PSI Recruitment Scam: ನೇಮಕಾತಿ ವಿಭಾಗದ ಎಡಿಜಿಪಿ ಆರ್ ಹೀತೇಂದ್ರರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ
ಪಿಎಸ್ಐ ನೇಮಕಾತಿ ಹಗರಣ ಪರಿಣಾಮ ನೇಮಕಾತಿ ವಿಭಾಗದ ಎಡಿಜಿಪಿ ಅಮೃತ್ ಪೌಲ್ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ನೀಡಿದೆ. ಅಮೃತ್ ಪೌಲ್ ಸ್ಥಾನಕ್ಕೆ ನೂತನ ಎಡಿಜಿಪಿಯಾಗಿ ಆರ್ ಹಿತೇಂದ್ರ ಅವರನ್ನು ನೇಮಕಾತಿ ಮಾಡಲಾಗಿದೆ.
ಪಿಎಸ್ಐ ನೇಮಕಾತಿ ಹಗರಣ ಪರಿಣಾಮ ನೇಮಕಾತಿ ವಿಭಾಗದ ಎಡಿಜಿಪಿ ಅಮೃತ್ ಪೌಲ್ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ನೀಡಿದೆ. ಅಮೃತ್ ಪೌಲ್ ಸ್ಥಾನಕ್ಕೆ ನೂತನ ಎಡಿಜಿಪಿಯಾಗಿ ಆರ್ ಹಿತೇಂದ್ರ ಅವರನ್ನು ನೇಮಕಾತಿ ಮಾಡಲಾಗಿದೆ.
2/ 8
ಇನ್ನು ಹಿತೇಂದ್ರ ಅವರು ಅಪರಾಧ ಮತ್ತು ತಾಂತ್ರಿಕ ಸೇವೆಗಳ ಎಡಿಜಿಪಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ನೇಮಕಾತಿ ವಿಭಾಗದ ಎಡಿಜಿಪಿ ಅಮೃತ್ ಪೌಲ್ ಆಂತರಿಕ ಭದ್ರತಾ ವಿಭಾಗಕ್ಕೆ ವರ್ಗಾವಣೆ ಮಾಡಿ ಆದೇಶ ಮಾಡಲಾಗಿದೆ.
3/ 8
ಕಲಬುರಗಿಯ ಜ್ಞಾನಜ್ಯೋತಿ ಪರೀಕ್ಷಾ ಕೇಂದ್ರದಲ್ಲಿ ಬ್ಲೂಟೂತ್ ಬಳಸಿ ಅಭ್ಯರ್ಥಿಗಳು ಅಕ್ರಮ ನಡೆಸಿದ್ದರು ಎಂಬ ಆರೋಪ ಕೇಳಿಬಂದಿತ್ತು. ಈ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಸಿಐಡಿಗೆ ವಹಿಸಿದೆ.
4/ 8
ಪ್ರಕರಣ ಸಂಬಂಧ ಈಗಾಗಲೇ 13 ಜನರ ಬಂಧನವಾಗಿದೆ. ಪ್ರಕರಣದ ಪ್ರಮುಖ ಆರೋಪಿ ಆರ್ ಡಿ ಪಾಟೀಲ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಮತ್ತೊಬ್ಬ ಪ್ರಮುಖ ಆರೋಪಿ ಆಗಿರುವ ದಿವ್ಯಾ ಹಾಗರಗಿಗೆ ಶರಣಾಗುವಂತೆ ಸೂಚನೆ ನೀಡಲಾಗಿದೆ.
5/ 8
PSI ಪರೀಕ್ಷೆಗಳು ಕಳೆದ ವರ್ಷ ಅಕ್ಟೋಬರ್ 2021ರಂದು ನಡೆದಿದ್ದವು. ಆರೋಪಿಗಳು ಇದೇ ರೀತಿ ಹಲವು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಕ್ರಮ ನಡೆಸಿರುವ ಅನುಮಾನಗಳು ವ್ಯಕ್ತವಾಗಿವೆ
6/ 8
ಸದ್ಯ ಪಿಎಸ್ಐ ನೇಮಕಾತಿ ಅಕ್ರಮ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಕಾಂಗ್ರೆಸ್ ಆಡಳಿತರೂಢ ಬಿಜೆಪಿ ಸರ್ಕಾರ ಮತ್ತು ಗೃಹ ಸಚಿವರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ.
7/ 8
ಪ್ರಕರಣದಲ್ಲಿ ಅಫಜಲ್ಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಾಂತೇಶ್ ಪಾಟೀಲ್ ಹೆಸರು ಕೇಳಿ ಬಂದಿದೆ.. ಈತ ತನ್ನ ಸೋದರನ ಜೊತೆಗೂಡಿ ಬ್ಲೂಟೂಥ್ ಡಿವೈಸ್ ಗಳನ್ನು ಬಳಸಿ ಅಭ್ಯರ್ಥಿಗಳಿಗೆ ಉತ್ತರಗಳನ್ನ ಹೇಳಿರುವ ಆರೋಪಗಳು ಕೇಳಿ ಬಂದಿವೆ.
8/ 8
ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಈ ಶಾಲೆಯ ಮುಖ್ಯಸ್ಥೆ. ಪ್ರಕರಣ ಬೆಳಕಿಗೆ ಬಂದ ದಿನದಿಂದಲೂ ದಿವ್ಯಾ ಹಾಗರಗಿ ನಿಗೂಢವಾಗಿದ್ದಾಳೆ. ಪೊಲೀಸರು ದಿವ್ಯಾ ಹಾಗರಗಿಯ ಹುಡುಕಾಟದಲ್ಲಿದ್ದಾರೆ.