PHOTOS: ಕಾಫಿನಾಡಿನಲ್ಲಿ ವರುಣನ ಅಬ್ಬರ; ರಸ್ತೆಗಳು ಕುಸಿತ, ಆತಂಕದಲ್ಲಿ ಮಲೆನಾಡಿಗರು

ಮಲೆನಾಡಲ್ಲಿ ಕಳೆದೊಂದು ತಿಂಗಳಿಂದ ಬಿಡುವು ನೀಡಿದ್ದ ವರುಣದೇವ ಮತ್ತೆ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾನೆ. ಪುನರ್ವಸು, ಆಶ್ಲೇಷ ಹಾಗೂ ಕುಂಭದ್ರೋಣ ಮಳೆಯಿಂದ ಕಂಗಾಲಾಗಿದ್ದ ಮಲೆನಾಡಿಗರೀಗ ರಾತ್ರಿ ಮಳೆಯಿಂದ ಮತ್ತಷ್ಟು ಆತಂಕಕ್ಕೀಡಾಗಿದ್ದಾರೆ. ಕಳೆದ ರಾತ್ರಿಯ ಧಾರಾಕಾರ ಮಳೆಗೆ ಮನೆ ಕುಸಿದು ವ್ಯಕ್ತಿಯೋರ್ವ ಸಾವನ್ನಪ್ಪಿದರೆ, ಹತ್ತಾರು ಹಳ್ಳಿಗೆ ಸಂಪರ್ಕ ಕಲ್ಪಿಸುವ ಸೇತುವೆಯೇ ಕುಸಿದಿದೆ. ರಸ್ತೆಗಳು ಕುಸಿದಿದ್ದು, ರಸ್ತೆ ಸಂಪರ್ಕ ಸಂಪೂರ್ಣ ಸ್ಥಗಿತಗೊಂಡಿದೆ. ಮಳೆಯೊಂದಿಗೆ ಬೀಸುತ್ತಿರುವ ರಣ ಗಾಳಿಗೆ ಬಾಳೆ ತೋಟವು ನಾಶವಾಗಿದೆ. ಮಲೆನಾಡಿನಾದ್ಯಂತ ಮೋಡ ಕವಿದ ವಾತಾವರಣವಿದ್ದು, ಮತ್ತಿನ್ನೇನು ಅನಾಹುತ ಸಂಭವಿಸುತ್ತದೋ ಎಂದು ಮಲೆನಾಡಿಗರು ಚಿಂತಾಕ್ರಾಂತರಾಗಿದ್ದಾರೆ.

  • News18
  • |
First published: