Vijayapura: ಭೀಮಾ ತೀರದ ಹಂತಕರ ಗ್ಯಾಂಗ್​ಗಳಿಗೆ ಎಚ್ಚರಿಕೆ; DMC ಹೆಸರು ಕೇಳುತ್ತಿದ್ದಂತೆ SP ಕೆಂಡಾಮಂಡಲ

ಇಂದು ಬೆಳಗ್ಗೆ ಭೀಮಾ ತೀರದ ಹಂತಕರ ಗ್ಯಾಂಗ್​ಗಳಿಗೆ ವಿಜಯಪುರದ SP ಆನಂದಕುಮಾರ್ ಖಡಕ್ ಎಚ್ಚರಿಕೆ ನೀಡಿದರು.

First published:

  • 17

    Vijayapura: ಭೀಮಾ ತೀರದ ಹಂತಕರ ಗ್ಯಾಂಗ್​ಗಳಿಗೆ ಎಚ್ಚರಿಕೆ; DMC ಹೆಸರು ಕೇಳುತ್ತಿದ್ದಂತೆ SP ಕೆಂಡಾಮಂಡಲ

    ಆನಂದಕುಮಾರ್ ಅವರ ನೇತೃತ್ವದಲ್ಲಿ ರೌಡಿಗಳ ಪರೇಡ್ ನಡೆಸಲಾಯ್ತು. ಪೋಲೀಸರ ಸೂಚನೆ ಹಿನ್ನೆಲೆ ಕಂಟ್ರಿ ಪಿಸ್ತೂಲ್, ಸಾಗಾಟ ಮಾರಾಟ ಪ್ರಕರಣದಲ್ಲಿ ಭಾಗಿಯಾಗಿ ಜಾಮೀನಿನ ಮೇಲೆ ಹೊರ ಬಂದಿರುವ ಎಲ್ಲರೂ ಪೊಲೀಸ್ ಪರೇಡ್ ಮೈದಾನಕ್ಕೆ ಆಗಮಿಸಿದ್ದರು.

    MORE
    GALLERIES

  • 27

    Vijayapura: ಭೀಮಾ ತೀರದ ಹಂತಕರ ಗ್ಯಾಂಗ್​ಗಳಿಗೆ ಎಚ್ಚರಿಕೆ; DMC ಹೆಸರು ಕೇಳುತ್ತಿದ್ದಂತೆ SP ಕೆಂಡಾಮಂಡಲ

    ಖುದ್ದು ಆನಂದಕುಮಾರ್ ಅವರೇ ಪ್ರತಿಯೊಬ್ಬರನ್ನ ಸಾಲಾಗಿ ಕರೆಸಿ ವಿಚಾರಣೆ ನಡೆಸಿದ್ದರು. ನಿಮ್ಮ ಮೇಲೆ ಯಾವ ಪ್ರಕರಣ ಇದೆ? ಸದ್ಯ ಎಲ್ಲಿರೋದು? ಯಾವ ಕೆಲಸ ಮಾಡ್ತಿರೋದು ಎಂಬಿತ್ಯಾದಿ ಪ್ರಶ್ನೆಗಳನ್ನ ಕೇಳಿದರು.

    MORE
    GALLERIES

  • 37

    Vijayapura: ಭೀಮಾ ತೀರದ ಹಂತಕರ ಗ್ಯಾಂಗ್​ಗಳಿಗೆ ಎಚ್ಚರಿಕೆ; DMC ಹೆಸರು ಕೇಳುತ್ತಿದ್ದಂತೆ SP ಕೆಂಡಾಮಂಡಲ

    ಈ ವೇಳೆ ತಾವು ಡಿಎಂಸಿ ಗ್ಯಾಂಗ್ ಬಾಯ್ಸ್ ಅಂತ ಹೇಳಿದ್ದರಿಂದ SP ಆನಂದಕುಮಾರ್ ಕೆಂಡಾಮಂಡಲಾರದರು. ಮುಂದೆ ಯಾವುದೇ ಅಪರಾಧ ಚಟುವಟಿಕೆಯಲ್ಲಿ ತೊಡಗಿಕೊಳ್ಳಬಾರದು ಮತ್ತು ಪರೋಕ್ಷವಾಗಿ ಬೆಂಬಲ ನೀಡುವ ಕೆಲಸ ಮಾಡಬಾರದು ಎಂದು ಡಿಎಂಸಿ ಗ್ಯಾಂಗ್ ಸದಸ್ಯರಿಗೆ ಎಚ್ಚರಿಕೆ ನೀಡಿದರು.

