PHOTOS: ಸಿಲಿಕಾನ್ ಸಿಟಿಯಲ್ಲಿ ಭಾರೀ ಮಳೆ; ಜನಜೀವನ ಅಸ್ತವ್ಯಸ್ತ
ರಾಜಧಾನಿಯಲ್ಲಿ ಇವತ್ತು ಭಾರೀ ಮಳೆಯಾಗಿದೆ. ಗಾಂಧಿನಗರ, ಕಾರ್ಪೊರೇಷನ್, ಕೆಆರ್ ಮಾರ್ಕೆಟ್, ಎಂಜಿ ರಸ್ತೆ, ನೀಲಸಂದ್ರ, ಶಿವಾಜಿನಗರ, ಮಹಾಲಕ್ಷ್ಮೀ ಲೇಔಟ್, ರಾಜಾಜಿನಗರ, ಕೋರಮಂಗಲ, ಶೇಷಾದ್ರಿಪುರಂ ಸೇರಿದಂತೆ ಬೆಂಗಳೂರಿನ ಬಹುಭಾಗದಲ್ಲಿ ಗುಡುಗು, ಗಾಳಿ ಸಹಿತ ಮಳೆಯಾಗಿದೆ. ಶಾಂತಿನಗರ ಮೊದಲಾದ ಪ್ರದೇಶಗಳು ಜಲಾವೃತಗೊಂಡಿವೆ. ಇಡೀ ಮಳೆ ಗಾಳಿಯ ರಭಸಕ್ಕೆ ನಗರದ ಹಲವೆಡೆ ಮರಗಳು ಧರೆಗುರುಳಿವೆ. ರೇಸ್ಕೋರ್ಸ್ ಸರ್ಕಲ್ನಲ್ಲಿ ಆಟೋಗಳು ಪಾರ್ಕ್ ಮಾಡಿದ್ದ ಸ್ಥಳದಲ್ಲಿ ಮರವೊಂದು ಬಿದ್ದು 3 ಆಟೋಗಳು ಜಖಂಗೊಂಡಿವೆ.