PSI Recruitment Scam: ಮೃತ ವ್ಯಕ್ತಿಯ ಸಿಮ್ ಕಾರ್ಡ್ ಬಳಸುತ್ತಿದ್ದ ಆರೋಪಿಗಳು: ಸಿಐಡಿ ತನಿಖೆಯಲ್ಲಿ ಸ್ಪೋಟಕ ವಿಷಯ ಬೆಳಕಿಗೆ
PSI Recrutiment: ಪಿಎಸ್ಐ ನೇಮಕಾತಿ ಅಕ್ರಮದ ಕಿಂಗ್ ಪಿನ್ ಗಳು ಎನ್ನಲಾದ ಸೋದರರಾದ ರುದ್ರಗೌಡ ಮತ್ತು ಮಹಾಂತೇಶ ಗೌಡ ಇಬ್ಬರು ಕೋವಿಡ್ ನಿಂದ ಮೃತಪಟ್ಟ ವ್ಯಕ್ತಿಯ ಹೆಸರಿನಲ್ಲಿರುವ ಸಿಮ್ ಕಾರ್ಡ್ ಬಳಕೆ ಮಾಡುತ್ತಿದ್ದರು ಎಂದು TOI ವರದಿ ಮಾಡಿದೆ.
ಈ ಸಿಮ್ ಕಾರ್ಡ್ ಬಳಸಿ ಅಭ್ಯರ್ಥಿಗಳಿಗೆ ಉತ್ತರ ನೀಡುತ್ತಿದ್ದಾರೆ. ಇದೇ ನಂಬರ್ ನಿಂದಲೇ ಅಭ್ಯರ್ಥಿಗಳನ್ನು ಸಂಪರ್ಕಿಸುತ್ತಿದ್ದು ಎಂಬ ಮಾಹಿತಿ ಸಿಐಡಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ. (ಸಾಂದರ್ಭಿಕ ಚಿತ್ರ)
2/ 8
ಈ ಇಬ್ಬರು ಬಳಸಿದ ಸಿಮ್ ಕಾರ್ಡ್ ಅಫಜಲ್ಪುರ ತಾಲೂಕಿನ ಸೊನ್ನ ಗ್ರಾಮದ ಲಕ್ಷ್ಮಿಪುತ್ರ ಎಂಬವರ ಹೆಸರಿನಲ್ಲಿದೆ. ಲಕ್ಷ್ಮಿಪುತ್ರ ಕೋವಿಡ್ ನಿಂದ ಸಾವನ್ನಪ್ಪಿದ್ದಾರೆ. (ಸಾಂದರ್ಭಿಕ ಚಿತ್ರ)
3/ 8
PSI ಪರೀಕ್ಷೆಗಳು ಕಳೆದ ವರ್ಷ ಅಕ್ಟೋಬರ್ 2021ರಂದು ನಡೆದಿದ್ದವು. ಆರೋಪಿಗಳು ಇದೇ ರೀತಿ ಹಲವು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಕ್ರಮ ನಡೆಸಿರುವ ಅನುಮಾನಗಳು ವ್ಯಕ್ತವಾಗಿವೆ. (ಸಾಂದರ್ಭಿಕ ಚಿತ್ರ)
4/ 8
ಆರೋಪಿಗಳು ಓಡಿಶಾದಲ್ಲಿ ಖರೀದಿಸಿದ್ದ ಮೊಬೈಲ್ ಫೋನ್ ಗಳನ್ನು ಅಭ್ಯರ್ಥಿಗಳಿಗೆ ನೀಡಿದ್ದರು. ಇವರಿಂದ ಮೊಬೈಲ್ ಪಡೆದ ಅಭ್ಯರ್ಥಿಗಳು ಕಲಬುರಗಿಯ ಜ್ಞಾನ ಜ್ಯೋತಿ ಇಂಗ್ಲಿಷ್ ಮೀಡಿಯಂ ಸ್ಕೂಲ್ ನಲ್ಲಿ ಪರೀಕ್ಷೆ ಬರೆದಿದ್ದರು.
5/ 8
ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಈ ಶಾಲೆಯ ಮುಖ್ಯಸ್ಥೆ. ಪ್ರಕರಣ ಬೆಳಕಿಗೆ ಬಂದ ದಿನದಿಂದಲೂ ದಿವ್ಯಾ ಹಾಗರಗಿ ನಿಗೂಢವಾಗಿದ್ದಾಳೆ. ಪೊಲೀಸರು ದಿವ್ಯಾ ಹಾಗರಗಿಯ ಹುಡುಕಾಟದಲ್ಲಿದ್ದಾರೆ.
6/ 8
ಇನ್ನೂ ಮಹಾಂತೇಶ್ ಪಾಟೀಲ್ ಅಫಜಲ್ಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ. ಈತ ತನ್ನ ಸೋದರನ ಜೊತೆಗೂಡಿ ಬ್ಲೂಟೂಥ್ ಡಿವೈಸ್ ಗಳನ್ನು ಬಳಸಿ ಅಭ್ಯರ್ಥಿಗಳಿಗೆ ಉತ್ತರಗಳನ್ನ ಹೇಳಿರುವ ಆರೋಪಗಳು ಕೇಳಿ ಬಂದಿವೆ.
7/ 8
ಪರೀಕ್ಷೆ ಮುಗಿದ ಬಳಿಕ ಅಭ್ಯರ್ಥಿಗಳಿಗೆ ನೀಡಲಾಗಿದ್ದ ಮೊಬೈಲ್ ಹಾಗೂ ಇನ್ನಿತರ ಎಲೆಕ್ಟ್ರಾನಿಕ್ ಡಿವೈಸ್ ಗಳನ್ನು ವಾಪಸ್ ಪಡೆದುಕೊಂಡಿದ್ದರು.
8/ 8
ಸದ್ಯ ಪಿಎಸ್ಐ ನೇಮಕಾತಿ ಅಕ್ರಮ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಕಾಂಗ್ರೆಸ್ ಆಡಳಿತರೂಢ ಬಿಜೆಪಿ ಸರ್ಕಾರ ಮತ್ತು ಗೃಹ ಸಚಿವರ ವಿರುದ್ಧ ವಾಗ್ದಾಳಿ ನಡೆಸುತ್ತಿದೆ.