ತುಮಕೂರಿನಲ್ಲಿ ತ್ರಿವಿಧ ದಾಸೋಹಿ ಶಿವಕುಮಾರ ಶ್ರೀಗಳ ಗದ್ದುಗೆ ದರ್ಶನ ಪಡೆಯಲಿರುವ ಪ್ರಧಾನಿ ಮೋದಿ
ತ್ರಿವಿಧ ದಾಸೋಹಿ ತುಮಕೂರಿನ ಸಿದ್ದಗಂಗಾ ಶ್ರೀಗಳು ನಡೆದಾಡುವ ದೇವರು ಎಂದೇ ಖ್ಯಾತಿ ಪಡೆದವರು. ಅವರ ಲಿಂಗೈಕ್ಯಗೊಂಡು ಈಗ ವರ್ಷಗಳು ಕಳೆದಿವೆ. ಮಠದಲ್ಲಿರುವ ಅವರ ಗದ್ದುಗೆ ದರ್ಶನಕ್ಕೆ ಭಕ್ತರ ದೇಶದ ಮೂಲೆ ಮೂಲೆಯಿಂದ ಬಂದು ಆಶೀರ್ವಾದ ಪಡೆಯುತ್ತಿದ್ದಾರೆ. ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಮಠಕ್ಕೆ ಆಗಮಿಸಲಿದ್ದು, ಗದ್ದುಗೆ ದರ್ಶನ ಪಡೆಯಲಿದ್ದಾರೆ.