Dasara Elephant: 'ಅಂಬಾರಿ ವೀರ' ಬಲರಾಮನಿಗೆ ಪ್ರಧಾನಿ ಸಂತಾಪ, ಕನ್ನಡದಲ್ಲೇ ಟ್ವೀಟ್ ಮಾಡಿ ದಸರಾ ಆನೆ ಸ್ಮರಿಸಿದ ಮೋದಿ

ಅನಾರೋಗ್ಯಕ್ಕೆ ಒಳಗಾಗಿದ್ದ ಬಲರಾಮನಿಗೆ ನಾಗರಹೊಳೆ ಉದ್ಯಾನವನದ ಹುಣಸೂರು ರೇಂಜ್ ವ್ಯಾಪ್ತಿಯ ಭೀಮನಕಟ್ಟೆ ಆನೆ ಶಿಬಿರದಲ್ಲಿ ಪಶು ವೈದ್ಯರ ತಂಡ ಚಿಕಿತ್ಸೆ ನೀಡಲಾಗಿತ್ತು.

  • News18 Kannada
  • |
  •   | Bangalore [Bangalore], India
First published:

  • 17

    Dasara Elephant: 'ಅಂಬಾರಿ ವೀರ' ಬಲರಾಮನಿಗೆ ಪ್ರಧಾನಿ ಸಂತಾಪ, ಕನ್ನಡದಲ್ಲೇ ಟ್ವೀಟ್ ಮಾಡಿ ದಸರಾ ಆನೆ ಸ್ಮರಿಸಿದ ಮೋದಿ

    ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಸತತವಾಗಿ 14 ಬಾರಿ ಅಂಬಾರಿಯನ್ನು ಹೊತ್ತಿದ್ದ ಬಲರಾಮ ಆನೆ ನಿನ್ನೆ ಅನಾರೋಗ್ಯದಿಂದ ಮೃತಪಟ್ಟಿದೆ.

    MORE
    GALLERIES

  • 27

    Dasara Elephant: 'ಅಂಬಾರಿ ವೀರ' ಬಲರಾಮನಿಗೆ ಪ್ರಧಾನಿ ಸಂತಾಪ, ಕನ್ನಡದಲ್ಲೇ ಟ್ವೀಟ್ ಮಾಡಿ ದಸರಾ ಆನೆ ಸ್ಮರಿಸಿದ ಮೋದಿ

    2029ರಲ್ಲಿ ಕೊನೆಯ ಬಾರಿಗೆ ದಸರಾದಲ್ಲಿ ಭಾಗಿಯಾಗಿದ್ದ 67 ವರ್ಷದ ಬಲರಾಮ ಕಳೆದ ಕೆಲ ಸಮಯದಿಂದ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ. ವೈದ್ಯರು ಚಿಕಿತ್ಸೆ ನೀಡಿದ ಬಳಿಕವೂ ಫಲಕಾರಿಯಾಗದೆ ಬಲರಾಮ ಭಾನುವಾರ ಮೃತಪಟ್ಟಿದ್ದ.

    MORE
    GALLERIES

  • 37

    Dasara Elephant: 'ಅಂಬಾರಿ ವೀರ' ಬಲರಾಮನಿಗೆ ಪ್ರಧಾನಿ ಸಂತಾಪ, ಕನ್ನಡದಲ್ಲೇ ಟ್ವೀಟ್ ಮಾಡಿ ದಸರಾ ಆನೆ ಸ್ಮರಿಸಿದ ಮೋದಿ

    ಈ ಕುರಿತಂತೆ ಟ್ವೀಟ್​ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಹಲವು ವರ್ಷಗಳಿಂದ, ಗಜರಾಜ ಬಲರಾಮ ಮೈಸೂರಿನ ಸಾಂಪ್ರದಾಯಿಕ ದಸರಾ ಆಚರಣೆಯ ಪ್ರಮುಖ ಭಾಗವಾಗಿದ್ದನು. ಅವನು ಚಾಮುಂಡೇಶ್ವರಿ ಮಾತೆಯ ಮೂರ್ತಿಯನ್ನು ಹೊತ್ತಿದ್ದನ್ನು ಜನರು ನೆನಪಿಸಿಕೊಳ್ಳುತ್ತಾರೆ. ಅವನು ಅಸಂಖ್ಯಾತ ಜನರಿಗೆ ಪ್ರೀತಿಪಾತ್ರನಾಗಿದ್ದನು. ಅವನ ಅಗಲಿಕೆಯಿಂದ ದುಃಖವಾಗಿದೆ. ಓಂ ಶಾಂತಿ ಎಂದು ಮೋದಿ ಬರೆದುಕೊಂಡಿದ್ದಾರೆ.