    MORE
    GALLERIES

  • 47

    Vijayapura: ಭೀಮಾ ತೀರದ ಹಂತಕರ ಗ್ಯಾಂಗ್​ಗಳಿಗೆ ಎಚ್ಚರಿಕೆ; DMC ಹೆಸರು ಕೇಳುತ್ತಿದ್ದಂತೆ SP ಕೆಂಡಾಮಂಡಲ

    ಡಿಎಂಸಿ ಗ್ರೂಪ್ ಅಂದರೆ ಧರ್ಮರಾಜ್ ಮಲ್ಲಿಕಾರ್ಜುನ್ ಚಡಚಣ ಎಂದರ್ಥ. ಈ ಧರ್ಮರಾಜ್ ಮಲ್ಲಿಕಾರ್ಜುನ್ ಚಡಚಣ ಪೊಲೀಸರ ನಕಲಿ ಎನ್​ಕೌಂಟರ್​ನಲ್ಲಿ ಸಾವನ್ನಪ್ಪಿದ್ದನು.

    MORE
    GALLERIES

  • 57

    Vijayapura: ಭೀಮಾ ತೀರದ ಹಂತಕರ ಗ್ಯಾಂಗ್​ಗಳಿಗೆ ಎಚ್ಚರಿಕೆ; DMC ಹೆಸರು ಕೇಳುತ್ತಿದ್ದಂತೆ SP ಕೆಂಡಾಮಂಡಲ

    ಧರ್ಮರಾಜ್ ಸಾವಿನ ಬಳಿಕ ಆತನ ಹೆಸರಿನಲ್ಲಿ ಕೆಲ ರೌಡಿಗಳು ಡಿಎಂಸಿ ಗ್ಯಾಂಗ್ ಕಟ್ಟಿಕೊಂಡಿದ್ದರು. ಈ ತಂಡದ ಸದಸ್ಯರು 2019 ನವೆಂಬರ್ 2 ರಂದು ಕನ್ನಾಳ ಕ್ರಾಸ್ ಬಳಿ ಮಹಾದೇವ ಬೈರಗೊಂಡ ಮೇಲೆ ದಾಳಿ ಮಾಡಿದ್ದರು. ಸದ್ಯ ಎಲ್ಲರೂ ಜಾಮೀನಿನ ಮೇಲೆ ಹೊರ ಬಂದಿದ್ದಾರೆ.

    MORE
    GALLERIES

  • 67

    Vijayapura: ಭೀಮಾ ತೀರದ ಹಂತಕರ ಗ್ಯಾಂಗ್​ಗಳಿಗೆ ಎಚ್ಚರಿಕೆ; DMC ಹೆಸರು ಕೇಳುತ್ತಿದ್ದಂತೆ SP ಕೆಂಡಾಮಂಡಲ

    ಏನ್ ಡಿಎಂಸಿ ಅಂದ್ರೆ, ಆಕ್ಟಿವ್ ಇದೆಯಾ ಆ ಗ್ರೂಪ್, ಇನ್ನೂ ಮುಂದೇ ಅದೆಲ್ಲಾ ಮಾಡಿದ್ರೆ ಹುಷಾರ್‌. ಇಲ್ಲಾ ಅಂದ್ರೆ ನಿಮ್ಮ ಮೂಳೆಗಳನ್ನ ಮುರಿದು ಹಾಕ್ತೀವಿ ಎಂದು ಆನಂದಕುಮಾರ್ ಎಚ್ಚರಿಕೆ ನೀಡಿದರು.

    MORE
    GALLERIES

  • 77

    Vijayapura: ಭೀಮಾ ತೀರದ ಹಂತಕರ ಗ್ಯಾಂಗ್​ಗಳಿಗೆ ಎಚ್ಚರಿಕೆ; DMC ಹೆಸರು ಕೇಳುತ್ತಿದ್ದಂತೆ SP ಕೆಂಡಾಮಂಡಲ

    ಇದೇ ವೇಳೆ ಇತರೆ ರೌಡಿಗಳಿಗೆ ಎಚ್ಚರಿಕೆ ನೀಡಿ, ಅವರಿಂದ ಚಾಲ್ತಿ ವಿಳಾಸವನ್ನು ಪಡೆದುಕೊಂಡರು. ಪರೇಡ್ ವೇಳೆ ಕೆಲವರಿಗೆ ಲಾಠಿ ಏಟು ಸಹ ಬಿತ್ತು.

    MORE
    GALLERIES