ಬಿಸಿಲ ಬೇಗೆಯಲ್ಲಿ ಚುನಾವಣಾ ಪ್ರಚಾರದಿಂದ ಕಾವು ಪಡೆದಿದ್ದ ಮಲೆನಾಡಿಗೆ ಮತದಾನದಂದು ಮಳೆರಾಯ ತಂಪೆರೆದಿದ್ದಾನೆ. ಬಿಸಿಲ ಝಳಕ್ಕೆ ತತ್ತರಿಸಿದ್ದ ಶಿವಮೊಗ್ಗ, ಭದ್ರಾವತಿ, ಉತ್ತರ ಕನ್ನಡದ ಹಲವೆಡೆ ಇಂದು ಮಧ್ಯಾಹ್ನ ವರುಣ ಸಿಂಚನವಾಗಿದೆ. ಮತದಾನದ ಮಧ್ಯಾಹ್ನ ಸುರಿದ ಮಳೆಗೆ ಹಲವೆಡೆ ಮತದಾನಕ್ಕೆ ಅಡ್ಡಿಯಾಗಿದೆ. ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಹಾಗೂ ಶಿರಸಿಯಲ್ಲಿ ಮಳೆಯ ಆರ್ಭಟ ತೋರಿದ್ದಾನೆ. ಗುಡುಗು ಸಹಿತ ಸುರಿದ ಭಾರೀ ಮಳೆಯಿಂದ ಮತದಾನಕ್ಕೆ ಅಡ್ಡಿಯಾಗಿದೆ. ಮತದಾನ ಮುಕ್ತಾಯಕ್ಕೆ ಕೆಲವೇ ಗಂಟೆಗಳಿರುವಾಗ ಮಳೆಯಾಗಿದೆ. ಕೆಲವು ಚಿತ್ರಗಳು ನ್ಯೂಸ್ 18 ಕನ್ನಡದಲ್ಲಿ