Karnataka Rains: ರಾಜ್ಯದಲ್ಲಿ ಇಂದು, ನಾಳೆ ಮಳೆಯ ಮುನ್ಸೂಚನೆ

ರಾಜ್ಯದಲ್ಲಿ ಇಂದು ಮತ್ತು ನಾಳೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಹಗುರ ಮಳೆಯಾಗುತ್ತಿದೆ.

First published:

  • 17

    Karnataka Rains: ರಾಜ್ಯದಲ್ಲಿ ಇಂದು, ನಾಳೆ ಮಳೆಯ ಮುನ್ಸೂಚನೆ

    ಇಂದು ಕರಾವಳಿಯ ಎಲ್ಲಾ ಭಾಗದಲ್ಲಿ ವರುಣ ದೇವ ಅಬ್ಬರಿಸಲಿದ್ದಾನೆ. ದಕ್ಷಿಣ ಒಳನಾಡಿನ ಕೊಡಗು, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಗಳಿವೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    Karnataka Rains: ರಾಜ್ಯದಲ್ಲಿ ಇಂದು, ನಾಳೆ ಮಳೆಯ ಮುನ್ಸೂಚನೆ

    ಇನ್ನು ಉತ್ತರ ಒಳನಾಡಿನಲ್ಲಿ ಗರಿಷ್ಠ 30 ರಿಂದ 35 ಡಿಗ್ರಿ ಸೆಲ್ಸಿಯಸ್​ನಷ್ಟು ತಾಪಮಾನ ದಾಖಲಾಗುತ್ತಿದೆ. ಇದರ ಜೊತೆಯಲ್ಲಿಯೇ ಇಂದು ಮತ್ತು ನಾಳೆ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    Karnataka Rains: ರಾಜ್ಯದಲ್ಲಿ ಇಂದು, ನಾಳೆ ಮಳೆಯ ಮುನ್ಸೂಚನೆ

    ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಗದಗ, ಧಾರವಾಡ, ಹಾವೇರಿ ಜಿಲ್ಲೆಯಲ್ಲಿ ಮಳೆಯಾಗಲಿದೆ. ನಾಳೆ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮಳೆಯಾಗಲಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    Karnataka Rains: ರಾಜ್ಯದಲ್ಲಿ ಇಂದು, ನಾಳೆ ಮಳೆಯ ಮುನ್ಸೂಚನೆ

    ರಾಜಧಾನಿಯಲ್ಲಿ  ಮೋಡ ಮುಸುಕಿದ ವಾತಾವರಣ ಇರಲಿದ್ದು, ಕೆಲವು ಕಡೆ ಕ್ಷೀಣ ಮಳೆಯಾಗುತ್ತಿದೆ. ಇಂದು ಬೆಂಗಳೂರಿನಲ್ಲಿ ಗರಿಷ್ಠ 33 ಮತ್ತು ಕನಿಷ್ಠ 19 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    Karnataka Rains: ರಾಜ್ಯದಲ್ಲಿ ಇಂದು, ನಾಳೆ ಮಳೆಯ ಮುನ್ಸೂಚನೆ

    ಕರ್ನಾಟಕದ ರಾಯಚೂರು, ಬಳ್ಳಾರಿ, ಕಲಬುರಗಿ ಸೇರಿದಂತೆ ಬಿಸಿಲು ಏರಿಕೆಯಾಗುತ್ತಿದ್ದು, ಬೆಳಗ್ಗೆ 9 ಗಂಟೆ ನಂತರ ಮನೆಯಿಂದ ಹೊರಗೆ ಬರಲು ಜನರು ಹಿಂದೇಟು ಹಾಕುತ್ತಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    Karnataka Rains: ರಾಜ್ಯದಲ್ಲಿ ಇಂದು, ನಾಳೆ ಮಳೆಯ ಮುನ್ಸೂಚನೆ

    ಮುಂದಿನ ನಾಲ್ಕೈದು ದಿನ ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ಉಷ್ಣಾಂಶ 3 ರಿಂದ 4 ಡಿಗ್ರಿ ಸೆಲ್ಸಿಯಸ್​ ವರೆಗೆ ಏರಿಕೆಯಾಗಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಸಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Karnataka Rains: ರಾಜ್ಯದಲ್ಲಿ ಇಂದು, ನಾಳೆ ಮಳೆಯ ಮುನ್ಸೂಚನೆ

    ಆಂಧ್ರ ಪ್ರದೇಶ, ಚೆನ್ನೈ ಮತ್ತು ಕನ್ಯಾಕುಮಾರಿ ಕಡಲ ತೀರಗಳಲ್ಲಿ ಗಾಳಿಯ ವೇಗ ಕೊಂಚ ಹೆಚ್ಚಾಗಲಿದೆ. ಇಂದು ಮತ್ತು ನಾಳೆ ಸಾಧಾರಣ ಮಳೆಯಾಗುವ ಸಾಧ್ಯತೆಗಳಿವೆ. (ಸಾಂದರ್ಭಿಕ ಚಿತ್ರ)

    MORE
    GALLERIES