ಬೆಳಕಿನ ಹಬ್ಬ ದೀಪಾವಳಿ. ಮನಸ್ಸಿನಲ್ಲಿರುವ ಕತ್ತಲೆಯನ್ನು ತೊಡೆದು ಹಾಕಿ ಬೆಳಕಿನೆಡೆಗೆ, ಅಜ್ಞಾನವನ್ನು ತೊಡೆದುಹಾಕಿ ಜ್ಞಾನದೆಡೆಗೆ ಹೋಗುವುದೇ ದೀಪಾವಳಿ ಹಬ್ಬದ ಮೂಲ ಧ್ಯೇಯ. ಅನಾದಿ ಕಾಲದಿಂದಲೂ ಆಚರಣೆಯಲ್ಲಿರುವ ಈ ಹಬ್ಬವನ್ನು ದೇಶಾದ್ಯಂತ ಆಚರಿಸಲಾಗುತ್ತದೆ. ಅದರಲ್ಲೂ ನಮ್ಮ ಕರ್ನಾಟಕದಲ್ಲಿ ಮೂರು ದಿನಗಳ ಕಾಲ ದೀಪಾವಳಿ ಸಂಭ್ರಮ ಮನೆಮಾಡಿರುತ್ತದೆ. ಈ ಬಾರಿಯ ದೀಪಾವಳಿಗೆ ಭರ್ಜರಿ ಸಿದ್ಧತೆ ನಡೆಸಲಾಗುತ್ತಿದ್ದು, ಜನರು ಶಾಪಿಂಗ್, ಮತ್ತಿತರ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ. ಬಟ್ಟೆ ಖರೀದಿ, ಚಿನ್ನ ಖರೀದಿ ಕಾರ್ಯಗಳು ಭರದಿಂದ ಸಾಗಿದ್ದು, ಹಬ್ಬಕ್ಕೆ ಭರದ ಸಿದ್ದತೆ ನಡೆಯುತ್ತಿದೆ.