ಎತ್ತು & ಬಂಡಿಗಳ ಅಪಘಾತ ತಡೆಯಲು Kalaburagi ಸಂಚಾರಿ ಪೊಲೀಸರ ಸೂಪರ್ ಪ್ಲಾನ್

ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಯಲ್ಲಿ ಉಂಟಾಗುವ ಎತ್ತಿನ ಬಂಡಿಗಳ ಅಪಘಾತ (Accident) ತಡೆಯಲು ಕಲಬುರಗಿ ಸಂಚಾರ ಪೊಲೀಸರು (Kalaburagi Traffic Police) ಸೂಪರ್ ಪ್ಲಾನ್ ಮಾಡಿದ್ದಾರೆ. ಪೊಲೀಸರ ಈ ಪ್ಲಾನ್ ಗೆ ರೈತ (Farmers) ವರ್ಗ ಮೆಚ್ಚುಗೆ ವ್ಯಕ್ತಪಡಿಸಿದೆ.

First published:

  • 14

    ಎತ್ತು & ಬಂಡಿಗಳ ಅಪಘಾತ ತಡೆಯಲು Kalaburagi ಸಂಚಾರಿ ಪೊಲೀಸರ ಸೂಪರ್ ಪ್ಲಾನ್

    ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಬೃಹತ್ ವಾಹನಗಳ ಜೊತೆ ರೈತರ ಎತ್ತಿನ ಬಂಡಿಗಳು ಸಹ ಸಂಚರಿಸುತ್ತವೆ. ಆದ್ರೆ ಎತ್ತಿನ ಬಂಡಿಗಳಿಗೆ ಯಾವುದೇ ಲೈಟ್ ಸೇರಿದಂತೆ ವಿದ್ಯುತ್ ಉಪಕರಣಗಳು ಹಿನ್ನೆಲೆ ಅಪಘಾತಕ್ಕೆ ಒಳಗಾಗುತ್ತಿದ್ದವು. ಈ ಹಿನ್ನೆಲೆ ಪೊಲೀಸರು ಅಪಘಾತ ತಡೆಯಲು ಹೊಸ ಪ್ಲಾನ್ ಮಾಡಿಕೊಂಡಿದ್ದಾರೆ.

    MORE
    GALLERIES

  • 24

    ಎತ್ತು & ಬಂಡಿಗಳ ಅಪಘಾತ ತಡೆಯಲು Kalaburagi ಸಂಚಾರಿ ಪೊಲೀಸರ ಸೂಪರ್ ಪ್ಲಾನ್

    ಇದೀಗ ಹಳ್ಳಿಯಲ್ಲಿರುವ ಎತ್ತು ಮತ್ತು ಎತ್ತಿನ ಬಂಡಿಗಳಿಗೆ ಪೊಲೀಸರು ರೇಡಿಯಂ ರಿಪ್ಲೆಕ್ಟರ್ ಅಂಟಿಸುವ ಕೆಲಸ ಮಾಡುತ್ತಿದ್ದಾರೆ. ಕಳೆದ ಕೆಲ ದಿನಗಳಿಂದ ಎತ್ತಿನ ಬಂಡಿ, ಎತ್ತುಗಳಿಗೆ ಕಲಬುರಗಿ ನಗರ ಮತ್ತು ಕಲಬುರಗಿ ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ರೇಡಿಯಂ ರಿಫ್ಲೆಕ್ಟರ್ ಅಂಟಿಸಲಾಗುತ್ತಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 34

    ಎತ್ತು & ಬಂಡಿಗಳ ಅಪಘಾತ ತಡೆಯಲು Kalaburagi ಸಂಚಾರಿ ಪೊಲೀಸರ ಸೂಪರ್ ಪ್ಲಾನ್

    ಪ್ರತಿ ತಿಂಗಳು ಜಾನುವಾರು ಮತ್ತು ಬಂಡಿಗಳಿಗೆ ವಾಹನಗಳು ಗುದ್ದಿರುವ ಐದಾರು ಪ್ರಕರಣಗಳು ವರದಿ ಆಗುತ್ತಿದ್ದವು. ರೈತರ ಆತಂಕ ದೂರ ಮಾಡುವ ಹಿನ್ನೆಲೆಯಲ್ಲಿ ರೇಡಿಯಂ ರಿಫ್ಲೆಕ್ಟರ್ ಅಂಟಿಸಲಾಗುತ್ತಿದೆ ಎಂದು ಸಂಚಾರಿ ಎಸಿಪಿ ಸುಧಾ ಆದಿ ಹೇಳಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 44

    ಎತ್ತು & ಬಂಡಿಗಳ ಅಪಘಾತ ತಡೆಯಲು Kalaburagi ಸಂಚಾರಿ ಪೊಲೀಸರ ಸೂಪರ್ ಪ್ಲಾನ್

    ರಾತ್ರಿ ಹೊಲಗಳಿಂದ ಹಿಂದಿರುಗುವಾಗ ಹೆದ್ದಾರಿ ಮಾರ್ಗವಾಗಿ ನಾವು ಊರು ಸೇರಿಕೊಳ್ಳಬೇಕು. ಅಪಘಾತಗಳ ಸುದ್ದಿ ಕೇಳಿ ಜೀವ ಕೈಯಲ್ಲಿ ಹಿಡಿದು ಬರುತ್ತಿದ್ದೇವೆ. ಪೊಲೀಸರ ಈ ನಡೆಯಿಂದ ನಮ್ಮ ಆತಂಕ ದೂರವಾಗಿದೆ ಎಂದು ರೈತರು ಹೇಳುತ್ತಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES