PU Colleges Reopening: ಇಂದಿನಿಂದ ಪಿಯು ಕಾಲೇಜುಗಳು ಪುನಾರಂಭ: ಹಿಜಾಬ್​​ಗೆ ಅವಕಾಶವೇ ಇಲ್ಲ

ಬೆಂಗಳೂರು: ಉಡುಪಿಯ ಕಾಲೇಜಿನಲ್ಲಿ ಶುರುವಾದ ಹಿಜಾಬ್ ವಿವಾದ ಕೋರ್ಟ್ ಮೆಟ್ಟಿಲೇರುವವರೆಗೂ ಹೋಗಿದ್ದು ಎಲ್ಲರಿಗೂ ತಿಳಿದೇ ಇದೆ. ಕೋರ್ಟ್ ಆದೇಶದಂತೆ ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಗೆ ಅವಕಾಶವಿಲ್ಲ. ಇದನ್ನು ಪ್ರಶ್ನಿಸಿ ಉನ್ನತ ಕೋರ್ಟ್ ಗೆ ಹೋಗಲಾಗಿದೆ.

First published:

  • 18

    PU Colleges Reopening: ಇಂದಿನಿಂದ ಪಿಯು ಕಾಲೇಜುಗಳು ಪುನಾರಂಭ: ಹಿಜಾಬ್​​ಗೆ ಅವಕಾಶವೇ ಇಲ್ಲ

    ಈ ಹಿಜಾಬ್ ವಿವಾದದ ನಡುವೆ ಇಂದಿನಿಂದ ಪಿಯು ಕಾಲೇಜುಗಳು ಆರಂಭ ಆಗಿವೆ. 2022-23ನೇ ಸಾಲಿನ ಶೈಕ್ಷಣಿಕ ವರ್ಷಾರಂಭಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪ್ರಥಮ ಹಾಗೂ ದ್ವಿತೀಯ ಪಿಯು ತರಗತಿಗಳು ಇಂದಿನಿಂದ ಆರಂಭವಾಗುತ್ತಿವೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 28

    PU Colleges Reopening: ಇಂದಿನಿಂದ ಪಿಯು ಕಾಲೇಜುಗಳು ಪುನಾರಂಭ: ಹಿಜಾಬ್​​ಗೆ ಅವಕಾಶವೇ ಇಲ್ಲ

    ಕಳೆದ 2 ವರ್ಷ ಕೋವಿಡ್ ಕಾರಣದಿಂದ ತರಗತಿ ಸರಿಯಾಗಿ ನಡೆದಿಲ್ಲ. ಈ ವರ್ಷ ಪರಿಣಾಮಕಾರಿಯಾಗಿ ಶಿಕ್ಷಣ ನೀಡುವ ಗುರಿ ಶಿಕ್ಷಣ ಇಲಾಖೆಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 38

    PU Colleges Reopening: ಇಂದಿನಿಂದ ಪಿಯು ಕಾಲೇಜುಗಳು ಪುನಾರಂಭ: ಹಿಜಾಬ್​​ಗೆ ಅವಕಾಶವೇ ಇಲ್ಲ

    ಈ ಭಾರಿ ದಾಖಲೆ ಪ್ರಮಾಣದಲ್ಲಿ SSLC ವಿದ್ಯಾರ್ಥಿಗಳು ಪಾಸ್ ಆಗಿರುವುದರಿಂದ ಪಿಯು ಕಾಲೇಜುಗಳ ದಾಖಲೆಯ ದಾಖಲಾತಿಯೂ ಆಗಿದೆ. ಈ ಹಿನ್ನೆಲೆಯಲ್ಲಿ ತರಗತಿ ಆರಂಭಕ್ಕೆ ಪಿಯು ಬೋರ್ಡ್ ಸಕಲ ಸಿದ್ಧತೆ ಮಾಡಿಕೊಂಡಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 48

    PU Colleges Reopening: ಇಂದಿನಿಂದ ಪಿಯು ಕಾಲೇಜುಗಳು ಪುನಾರಂಭ: ಹಿಜಾಬ್​​ಗೆ ಅವಕಾಶವೇ ಇಲ್ಲ

    3 ಸಾವಿರಕ್ಕೂ ಹೆಚ್ಚಿನ ಅತಿಥಿ ಉಪನ್ಯಾಸಕರ ಅಗತ್ಯವಿದೆ. ಈ ಬಗ್ಗೆ ಇಲಾಖೆಯಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ . ಜೊತೆಗೆ ಮೂಲಸೌಕರ್ಯ ಸಹಿತ ಇನ್ನಿತರ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಮನವಿ ಸಲ್ಲಿಸಲಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 58

