ ತತ್ತರಿಸಿದ ಅನ್ನದಾತ; ನೆಲ ಕಚ್ಚಿದ ಮೆಣಸಿನಕಾಯಿ, ಪಪ್ಪಾಯ, ಭತ್ತದ ಬೆಳೆ

    ಜಿಲ್ಲೆಯ ಗೋಡಿಹಾಳ ಗ್ರಾಮ ಸೇರಿದಂತೆ ಹಲವುಕಡೆ ಮರಗಳು ಧರೆಗುರುಳಿವೆ, ವಡಗೇರಾ ತಾಲೂಕಿನ ಗೋಡಿಹಾಳ ಗ್ರಾಮದಲ್ಲಿ ಭೀಮರಾಯ ಎಂಬುವರಿಗೆ ಸೇರಿದ ದನದ ಕೊಟ್ಟಿಗೆ ಕುಸಿತ ಗೊಂಡಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ.

    MORE
    GALLERIES

  • 47

    Yadagiri: ಆಲಿಕಲ್ಲು ಮಳೆಗೆ ತತ್ತರಿಸಿದ ಅನ್ನದಾತ; ನೆಲ ಕಚ್ಚಿದ ಮೆಣಸಿನಕಾಯಿ, ಪಪ್ಪಾಯ, ಭತ್ತದ ಬೆಳೆ

    ಹಲವು ಭಾಗದಲ್ಲಿ ಆಲಿಕಲ್ಲು ಮಳೆ ಯಾಗಿದ್ದು ಸಣ್ಣ ಸಣ್ಣ ಉಂಡೆಗಳಂತೆ ಧರೆಗೆ ಅಪ್ಪಳಿಸಿದೆ. ಇದರಿಂದದಾಗಿ ವಡಗೇರಾ ತಾಲೂಕಿನ ಗುಂಡಗುರ್ತಿ, ಗೋಡಿಹಾಳ ಭಾಗದಲ್ಲಿ ಲಕ್ಷಾಂತರ ಬೆಲೆ ಬಾಳುವ ಮೆಣಸಿನಕಾಯಿ ಬೆಳೆ ಹಾನಿಯಾಗಿದೆ. ಮತ್ತೊಂದು ಕಡೆ ಭತ್ತದ ಬೆಳೆ ನೆಲಕ್ಕಚ್ಚಿದೆ.

    MORE
    GALLERIES

  • 57

    Yadagiri: ಆಲಿಕಲ್ಲು ಮಳೆಗೆ ತತ್ತರಿಸಿದ ಅನ್ನದಾತ; ನೆಲ ಕಚ್ಚಿದ ಮೆಣಸಿನಕಾಯಿ, ಪಪ್ಪಾಯ, ಭತ್ತದ ಬೆಳೆ

    ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಹಳಿಸಗರ ಗ್ರಾಮದಲ್ಲಿ ಆಲಿಕಲ್ಲು ಮಳೆ ಹಿನ್ನಲೆ ಹಲವೆಡೆ ರೈತರು ಬೆಳೆದ ಅಪಾರ ಪ್ರಮಾಣದ ಪಪ್ಪಾಯಿ ಬೆಳೆ ಹಾನಿಯಾಗಿದೆ. ಶಹಾಪುರದ ಪಟ್ಟಣ ಸುತ್ತ ಮುತ್ತಲಿನಲ್ಲಿ‌ ಭಾರೀ ಪ್ರಮಾಣದ ಆಲಿಕಲ್ಲು ಧರೆಗುರುಳಿದ್ದು, ಕೆಲ ಸಮಯ ಮಿನಿ ಕಾಶ್ಮೀರದಂತೆ ಪರಿವರ್ತನೆಯಾಗಿತ್ತು.

    MORE
    GALLERIES

  • 67

    Yadagiri: ಆಲಿಕಲ್ಲು ಮಳೆಗೆ ತತ್ತರಿಸಿದ ಅನ್ನದಾತ; ನೆಲ ಕಚ್ಚಿದ ಮೆಣಸಿನಕಾಯಿ, ಪಪ್ಪಾಯ, ಭತ್ತದ ಬೆಳೆ

    ಬೆನಕನಹಳ್ಳಿಯಲ್ಲಿ ಆಲಿಕಲ್ಲು ಮಳೆ ಸುರಿದ ಪರಿಣಾಮ ಅಪಾರ ಪ್ರಮಾಣದ ಮೆಣಸಿನಕಾಯಿ ಬೆಳೆ ಹಾನಿಯಾಗಿದೆ. ಬೆಳೆಹಾನಿ ಪ್ರದೇಶಕ್ಕೆ ಶಹಾಪುರ ಶಾಸಕ ಶರಣಬಸ್ಸಪ್ಪಗೌಡ ದರ್ಶನಾಪುರ, ಜಿಲ್ಲಾಧಿಕಾರಿ ಡಿಸಿ ಸ್ನೇಹಲ್ ಆರ್ ಭೇಟಿ ನೀಡಿ ಬೆಳೆ ಹಾನಿ ಪರಿಶೀಲನೆ ಮಾಡಿದ್ದಾರೆ.

    MORE
    GALLERIES

  • 77

    Yadagiri: ಆಲಿಕಲ್ಲು ಮಳೆಗೆ ತತ್ತರಿಸಿದ ಅನ್ನದಾತ; ನೆಲ ಕಚ್ಚಿದ ಮೆಣಸಿನಕಾಯಿ, ಪಪ್ಪಾಯ, ಭತ್ತದ ಬೆಳೆ

    ಅಕಾಲಿಕ ಮಳೆಯಿಂದಾಗಿ ಅಕ್ಷರಶಃ ಯಾದಗಿರಿ ಜನತೆ ತತ್ತರಿಸಿದ್ದು, ಮತ್ತೆ ರೈತಾಪಿ ವರ್ಗಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಬೆಳೆದ ಬೆಳೆ ರೈತರ ಕೈಗೆ ಬಾರದಂತಾಗಿದೆ.

    MORE
    GALLERIES