Karnataka Rains: ಮುಂದಿನ ಮೂರು ದಿನ ಮಳೆ ;13 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್
ರಾಜ್ಯದಲ್ಲಿ ಮುಂದಿನ ಮೂರು ದಿನ ಮಳೆಯಾಗಲಿದ್ದು, ಹವಾಮಾನ ಇಲಾಖೆ 13 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ. ಇನ್ನುಳಿದ ಜಿಲ್ಲೆಗಳಲ್ಲಿಯೂ ಸಾಧಾರಣ ಮಳೆ ಜೊತೆ ಮೋಡ ಕವಿದ ವಾತಾವರಣ ನಿರ್ಮಾಣವಾಗಿರಲಿದೆ.
ಶುಕ್ರವಾರ ರಾತ್ರಿಯಿಂದಲೇ ರಾಜಧಾನಿ ಬೆಂಗಳೂರು ಸೇರಿದಂತೆ ಮೈಸೂರು ಭಾಗದಲ್ಲಿ ಮಳೆಯಾಗುತ್ತಿದೆ. ಶುಕ್ರವಾರ ರಾತ್ರಿ ಸುರಿದ ಮಳೆಗೆ ಬೆಂಗಳೂರು ಪೂರ್ವ ಭಾಗದಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ಥವಾಗಿದೆ.
2/ 8
ದಕ್ಷಿಣ ಕನ್ನಡ, ಕೊಡಗು, ತುಮಕೂರು, ಚಾಮರಾಜನಗರ, ಚಿಕ್ಕಬಳ್ಳಾಪುರ, ಉಡುಪಿ, ಯಾದಗಿರಿ ಮತ್ತು ಹಾಸನ ಜಿಲ್ಲೆಗಳಲ್ಲಿ ಕಳೆದ ಎರಡು ದಿನದಿಂದ ಮಳೆಯಾಗುತ್ತಿದೆ.
3/ 8
ಇಂದಿನಿಂದ ಜೂನ್ 22ರವರೆಗೆ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ ಮತ್ತು ಕೊಡಗು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಗಳಿವೆ. ಈ ಹಿನ್ನೆಲೆ ಹವಾಮಾನ ಇಲಾಖೆ ಯೆಲ್ಲೊ ಅಲರ್ಟ್ ಜಾರಿ ಮಾಡಿದೆ.
4/ 8
ಜೂನ್ 1 ರಿಂದ 18ರವರೆಗೆ ವಾಡಿಕೆ ಪ್ರಕಾರ 109 ಮಿಮೀ ಮಳೆ ಆಗಬೇಕಿತ್ತು. ಆದ್ರೆ ಕೇವಲ 78 ಮಿಮೀ ಮಳೆ ಆಗಿದ್ದು, ಶೇ.28ರಷ್ಟು ಕುಂಠಿತವಾಗಿದೆ.
5/ 8
ಇನ್ನು ಕರಾವಳಿ ಶೇ.64, ಮಲೆನಾಡು ಶೇ.61, ಉತ್ತರ ಒಳನಾಡು ಶೇ.13ರಷ್ಟು ಮಳೆ ಆಗಿದೆ. ದಕ್ಷಿಣ ಒಳನಾಡಿನಲ್ಲಿ ವಾಡಿಕೆಗಿಂತ ಶೇ.100ರಷ್ಟು ಹೆಚ್ಚು ಮಳೆಯಾಗಿರುವ ವರದಿಯಾಗಿದೆ.
6/ 8
ಶನಿವಾರ ರಾತ್ರಿ ಸಹ ಬೆಂಗಳೂರಿನ ಹಲವು ಭಾಗಗಳಲ್ಲಿ ಮಳೆಯಾಗಿದೆ. ವೀಕೆಂಡ್ ಗಾಗಿ ಹೊರ ಬಂದ ಜನರು ಮಳೆಯಲ್ಲಿ ಸಿಲುಕಿ ಪರದಾಡುವಂತಾಯ್ತು.
7/ 8
ಶುಕ್ರವಾರ ಸುರಿದ ಮಳೆ ಬೆಂಗಳೂರಿನಲ್ಲಿ ಇಬ್ಬರನ್ನು ಬಲಿ ಪಡೆದುಕೊಂಡ್ರೆ, ಸಿಂಗಾಪುರದ ಕೋಡಿ ಪಡೆದು ಸಾಯಿ ಲೇಔಟ್ ಜಲಾವೃತವಾಗಿತ್ತು. ಮನೆಗಳಿಗೆ ನೀರು ನುಗ್ಗಿದ್ದರಿಂದ ಜನ ಹೊರ ಬರದೇ ಪರದಾಡುವಂತಾಯ್ತು.
8/ 8
ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿಯೂ ಮೋಡ ಕವಿದ ವಾತಾವರಣ ನಿರ್ಮಾಣವಾಗಿದ್ದು, ಚದುರಿದ ರೀತಿಯಲ್ಲಿ ಗುಡುಗು ಮಿಂಚು ಸಹಿತ ಮಳೆಯಾಗುತ್ತಿದೆ.
First published:
18