ಇನ್ನು, ಸ್ಫೋಟಗೊಂಡ ಕುಕ್ಕರ್ಅನ್ನು ಚುನಾವಣೆಗೂ ಮುನ್ನ ಕಾಂಗ್ರೆಸ್ ಅಭ್ಯರ್ಥಿ ನೀಡಿದ್ದರು ಎಂಬ ಆರೋಪ ಕೇಳಿ ಬಂದಿದೆ. ಕುಕ್ಕರ್ ಸ್ಫೋಟಗೊಂಡ ಬೆನ್ನಲ್ಲೇ ಕೂನಮುದ್ದನಹಳ್ಳಿ ಗ್ರಾಮದ ನಿವಾಸಿಗಳು ಕುಕ್ಕರ್ಗಳನ್ನು ರಸ್ತೆಗೆ ಎಸೆದಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಯುವತಿ, ಎಲೆಕ್ಷನ್ ಟೈಂ ನಲ್ಲಿ ಕುಕ್ಕರ್ ನೀಡಿದ್ದರು, ಇಂದು ಅನ್ನಕ್ಕೆ ಕುಕ್ಕರ್ ಇಟ್ಟಿದ್ದ ವೇಳೆ ಸ್ಫೋಟಗೊಂಡಿತ್ತು ಎಂದು ತಿಳಿಸಿದ್ದಾರೆ.