Karnataka Election 2023: ಕೂಡಲಸಂಗಮದಲ್ಲಿ ರಾಹುಲ್​ ಗಾಂಧಿ; ಲಿಂಗಾಯತ ಸಮುದಾಯವನ್ನ ಹಾಡಿ ಹೊಗಳಿದ ‘ರಾಗಾ’

ಸಂಗಮನಾಥನಿಗೆ ನಮಸ್ಕರಿಸಿ ಬಳಿಕ ಬಸವಣ್ಣನವರ ಐಕ್ಯಮಂಟಪಕ್ಕೆ ತೆರಳಿ ಕೈ ಮುಗಿದು ಪ್ರಾರ್ಥನೆ ಮಾಡಿದರು. ಐವತ್ತು ಅಡಿ ನದಿಯಾಳದಲ್ಲಿರುವ ಐಕ್ಯಮಂಟಪದ ನೂರಾರು ಮೆಟ್ಟಿಲು ರಾಹುಲ್​ ದರ್ಶನ ಪಡೆದುಕೊಂಡರು.

First published:

  • 17

    Karnataka Election 2023: ಕೂಡಲಸಂಗಮದಲ್ಲಿ ರಾಹುಲ್​ ಗಾಂಧಿ; ಲಿಂಗಾಯತ ಸಮುದಾಯವನ್ನ ಹಾಡಿ ಹೊಗಳಿದ ‘ರಾಗಾ’

    ಬಾಗಲಕೋಟೆ: ರಾಹುಲ್ ಗಾಂಧಿ ಕೂಡಲಸಂಗಮಕ್ಕೆ ಆಗಮಿಸಿ, ಬಸವಣ್ಣನವರ ಐಕ್ಯ ಮಂಟಪದ ದರ್ಶನ ಪಡೆದರು. ಬಸವ ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾದ ರಾಹುಲ್ ಗಾಂಧಿಗೆ ಸಿದ್ದರಾಮಯ್ಯ, ಎಂಬಿ ಪಾಟೀಲ್ ಸೇರಿ ಪ್ರಮುಖರು ಸಾಥ್ ನೀಡಿದ್ದರು. ಇನ್ನು, ರಾಹುಲ್ ಗಾಂಧಿ ಅವರಿಗೆ ವಿಜಯಾನಂದ ಕಾಶಪ್ಪನವರ್ ದಂಪತಿಯಿಂದ ಸನ್ಮಾನ ಮಾಡಿ ಬೆಳ್ಳಿಯ ಬಸವಣ್ಣ ಪ್ರತಿಮೆ ನೀಡಿ ಗೌರವಿಸಿದರು.

    MORE
    GALLERIES

  • 27

    Karnataka Election 2023: ಕೂಡಲಸಂಗಮದಲ್ಲಿ ರಾಹುಲ್​ ಗಾಂಧಿ; ಲಿಂಗಾಯತ ಸಮುದಾಯವನ್ನ ಹಾಡಿ ಹೊಗಳಿದ ‘ರಾಗಾ’

    ಕಾರ್ಯಕ್ರಮದ ಬಳಿಕ ದಾಸೋಹ ಭವನದಲ್ಲಿ ಪ್ರಸಾದ ಸೇವನೆ ಮಾಡಿದ್ದಾರೆ. ಆ ಬಳಿಕ ರಾಹುಲ್ ಗಾಂಧಿ, ಕೂಡಲ ಸಂಗಮದಿಂದ ರಾಹುಲ್ ಗಾಂಧಿ ಲಿಂಗಾಯತ ಮತಬೇಟೆ ಮಾಡಲಿದ್ದಾರೆ. ಕಿತ್ತೂರು ಕರ್ನಾಟಕದ ಲಿಂಗಾಯತ ಮತಬುಟ್ಟಿಗೆ ಕಾಂಗ್ರೆಸ್ ಕೈ ಹಾಕುವ ಪ್ರಯತ್ನ ಮಾಡುತ್ತಿದೆ. ಇನ್ನು ಕಾರ್ಯಕ್ರಮದಲ್ಲಿ ಮಾತಾಡಿದ ರಾಹುಲ್ ಗಾಂಧಿ, ಬಸವಣ್ಣನವರ ತತ್ವಗಳನ್ನ ಸ್ಮರಿಸಿದ್ದಾರೆ.

    MORE
    GALLERIES

  • 37

    Karnataka Election 2023: ಕೂಡಲಸಂಗಮದಲ್ಲಿ ರಾಹುಲ್​ ಗಾಂಧಿ; ಲಿಂಗಾಯತ ಸಮುದಾಯವನ್ನ ಹಾಡಿ ಹೊಗಳಿದ ‘ರಾಗಾ’

