Halal: ಹಲಾಲ್ ಮುಕ್ತ ದೀಪಾವಳಿ ಆಚರಣೆಗೆ ಪ್ರಮೋದ್ ಮುತಾಲಿಕ್ ಕರೆ

Pramod Muthalik: ದೀಪಾವಳಿಗೂ ಧರ್ಮ ದಂಗಲ್ ಕಳಂಕ ಮೆತ್ತಿದೆ. ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ, ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹಲಾಲ್ ಮುಕ್ತ ದೀಪಾವಳಿ ಆಚರಣೆಗೆ ಕರೆ ನೀಡಿದ್ದಾರೆ.

First published:

  • 17

    Halal: ಹಲಾಲ್ ಮುಕ್ತ ದೀಪಾವಳಿ ಆಚರಣೆಗೆ ಪ್ರಮೋದ್ ಮುತಾಲಿಕ್ ಕರೆ

    ಹಲಾಲ್ ದೇಶದಲ್ಲಿ ಹಲ್ ಚಲ್ ಸೃಷ್ಟಿ ಮಾಡಿದೆ. ಹಲಾಲ್ ಮುಕ್ತ ದೀಪಾವಳಿವನ್ನು ಈ‌ ಬಾರಿ‌ ಹಿಂದೂ ಸಮಾಜ ಮಾಡಬೇಕು. ಕಬ್ಬು, ಹೂ, ಹಣ್ಣು, ಪೂಜೆ ಸಾಮಗ್ರಿಗಳನ್ನು ಎಲ್ಲಾ ಹಿಂದೂ ವ್ಯಾಪಾರಿಗಳಿಂದ ಖರೀದಿ ಮಾಡಬೇಕು ಎಂದು ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

    MORE
    GALLERIES

  • 27

    Halal: ಹಲಾಲ್ ಮುಕ್ತ ದೀಪಾವಳಿ ಆಚರಣೆಗೆ ಪ್ರಮೋದ್ ಮುತಾಲಿಕ್ ಕರೆ

    ಮುಸ್ಲಿಂ ವ್ಯಾಪಾರಿಗಳಿಂದ ಹಲಾಲ್ ಸರ್ಟಿಫಿಕೇಟ್ ಸಾಮಗ್ರಿಗಳನ್ನು ಖರೀದಿಸಿದ್ರೆ ಅಶಾಸ್ತ್ರವಾಗುತ್ತದೆ. ಇದು ನಮ್ಮ ಧರ್ಮಕ್ಕೆ ಅಪಮಾನ ಮಾಡಿದಂತೆ. ದೇಶದ ವಿಧ್ವಂಸಕ ಕೃತ್ಯಗಳಿಗೆ ಈ ಹಲಾಲ್ ಹಣವನ್ನು ಬಳಸಲಾಗುತ್ತಿದೆ ಎಂದು ಆರೋಪಿಸಿದರು.

    MORE
    GALLERIES

  • 37

    Halal: ಹಲಾಲ್ ಮುಕ್ತ ದೀಪಾವಳಿ ಆಚರಣೆಗೆ ಪ್ರಮೋದ್ ಮುತಾಲಿಕ್ ಕರೆ

    ಹಲಾಲ್ ಹಣ ಉಗ್ರಗಾಮಿಗಳ ಕೈ ಸೇರುತ್ತದೆ . ನಮ್ಮ ಹಣ ತೊಗೊಂಡು ನಮಗೆ ಚೂರಿ ಹಾಕೋ ಕೆಲಸ ನಡೆಯುತ್ತದೆ. ಹೀಗಾಗಿ ಹಲಾಲ್ ಮುಕ್ತ ದೀಪಾವಳಿ ಆಚರಿಸುವಂತೆ ಹುಬ್ಬಳ್ಳಿಯಲ್ಲಿ ಮುತಾಲಿಕ್ ಮನವಿ ಮಾಡಿಕೊಂಡಿದ್ದಾರೆ.

    MORE
    GALLERIES

  • 47

    Halal: ಹಲಾಲ್ ಮುಕ್ತ ದೀಪಾವಳಿ ಆಚರಣೆಗೆ ಪ್ರಮೋದ್ ಮುತಾಲಿಕ್ ಕರೆ

    ಈ ಬಗ್ಗೆ ಕಂದಾಯ ಸಚಿವ ಆರ್.ಅಶೋಕ್ ಹಲಾಲ್ ಮುಕ್ತ ದೀಪಾವಳಿ ಆಚರಣೆ ಬಗ್ಗೆ ಮಾತಾಡಿದ್ದಾರೆ. ಹಲಾಲ್ ಕಟ್ & ಜಟ್ಕಾ ಕಟ್ ಬಗ್ಗೆ ನನಗೆ ನಂಬಿಕೆಯಿಲ್ಲ. ಆಹಾರದ ವಿಷಯ ಅವರವರಿಗೆ ಬಿಟ್ಟ ವಿಚಾರ ಎಂದು ಹೇಳಿದ್ದಾರೆ.

    MORE
    GALLERIES

  • 57

    Halal: ಹಲಾಲ್ ಮುಕ್ತ ದೀಪಾವಳಿ ಆಚರಣೆಗೆ ಪ್ರಮೋದ್ ಮುತಾಲಿಕ್ ಕರೆ

    ಹಲಾಲ್ ಮಾಂಸ ಯಾವುದು?

    ಇಸ್ಲಾಮ್ ಧರ್ಮಬದ್ಧವಾಗಿರುವ ಆಹಾರ ಕ್ರಮವೇ ಹಲಾಲ್. ಇಸ್ಲಾಮ್ ಧರ್ಮದಲ್ಲಿ ಪರಿಶುದ್ಧ ಆಹಾರವೆಲ್ಲವೂ ಹಲಾಲ್ ಎಂದು ಪರಿಗಣಿಸಲಾಗಿದೆ. ಪರಿಶುದ್ಧತೆ ಇಲ್ಲದ ಆಹಾರವು ಇಸ್ಲಾಮ್​ನಲ್ಲಿ ನಿಷಿದ್ಧ. ಮಾಂಸದ ವಿಚಾರಕ್ಕೆ ಬಂದರೆ ಹಂದಿ, ಮನುಷ್ಯ, ಹುಲಿ, ಸಿಂಹ ಇತ್ಯಾದಿ ಮಾಂಸಗಳು ನಿಷಿದ್ಧವಾಗಿವೆ.

    MORE
    GALLERIES

  • 67

    Halal: ಹಲಾಲ್ ಮುಕ್ತ ದೀಪಾವಳಿ ಆಚರಣೆಗೆ ಪ್ರಮೋದ್ ಮುತಾಲಿಕ್ ಕರೆ

    ಕಾನೂನುಬದ್ಧವೆನಿಸಿದ ಕುರಿ, ಕೋಳಿ, ಒಂಟೆ, ದನ, ಮೀನು ಇತ್ಯಾದಿ ಪ್ರಾಣಿಗಳ ಮಾಂಸವು ಹಲಾಲ್ ಎನಿಸುತ್ತವೆ. ವಧಿಸುವ ಮುಂಚೆಯೇ ಸತ್ತಿದ್ದ ಪ್ರಾಣಿಗಳು; ವಧಿಸುವ ವೇಳೆ ರೋಗ, ಅನಾರೋಗ್ಯದಿಂದ ಬಳಸುತ್ತಿರುವ ಪ್ರಾಣಿಗಳನ್ನು ಮುಸ್ಲಿಮರು ತಿನ್ನುವಂತಿಲ್ಲ.

    MORE
    GALLERIES

  • 77

    Halal: ಹಲಾಲ್ ಮುಕ್ತ ದೀಪಾವಳಿ ಆಚರಣೆಗೆ ಪ್ರಮೋದ್ ಮುತಾಲಿಕ್ ಕರೆ

    ಹಲಾಲ್ ಆಹಾರ ಪ್ರಾಧಿಕಾರವು ಇದೆ

    ಹಲಾಲ್ ತತ್ವಗಳ ಅನುಸರಣೆಯನ್ನು ಮೇಲ್ವಿಚಾರಣೆ ಮಾಡುವ ಲಾಭೋದ್ದೇಶವಿಲ್ಲದ ಸಂಸ್ಥೆಯಾದ ಹಲಾಲ್ ಆಹಾರ ಪ್ರಾಧಿಕಾರ (HFA) ಹೇಳುವ ಪ್ರಕಾರ, ಪ್ರಾಣಿಗಳನ್ನು ಕೊಲ್ಲಲು ಬೆರಗುಗೊಳಿಸುವಿಕೆಯನ್ನು ಬಳಸಲಾಗುವುದಿಲ್ಲ. ಆದರೆ ಪ್ರಾಣಿ ಉಳಿದುಕೊಂಡರೆ ಮತ್ತು ಹಲಾಲ್ ವಿಧಾನಗಳಿಂದ ಕೊಲ್ಲಲ್ಪಟ್ಟರೆ ಅದನ್ನು ಬಳಸಬಹುದು ಎಂದು HFA ಹೇಳುತ್ತದೆ.

    MORE
    GALLERIES