ನಿಧಿ ಇದ್ದರೂ ಅದನ್ನು ಹೊರತೆಗೆಯುವಂತಿಲ್ಲ, ಅದು ಗ್ರಾಮದ ದೈವಗಳ ಭಂಡಾರದ ಸ್ವತ್ತಾಗಿದ್ದು, ಹೊರಗೆ ತೆಗೆದರೂ ಊರಿಗೆ ದೈವಗಳ ಶಾಪ ತಟ್ಟಬಹುದು ಎನ್ನುವುದು ಕೆಲ ಸ್ಥಳೀಯರ ವಾದವಾಗಿದೆ. ಸ್ವತಃ ಜಾಗದ ಮಾಲಕರೇ ಈ ಸುದ್ದಿ ವದಂತಿ ಎಂದು ಹೇಳಿದ್ರೂ ಪೊಲೀಸರು ಮಾತ್ರ ಸತ್ಯಶೋಧನೆಗಿಳಿದಿದ್ದಾರೆ. ವದಂತಿಯನ್ನು ನಂಬಿ ರೈತನ ಹೊಲದಲ್ಲಿ ಹೊಂಡ ತೋಡಿದ ಪೊಲೀಸರು ನಿಧಿ ಸಿಗದಿದ್ದಲ್ಲಿ ಮಾತ್ರ ಬಂದ ದಾರಿಗೆ ಸುಂಕ ಇಲ್ಲ ಎಂದು ಬರೀ ಕೈಯಲ್ಲಿ ಹೋಗಬೇಕಾಗಿದೆ.