    ಕೂಡಲಸಂಗಮದಲ್ಲಿ ಸಂಗಮನಾಥನಿಗೆ ವಿಶೇಷ ಪೂಜೆ ಸಲ್ಲಿಸಿ ರಾಹುಲ್ ಗಾಂಧಿ ಆರತಿ ಬೆಳಗಿದ್ದಾರೆ. ಈ ವೇಳೆ ಅರ್ಚಕರು ರಾಹುಲ್​ ಗಾಂಧಿ ಅವರ ಹಣೆಗೆ ವಿಭೂತಿ ಹಚ್ಚಿ, ಕೊರಳಲ್ಲಿ ಮಾಲೆ ಹಾಕಿದ್ದರು. ಸಂಗಮನಾಥನಿಗೆ ನಮಸ್ಕರಿಸಿ ಬಳಿಕ ಬಸವಣ್ಣನವರ ಐಕ್ಯಮಂಟಪಕ್ಕೆ ತೆರಳಿ ಕೈ ಮುಗಿದು ಪ್ರಾರ್ಥನೆ ಮಾಡಿದರು. ಐವತ್ತು ಅಡಿ ನದಿಯಾಳದಲ್ಲಿರುವ ಐಕ್ಯಮಂಟಪದ ನೂರಾರು ಮೆಟ್ಟಿಲು ರಾಹುಲ್​ ದರ್ಶನ ಪಡೆದುಕೊಂಡರು.

    MORE
    GALLERIES

  • 47

    Karnataka Election 2023: ಕೂಡಲಸಂಗಮದಲ್ಲಿ ರಾಹುಲ್​ ಗಾಂಧಿ; ಲಿಂಗಾಯತ ಸಮುದಾಯವನ್ನ ಹಾಡಿ ಹೊಗಳಿದ ‘ರಾಗಾ’

    ಇನ್ನು, ಬಸವ ಜಯಂತಿ ಕಾರ್ಯಕ್ರಮ ಮುಗಿದ ಬಳಿಕ ರಾಹುಲ್​ ಗಾಂಧಿ ದಾಸೋಹ ಭವನಕ್ಕೆ ಆಗಮಿಸಿದ್ದರು. ದಾಸೋಹ ಭವನದಲ್ಲಿ ಅನ್ನ-ಸಾರು, ಪಾಯಿಸಾ, ಬದನೆಕಾಯಿ ಪಲ್ಯ ಸವಿದಿದ್ದಾರೆ. ರಾಹುಲ್ ಗಾಂಧಿ ಜೊತೆಗೆ ಸುಮಾರು 300 ಜನರಿಗೆ ದಾಸೋಹ ಭವನದಲ್ಲಿ ಪ್ರಸಾದ ಸ್ವೀಕರಿಸಿದರು. ಪ್ರಸಾದ ಸೇವನೆ ಬಳಿಕ ಕೂಡಲಸಂಗಮದ ನಿತ್ಯ ಉಚಿತ ದಾಸೋಹ ಭವನಕ್ಕೆ ಐದು ಸಾವಿರ ರೂಪಾಯಿ ಕಾಣಿಕೆ ನೀಡಿದರು.

    MORE
    GALLERIES

  • 57

    Karnataka Election 2023: ಕೂಡಲಸಂಗಮದಲ್ಲಿ ರಾಹುಲ್​ ಗಾಂಧಿ; ಲಿಂಗಾಯತ ಸಮುದಾಯವನ್ನ ಹಾಡಿ ಹೊಗಳಿದ ‘ರಾಗಾ’

    ಕೂಡಲಸಂಗಮಸ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಬಸವಣ್ಣ ಜಯಂತಿ ಕಾರ್ಯಕ್ರಮ ಭಾಗವಹಿಸಿದ್ದ ಖುಷಿ ತಂದಿದೆ. ಶ್ರೀಗಳು ಹಿಂದಿಯಲ್ಲಿ ಭಾಷಣ ಮಾಡಿದಕ್ಕೆ ಅವರಿಗೆ ಧನ್ಯವಾದ. ಬಸವಣ್ಣನವರು ಪ್ರಜಾಪ್ರಭವನ್ನು ಕೊಟ್ಟರು ಇದು ನಿಜ. ಈ ಸತ್ಯವನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಭಾರತದಲ್ಲಿ ಪ್ರಜಾಪ್ರಭುತ್ವ, ಸಂಸದೀಯ ವ್ಯವಸ್ಥೆ ಬರಲು ಅನುಭವ ಮಂಟಪ ಕಾರಣ. ಕತ್ತಲು ಇದ್ದಲ್ಲಿ, ಬೆಳಕು ಕಾಣಸಿಗುತ್ತದೆ. ಸಮಾಜದಲ್ಲಿ ಇರುವ ಕತ್ತಲು ಇದ್ದಾಗ ಬಸವಣ್ಣ ಬೆಳಕಾಗಿ ಬಂದರು. ಬೇರೆಯವರನ್ನು ಪ್ರಶ್ನೆ ಮಾಡೋದು ಸುಲಭ, ತನನ್ನು ತಾನು ಪ್ರಶ್ನೆ ಮಾಡೋದು ಕಷ್ಟ.