    MORE
    GALLERIES

  • 47

    Dasara Elephant: 'ಅಂಬಾರಿ ವೀರ' ಬಲರಾಮನಿಗೆ ಪ್ರಧಾನಿ ಸಂತಾಪ, ಕನ್ನಡದಲ್ಲೇ ಟ್ವೀಟ್ ಮಾಡಿ ದಸರಾ ಆನೆ ಸ್ಮರಿಸಿದ ಮೋದಿ

    ಅಂದಹಾಗೇ, ಸತತ 22 ವರ್ಷಗಳ ಕಾಲ ಬಲರಾಮ ಆನೆ ಮೈಸೂರು ದಸರಾದಲ್ಲಿ ಭಾಗಿಯಾಗಿತ್ತು. 1978ರಲ್ಲಿ ಕೊಡಗು ಜಿಲ್ಲೆಯ ಕಟ್ಟೆಪುರ ಅರಣ್ಯದಲ್ಲಿ ಪ್ರದೇಶದಲ್ಲಿ ಬಲರಾಮ ಆನೆಯನ್ನು ಸೆರೆ ಹಿಡಿಯಲಾಗಿತ್ತು.

    MORE
    GALLERIES

  • 57

    Dasara Elephant: 'ಅಂಬಾರಿ ವೀರ' ಬಲರಾಮನಿಗೆ ಪ್ರಧಾನಿ ಸಂತಾಪ, ಕನ್ನಡದಲ್ಲೇ ಟ್ವೀಟ್ ಮಾಡಿ ದಸರಾ ಆನೆ ಸ್ಮರಿಸಿದ ಮೋದಿ

    ತುಂಬಾ ಬಲಶಾಲಿಯಾಗಿದ್ದ ಕಾರಣ ಬಲರಾಮ ಆನೆಗೆ ತರಬೇತಿ ನೀಡಲಾಗಿತ್ತು. ಆ ಬಳಿಕ ಸತತ 14 ವರ್ಷಗಳಿಂದ ಚಿನ್ನದ ಅಂಬಾರಿ ಹೊತ್ತು ಮೈಸೂರು ದಸರೆಗೆ ಕಳೆತಂದಿದ್ದ.

    MORE
    GALLERIES

  • 67

    Dasara Elephant: 'ಅಂಬಾರಿ ವೀರ' ಬಲರಾಮನಿಗೆ ಪ್ರಧಾನಿ ಸಂತಾಪ, ಕನ್ನಡದಲ್ಲೇ ಟ್ವೀಟ್ ಮಾಡಿ ದಸರಾ ಆನೆ ಸ್ಮರಿಸಿದ ಮೋದಿ

    ಇನ್ನು, ಅನಾರೋಗ್ಯಕ್ಕೆ ಒಳಗಾಗಿದ್ದ ಬಲರಾಮನಿಗೆ ನಾಗರಹೊಳೆ ಉದ್ಯಾನವನದ ಹುಣಸೂರು ರೇಂಜ್ ವ್ಯಾಪ್ತಿಯ ಭೀಮನಕಟ್ಟೆ ಆನೆ ಶಿಬಿರದಲ್ಲಿ ಪಶು ವೈದ್ಯರ ತಂಡ ಚಿಕಿತ್ಸೆ ನೀಡಲಾಗಿತ್ತು. ಆದರೆ ಬಲರಾಮನ ಬಾಯಿಯಲ್ಲಿ ಹುಣ್ಣುಗಳಾಗಿದ್ದು, ಆಹಾರ ಸೇವಿಸುತ್ತಿರಲಿಲ್ಲ, ನೀರನ್ನು ಸಹಾ ಕುಡಿಯಲು ಸಾಧ್ಯವಾಗದ ಕಾರಣ ಅಸ್ವಸ್ಥಗೊಂಡಿತ್ತು ಎಂಬ ಮಾಹಿತಿ ಲಭ್ಯವಾಗಿದೆ.

    MORE
    GALLERIES

  • 77

    Dasara Elephant: 'ಅಂಬಾರಿ ವೀರ' ಬಲರಾಮನಿಗೆ ಪ್ರಧಾನಿ ಸಂತಾಪ, ಕನ್ನಡದಲ್ಲೇ ಟ್ವೀಟ್ ಮಾಡಿ ದಸರಾ ಆನೆ ಸ್ಮರಿಸಿದ ಮೋದಿ

    ತಿತಿಮತಿ ಬಳಿಯ ಮತ್ತಿಗೋಡು ಆನೆ ಶಿಬಿರದ ಬಲರಾಮ 22 ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿತ್ತು. ಬರೋಬ್ಬರಿ 14 ಬಾರಿ ಚಿನ್ನದ ಅಂಬಾರಿ ಹೊತ್ತಿದ್ದಾನೆ. ಸೌಮ್ಯ ಸ್ವಭಾವದ ಈತ 2.70ಮೀಟರ್ ಎತ್ತರ, 3.77ಮೀ. ಉದ್ದವಿತ್ತು.

    MORE
    GALLERIES