    PU Colleges Reopening: ಇಂದಿನಿಂದ ಪಿಯು ಕಾಲೇಜುಗಳು ಪುನಾರಂಭ: ಹಿಜಾಬ್​​ಗೆ ಅವಕಾಶವೇ ಇಲ್ಲ

    ಸಮವಸ್ತ್ರ ವಿಚಾರದಲ್ಲಿ ಹೈಕೋರ್ಟ್ ಆದೇಶ ಪಾಲಿಸಬೇಕು. ಹಿಜಾಬ್ ಧರಿಸಿ ಬಂದ್ರೆ ತರಗತಿಗೆ ಅನುಮತಿ ಇರೋದಿಲ್ಲ ಎಂದು ಜಿಲ್ಲಾ ಉಪನಿರ್ದೇಶಕರಿಗೆ ನಿರ್ದೇಶನ ನೀಡಲಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 68

    PU Colleges Reopening: ಇಂದಿನಿಂದ ಪಿಯು ಕಾಲೇಜುಗಳು ಪುನಾರಂಭ: ಹಿಜಾಬ್​​ಗೆ ಅವಕಾಶವೇ ಇಲ್ಲ

    ಕಾಲೇಜು ಅಭಿವೃದ್ಧಿ ಸಮಿತಿ ನೀಡಿರಿರುವ ಸಮವಸ್ತ್ರ ಪಾಲನೆ ಕಡ್ಡಾಯ. ಕೋರ್ಟ್ ತೀರ್ಪಿನ ಅನ್ವಯ ಸಮವಸ್ತ್ರ ಧರಿಸುವಂತೆ ಸೂಚನೆ ನೀಡಲಾಗಿದೆ ಎಂದು ಪಿಯು ಬೋರ್ಡ್ ನಿರ್ದೇಶಕ ಆರ್.ರಾಮಚಂದ್ರನ್ ತಿಳಿಸಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 78

    PU Colleges Reopening: ಇಂದಿನಿಂದ ಪಿಯು ಕಾಲೇಜುಗಳು ಪುನಾರಂಭ: ಹಿಜಾಬ್​​ಗೆ ಅವಕಾಶವೇ ಇಲ್ಲ

    ಪದವಿ ಪೂರ್ವ ಶಿಕ್ಷಣ ಇಲಾಖೆಯು ಕೊರೊನಾ ನಿಯಂತ್ರಣದಲ್ಲಿ ಇರುವುದರಿಂದ ಕಾಲೇಜು ಪ್ರಾರಂಭಕ್ಕೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಈಗಾಗಲೇ ಕಾಲೇಜು ಪ್ರಾರಂಭಕ್ಕೆ ಪಿಯುಸಿ ಬೋರ್ಡ್ ಮಾರ್ಗಸೂಚಿ ಮತ್ತು ವೇಳಾಪಟ್ಟಿ ಪ್ರಕಟ ಮಾಡಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 88

    PU Colleges Reopening: ಇಂದಿನಿಂದ ಪಿಯು ಕಾಲೇಜುಗಳು ಪುನಾರಂಭ: ಹಿಜಾಬ್​​ಗೆ ಅವಕಾಶವೇ ಇಲ್ಲ

    ಪಿಯು ಕಾಲೇಜುಗಳಲ್ಲಿ ಕಡ್ಡಾಯವಾಗಿ ಸಮವಸ್ತ್ರ ಧರಿಸಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಿದೆ. ಈ ವರ್ಷದಿಂದ ಕಡ್ಡಾಯವಾಗಿ ಸಮವಸ್ತ್ರ ನಿಯಮ ಪಾಲನೆ ಮಾಡಬೇಕು ಎಂದು ಆದೇಶ ಹೊರಡಿಸಿದೆ. ಹೈಕೋರ್ಟ್ ತೀರ್ಪಿನ ಅನ್ವಯ ಸಮವಸ್ತ್ರ ಧರಿಸುವಂತೆ ಮಾರ್ಗಸೂಚಿಯಲ್ಲಿ ಶಿಕ್ಷಣ ಇಲಾಖೆ ಉಲ್ಲೇಖ ಮಾಡಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES