Karnataka JDS: ಯುವ ಜನತಾದಳ ಅಧ್ಯಕ್ಷ ಸ್ಥಾನಕ್ಕೆ ನಿಖಿಲ್ ರಾಜೀನಾಮೆ, ಇವರೇನಾ ಹೊಸ ಸಾರಥಿ?
ರಾಜ್ಯ ಚುನವಣೆಯಲ್ಲಿ ಕಾಂಗ್ರೆಸ್ ಬಹುಮತ ಗಳಿಸಿದೆ. ಇದು ಬಿಜೆಪಿ ಹಾಗೂ ಜೆಡಿಎಸ್ಗೆ ಭಾರೀ ಹಿನ್ನಡೆಯನ್ನುಂಟು ಮಾಡಿದೆ. ಸೋಲಿನ ಹಿಂದಿನ ಕಾರಣಗಳನ್ನು ಹುಡುಕಿ ತಪ್ಪು ಸರಿಪಡಿಸಿಕೊಳ್ಳಲು ಉಭಯ ಪಕ್ಷಗಳು ಯತ್ನಿಸುತ್ತಿವೆ. ಹೀಗಿರುವಾಗ ರಾಜಕೀಯ ವಲಯವು ಹಲವಾರು ಬದಲಾವಣೆಗಳಿಗೆ ಸಾಕ್ಷಿಯಾಗುತ್ತಿದೆ. ಈಗಾಗಲೇ ನಿಖಿಲ್ ಕುಮಾರಸ್ವಾಮಿ ಯುವ ಜನತಾದಳ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಸದ್ಯ ಈ ಸ್ಥಾನಕ್ಕೆ ಹೊಸ ನಾಯಕನ ಹುಡುಕಾಟ ಆರಂಭವಾಗಿದೆ.