Karnataka Rains: ಮುಂದಿನ 24 ಗಂಟೆ ಈ ಭಾಗದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ವರುಣನ ಅಬ್ಬರ; ಗುಡುಗು, ಬಿರುಗಾಳಿ ಸಹಿತ ಮಳೆ

Summer Rain In Karnataka: ಕಳೆದೊಂದು ವಾರದಲ್ಲಿ ಮಳೆರಾಯನ ಅಬ್ಬರ ಶುರುವಾಗಿದೆ. ಕೋಲಾರ ಸೇರಿದಂತೆ ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಅಕಾಲಿಕ ಮಳೆಯಾಗುತ್ತಿದ್ದು, ಬೆಳೆ ನಾಶವಾಗಿದೆ. ಉತ್ತರ ಕರ್ನಾಟಕದ ಬೀದರ್. ಕಲಬುರಗಿಯಲ್ಲಿ ಆಲಿಕಲ್ಲು ಮಳೆಯಾಗಿದೆ.

First published:

  • 17

    Karnataka Rains: ಮುಂದಿನ 24 ಗಂಟೆ ಈ ಭಾಗದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ವರುಣನ ಅಬ್ಬರ; ಗುಡುಗು, ಬಿರುಗಾಳಿ ಸಹಿತ ಮಳೆ

    ಮುಂದಿನ 24 ಗಂಟೆ ರಾಜ್ಯದ ಹಲವೆಡೆ  ಬಿರುಗಾಳಿ- ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಕರಾವಳಿಯಲ್ಲಿ ಮಳೆಯಾಗುವ ಸಾಧ್ಯತೆಗಳಿವೆ.

    MORE
    GALLERIES

  • 27

    Karnataka Rains: ಮುಂದಿನ 24 ಗಂಟೆ ಈ ಭಾಗದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ವರುಣನ ಅಬ್ಬರ; ಗುಡುಗು, ಬಿರುಗಾಳಿ ಸಹಿತ ಮಳೆ

    ಮುಂದಿನ 48 ಗಂಟೆಗಳಲ್ಲಿ ದಕ್ಷಿಣ ಒಳನಾಡಿನ ಕೆಲವು ಭಾಗಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ. ಉತ್ತರ ಒಳನಾಡಿನಲ್ಲಿ ಭಾಗಶಃ ಒಣಹವೆ ಇರಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    Karnataka Rains: ಮುಂದಿನ 24 ಗಂಟೆ ಈ ಭಾಗದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ವರುಣನ ಅಬ್ಬರ; ಗುಡುಗು, ಬಿರುಗಾಳಿ ಸಹಿತ ಮಳೆ

    ಕಳೆದ‌ ಎರಡು ದಿನಗಳಿಂದ ರಾಜ್ಯದ ಹಲವೆಡೆ ಬಿರುಗಳಿ ಸಹಿತ ಮಳೆ ದಾಖಲು ಆಗಲಿದೆ. ರಾಜಧಾನಿ ಬೆಂಗಳೂರಿನಲ್ಲಿ ಇನ್ನೆರಡು ದಿನ ಮಳೆಯಾಗಲಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    Karnataka Rains: ಮುಂದಿನ 24 ಗಂಟೆ ಈ ಭಾಗದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ವರುಣನ ಅಬ್ಬರ; ಗುಡುಗು, ಬಿರುಗಾಳಿ ಸಹಿತ ಮಳೆ

    ಕಳೆದೆರಡು ದಿನದಿಂದ ರಾಜಧಾನಿಯಲ್ಲಿ ಮಳೆಯ ಸಿಂಚನ ಆಗುತ್ತಿದ್ದು, ರಾಜಧಾನಿ ಕೂಲ್ ಕೂಲ್ ಆಗಿದೆ. ಇನ್ನೆರಡು ದಿನ ಬೆಳಗ್ಗೆ ಹಾಗೂ ಸಂಜೆ ರಾಜಧಾನಿಯಲ್ಲಿ ಗುಡುಗು ಸಹಿತ ಮಳೆಯಾಗಲಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    Karnataka Rains: ಮುಂದಿನ 24 ಗಂಟೆ ಈ ಭಾಗದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ವರುಣನ ಅಬ್ಬರ; ಗುಡುಗು, ಬಿರುಗಾಳಿ ಸಹಿತ ಮಳೆ

    ಕಲೆವೆಡೆ ಬೆಳಗ್ಗೆ ಮೋಡ ಕವಿದ ವಾತಾವರಣವಿದ್ದು, ಮಹದೇವಪುರ ವಲಯದಲ್ಲಿ ಹೆಚ್ಚು ಮಳೆಯಾಗಲಿದೆ. ವೈಟ್ ಫೀಲ್ಡ್, ವರ್ತೂರು, ಕಾಡುಗೋಡಿ, ಸರ್ಜಾಪುರ, ಮಾರತಳ್ಳಿ, ಕೆ ಆರ್ ಪುರ ಕಡೆ ಇಂದು ಮಳೆಯಾಗಲಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    Karnataka Rains: ಮುಂದಿನ 24 ಗಂಟೆ ಈ ಭಾಗದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ವರುಣನ ಅಬ್ಬರ; ಗುಡುಗು, ಬಿರುಗಾಳಿ ಸಹಿತ ಮಳೆ

    ಯಾದಗಿರಿಯಲ್ಲಿ ಭಾರಿ ಮಳೆಗೆ ಸಿಡಿಲು ಬಡಿದು ಆರು ಕುರಿಗಳು ಸಾವನ್ನಪ್ಪಿವೆ. ಮುಷ್ಠಳ್ಳಿ ಗ್ರಾಮದ ಬಸಪ್ಪ ಎಂಬವರಿಗೆ ಸೇರಿದ ಸುಮಾರು ಒಂದು ಲಕ್ಷ ಮೌಲ್ಯದ ಕುರಿಗಳು ಮೃತಪಟ್ಟಿದ್ದು, ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Karnataka Rains: ಮುಂದಿನ 24 ಗಂಟೆ ಈ ಭಾಗದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ವರುಣನ ಅಬ್ಬರ; ಗುಡುಗು, ಬಿರುಗಾಳಿ ಸಹಿತ ಮಳೆ

    ಬಳ್ಳಾರಿಯಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆಯಾಗಿದ್ದು ಜನ-ಜೀವನ ಅಸ್ತವ್ಯಸ್ತವಾಗಿದೆ. ಮಳೆ ಅಬ್ಬರಕ್ಕೆ ಭಾರಿ ಪ್ರಮಾಣದಲ್ಲಿ ಮೆಣಸಿನಕಾಯಿ ಬೆಳೆ ನಷ್ಟವಾಗಿದ್ದು ರೈತರು ಕಂಗಾಲಾಗಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES