ಈ ಹಿಂದೆ 2017ರಲ್ಲಿ 170 ಮಿ. ಮೀ. ಮಳೆಯಾಗುವ ಮೂಲಕ ದಾಖಲೆ ಸೃಷ್ಟಿಯಾಗಿತ್ತು. ಇದೀಗ 5 ವರ್ಷದ ಬಳಿಕ ಮತ್ತೆ ಸಿಲಿಕಾನ್ ಸಿಟಿಯಲ್ಲಿ ಭಾರಿ ಮಳೆಯಾಗಿದ್ದು, ಈ ವರ್ಷ ಇಲ್ಲಿಯವರೆಗೆ 166 ಮಿ. ಮೀ ಮಳೆಯಾಗಿದೆ.
2/ 9
2011ರಲ್ಲಿ 110 ಮಿ. ಮೀ ಮಳೆ ಸುರಿದು ದಾಖಲೆ ಬರೆದಿತ್ತು. ಆದರೆ ನಿನ್ನೆ ಒಂದೇ ದಿನ 11 ಮಿ. ಮೀ ಮಳೆ ಸುರಿದಿದೆ.
3/ 9
ಮುಂದಿನ 5 ದಿನ ಬೆಂಗಳೂರಿನಲ್ಲಿ ಭಾರಿ ಮಳೆಯಾಗಲಿದೆ. ಈ ನಿಟ್ಟಿನಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
4/ 9
ರಾತ್ರಿಯಿಡಿ ಮಳೆಯ ಆರ್ಭಟ ಜೋರಾಗಿರಲಿದೆ. ಇಂದು ನಾಳೆ ಮಳೆ ಸುರಿದರೆ ದಾಖಲೆ ಸೃಷ್ಟಿಯಾಗುವ ಸಾಧ್ಯತೆ ಇದೆ.
5/ 9
ಸಂಜೆಯಾಗ್ತಿದ್ದಂತೆ ನಿತ್ಯ ಸುರಿಯೋ ಮಳೆಗೆ ಸಿಲುಕಿ ಜನರು ನಿತ್ಯ ಪರದಾಡುವಂತಾಗಿದೆ. ರಾಜಧಾನಿಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ವಾಹನ ಸಂಚಾರಕ್ಕೆ ಕಷ್ಟಪಡುವಂತಾಗಿದೆ.
6/ 9
ರಾಜ್ಯದ ಹಲವು ಜಿಲ್ಲೆಗಳಲ್ಲಿ ಅ. 15ರವರೆಗೆ ಭಾರೀ ಮಳೆಯಾಗಲಿದೆ. ಇಂದು ಕರ್ನಾಟಕದ ಕರಾವಳಿ, ಉತ್ತರ ಮತ್ತು ದಕ್ಷಿಣ ಒಳಭಾಗಕ್ಕೆ ಹವಾಮಾನ ಇಲಾಖೆ ಹಳದಿ ಅಲರ್ಟ್ ಘೋಷಿಸಲಾಗಿದೆ.
7/ 9
ರಾಜ್ಯದಲ್ಲಿ ಮಳೆಯ ಅಬ್ಬರ ಮತ್ತೆ ಹೆಚ್ಚಾಗಿದ್ದು, ಜನರು ಮಳೆಯಿಂದ ಬೇಸತ್ತಿದ್ದಾರೆ. ವಿವಿಧ ಪ್ರದೇಶಗಳಲ್ಲಿ ಅವಾಂತರಗಳು ಸೃಷ್ಟಿಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
8/ 9
ಇಂದು ಕೂಡ ಬೆಂಗಳೂರಿನಲ್ಲಿ ಮಳೆಯ ಅಬ್ಬರ ಶುರುವಾಗಿದ್ದು, ನಗರದ ಶಾಂತಿನಗರ, ಕೆಆರ್ ಮಾರ್ಕೆಟ್, ಡಬಲ್ ರೋಡ್, ಕಾರ್ಪೋರೇಷನ್, ಮೈಸೂರ್ ಬ್ಯಾಂಕ್ ಸರ್ಕಲ್, ಜಯನಗರ, ಬಸವನಗುಡಿ, ಶಾಂತಿನಗರ, ರಿಚ್ಮಂಡ್ ಟೌನ್ ಬಳಿ ಜೋರು ಮಳೆಯಾಗುತ್ತಿದೆ.
9/ 9
ನಗರದ ಹಲವೆಡೆ ಮಳೆ ಆರಂಭವಾಗಿದ್ದು, ಬಸ್ ನಿಲ್ದಾಣ, ಫ್ಲೈ ಓವರ್ ಕೆಳಗಡೆ ಜನರು ಆಶ್ರಯ ಪಡೆಯುವಂತ್ತಾಗಿದೆ.