Kantara: ನನ್ನ ಮೇಲೆ ಕಾಂತಾರ ದೇವಿ ಬರ್ತಾಳೆ ಅಂತಿದ್ದ ಮಹಿಳೆ ವಿರುದ್ಧ ದೂರು ದಾಖಲು
ಕನ್ನಡದ ಕಾಂತಾರ ಸಿನಿಮಾ ವಿಶ್ವಮಟ್ಟದಲ್ಲಿ ಸದ್ದು ಮಾಡಿದ ಚಿತ್ರ. ಈ ಚಿತ್ರ ರಿಲೀಸ್ ಬಳಿಕ ದೈವಾರಾಧನೆ ಬಗ್ಗೆ ತಿಳಿದುಕೊಳ್ಳಲು ಜನರು ಮುಂದಾಗುತ್ತಿದ್ದಾರೆ. ದೈವದ ಪವಾಡಗಳಿಗೆ ಅಚ್ಚರಿ ವ್ಯಕ್ತಪಡಿಸುತ್ತಿರುವ ಜನರು ಅವುಗಳ ಮೊರೆ ಹೋಗುತ್ತಿದ್ದಾರೆ.
ಈ ಸಿನಿಮಾದ ಯಶಸ್ಸನ್ನು ಕೆಲವರು ಬಂಡವಾಳ ಮಾಡಿಕೊಳ್ಳಲು ಮುಂದಾಗಿರೋದು ಈ ಹಿಂದೆ ವರದಿಯಾಗಿತ್ತು. ಇತ್ತೀಚೆಗೆ ಹಣಕ್ಕಾಗಿ ದೈವ ಕಟ್ಟೆ ನಿರ್ಮಿಸೋರಿಗೆ ತುಳುನಾಡ ದೈವಾರಾಧಕರು ಎಚ್ಚರಿಕೆ ಸಹ ನೀಡಿದ್ದರು.
2/ 7
ದೈವದ ಹೆಸರಲ್ಲಿ ಅನೇಕರು ಹಣ ಮಾಡಲು ಹೊರಟಿದ್ದಾರೆ ಎನ್ನುವ ಆರೋಪ ಕೇಳಿ ಬರ್ತಿದೆ. ಇದೀಗ ಇಂತಹವುದೇ ಒಂದು ಪ್ರಕರಣ ಮಂಡ್ಯದಲ್ಲಿ ಬೆಳಕಿಗೆ ಬಂದಿದೆ.
3/ 7
ಮಂಡ್ಯ ಜಿಲ್ಲೆಯ ಮಳವಳ್ಳಿ ಪಟ್ಟಣದ ಪೇಟೆ ಬೀದಿಯ ಶಿವಲಿಂಗಮ್ಮ ಎಂಬ ಮಹಿಳೆ ವಿರುದ್ಧ ಎನ್ಸಿಆರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
4/ 7
ಕಾಂತಾರ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಕೂಗುವ ರೀತಿಯಲ್ಲಿ ಓ ಎಂದು ಕೂಗುತ್ತಾ ಜನರಿಗೆ ಮೋಸ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.
5/ 7
ಶಿವಲಿಂಗಮ್ಮ ಓ ಎಂದು ಕೂಗುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ತನ್ನ ಬಳಿ ಬರುವ ಜನರಿಗೆ ಮಹಿಳೆ ನಿಂಬೆಹಣ್ಣು ನೀಡುತ್ತಿರುವ ದೃಶ್ಯಗಳು ವೈರಲ್ ಆಗಿವೆ.
6/ 7
ತನ್ನ ಮೇಲೆ ಕಾಂತಾರ ದೇವಿ ಬರುತ್ತಂತೆ. ಹೀಗೆ ಮಹಿಳೆ ಜನರಿಗೆ ಮೋಸ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.
7/ 7
ಬೆಂಗಳೂರು, ಮೈಸೂರು ಭಾಗದ ಜನರು ದೈವನಂಬಿಕೆಗಳನ್ನು ಮುರಿದು, ಪ್ರಚಾರಕ್ಕಾಗಿ, ದುಡ್ಡು ಮಾಡುವುದಕ್ಕಾಗಿ ಅಲ್ಲಲ್ಲಿ ದೈವದ ಕಟ್ಟೆಗಳನ್ನು ಸ್ಥಾಪಿಸಿ ಗೂಗಲ್ ಪೇ ಮಾಡಿ, ಫೋನ್ ಪೇ ಮಾಡಿ ಎನ್ನುತ್ತಿದ್ದಾರೆ.