    MORE
    GALLERIES

  • 67

    Karnataka Election 2023: ಕೂಡಲಸಂಗಮದಲ್ಲಿ ರಾಹುಲ್​ ಗಾಂಧಿ; ಲಿಂಗಾಯತ ಸಮುದಾಯವನ್ನ ಹಾಡಿ ಹೊಗಳಿದ ‘ರಾಗಾ’

    ಬಸವಣ್ಣ 8ನೇ ವಯಸ್ಸಿನಲ್ಲಿ ಉಪನಯನ ನಿರಾಕರಿಸಿದರು. ಅನೇಕರು ಇದನ್ನು ತಮ್ಮನ್ನು ತಾವು ಈ ಪ್ರಶ್ನೆ ಕೇಳಿಕೊಳ್ಳಲ್ಲ. 8ನೇ ವಯಸ್ಸಿನಲ್ಲಿ ಬಸವಣ್ಣನಿಗೆ ಈ ವಿಚಾರ ಬರಲು ಹೇಗೆ ಸಾಧ್ಯವೆಂದು ಶ್ರೀ ಗಳನ್ನು ಕೇಳಿದೆ. ಬಸವಣ್ಣನವರ ತಮ್ನ ಗೆಳೆಯರು ಪರಿಸ್ಥಿತಿ ನೋಡಿ ತಿಳಿದುಕೊಂಡಿದ್ದರು. ಬಸವಣ್ಣ ಇಡೀ ಜೀವನ ತಮ್ಮನ್ನು ತಾವು ಪ್ರಶ್ನೆ ಹಾಕಿಕೊಂಡಿದ್ದರು. ಜಾತಿ, ಸಮಾಜದಲ್ಲಿ ಪ್ರಶ್ನೆ ಮಾಡಿಕೊಂಡಿದ್ದರು. ಮನಸ್ಸಿನಲ್ಲಿ ಸಿಕ್ಕ ಉತ್ತರಗಳನ್ನು ಜೀವನ ಉದ್ದಕ್ಕೂ ಬಿಡಲಿಲ್ಲ. ಅನೇಕು ಪ್ರಶ್ನೆ ಕೇಳುತ್ತಾರೆ, ಆದರೆ ಸತ್ಯವನ್ನು ಹೇಳಲ್ಲ. ಸಮಾಜದ ಮುಂದೆ ಸತ್ಯ ಹೇಳಲು ಹೆದರುತ್ತಾರೆ. ಬಸವಣ್ಣ ಪ್ರಶ್ನೆ ಕೇಳಿದರೂ, ಸಮಾಜದ ಮುಂದೆ ಇಟ್ಟರು.

    MORE
    GALLERIES

  • 77

    Karnataka Election 2023: ಕೂಡಲಸಂಗಮದಲ್ಲಿ ರಾಹುಲ್​ ಗಾಂಧಿ; ಲಿಂಗಾಯತ ಸಮುದಾಯವನ್ನ ಹಾಡಿ ಹೊಗಳಿದ ‘ರಾಗಾ’

    ಸಮಾಜದ ಮುಂದೆ ಸತ್ಯ ಹೇಳುವುದು ಅಷ್ಟು ಸುಲಭ ಇಲ್ಲ. ಬಸವಣ್ಣ ಮುಂದೆ ಇಂದು ಹೂ ಇಟ್ಟಿದ್ದೇವೆ. ಯಾವುದೇ ಬೆದರಿಕೆಗೆ ಬಸವಣ್ಣ ಹೆದಲಿಲ್ಲ, ಹೀಗಾಗಿ ಇಂದು ಗೌರವ ಸಲ್ಲಿಸುತ್ತಿದ್ದೇವೆ. ಭಯ, ಆತಂಕ ಇರುತ್ತದೆ. ಆದರೆ ನೂರಾರು ವರ್ಷಗಳ ಬಳಿಕ ಹೂ ಅರ್ಪಣೆ ಮಾಡಲ್ಲ. ಇಲ್ಲಿ ಬಂದು ಬಹಳ ಸಂತೋಷ ಆಗಿದೆ. ಶ್ರೀಗಳ ಭಾಷಣ ಹೇಳಿ ಬಸವಣ್ಣ ಯಾವ ವಿಚಾರಕ್ಕಾಗಿ ಹೋರಾಟ ಮಾಡಿದರೂ ಅದಕ್ಕಾಗಿ ‌ಶ್ರೀಗಳು ಹೋರಾಟ ಮಾಡುತ್ತಿದ್ದಾರೆ. ಇಂದು ಕಲಿಯಲು ಅನೇಕ ವಿಚಾರ ಸಿಕ್ಕಿದೆ. ಬಸವಣ್ಣ ಬಗ್ಗೆ ಪುಸ್ತಕ ಓದಿದ್ದೇನೆ, ತಿಳಿದುಕೊಂಡಿದ್ದೇನೆ. ಸತ್ಯದ ಮಾರ್ಗದಲ್ಲಿ ನಡೆಯಿರಿ, ಎಲ್ಲರನ್ನೂ ಗೌರವದಿಂದ ಕಾಣಿ ಎಂದಿದ್ದರು. ಬಸವಣ್ಣನವರು ಈ ವಿಚಾರ ಆಚರಣೆ ಮಾಡಿದ್ದಾರೆ.

    MORE
    GALLERIES