Karnataka Elections: ಬಿಜೆಪಿ ಪರ ಮೋದಿ ಪ್ರಚಾರ, ಪ್ರಧಾನಿ ರೋಡ್ ಶೋಗೆ 3 ಸಾವಿರ ಪೊಲೀಸರಿಂದ ಭದ್ರತೆ!

ಕರ್ನಾಟಕ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವಂತೆ ಚುನಾವಣಾ ಅಖಾಡ ರಂಗೇರುತ್ತಿದೆ. ಅತ್ತ ರಾಷ್ಟ್ರೀಯ ನಾಯಕರ ದಂಡೇ ಕರ್ನಾಟಕದಲ್ಲಿ ವಾಸ್ತವ್ಯ ಹೂಡಿದೆ. ಪ್ರಧಾನಿ ಮೋದಿಯೂ ಕರುನಾಡಿನತ್ತ ಮುಖ ಮಾಡಿದ್ದು, ಸಾಲು ಸಾಲು ಸಮಾವೇಶಗಳಲ್ಲಿ ಭಾಗಿಯಾಗಿ ಬಿಜೆಪಿ ಪರ ಪ್ರಚಾರ ನಡೆಸುತ್ತಿದ್ದಾರೆ. ಇನ್ನು ನಾಳೆ ಪಿಎಂ ಮೋದಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ರೋಡ್​ ಶೋ ನಡೆಸಲಿದ್ದು, ಮೂರು ಸವಿರ ಮಂದಿ ಪೊಲೀಸರ ಭದ್ರತೆ ಏರ್ಪಡಿಸಲಾಗಿದೆ.

First published:

  • 17

    Karnataka Elections: ಬಿಜೆಪಿ ಪರ ಮೋದಿ ಪ್ರಚಾರ, ಪ್ರಧಾನಿ ರೋಡ್ ಶೋಗೆ 3 ಸಾವಿರ ಪೊಲೀಸರಿಂದ ಭದ್ರತೆ!

    ಹೌದು ಕರ್ನಾಟಕ ಚುನಾವಣೆಗೆ ದಿನಗಣನೆ ಆರಂಭವಾಗುತ್ತಿದ್ದಂತೆಯೇ ಪ್ರಧಾನಿ ಮೋದಿ ಕರುನಾಡಿನ ಪ್ರವಾಸ ಕೈಗೊಳ್ಳಲಾರಂಭಿಸಿದ್ದಾರೆ. ನಾಳೆ, ಶನಿವಾರ ಮೋದಿ ಬೆಂಗಳೂರಿನಲ್ಲಿ ರೋಡ್​ ಶೋ ನಡೆಸಲಿದ್ದಾರೆ.

    MORE
    GALLERIES

  • 27

    Karnataka Elections: ಬಿಜೆಪಿ ಪರ ಮೋದಿ ಪ್ರಚಾರ, ಪ್ರಧಾನಿ ರೋಡ್ ಶೋಗೆ 3 ಸಾವಿರ ಪೊಲೀಸರಿಂದ ಭದ್ರತೆ!

    ಪಿಎಂ ಮೋದಿ ರೋಡ್​ ಶೋ ಹಿನ್ನೆಲೆ ಬಿಗಿ ಬಂದೋಬಸ್ತ್​ ಕೈಗೊಳ್ಳಲಾಗಿದೆ. ಪಿಎಂ ಮೋದಿ ರೋಡ್​ ಶೋಗೆ 3 ಸಾವಿರ ಪೊಲೀಸರ ಭದ್ರತೆ ಏರ್ಪಡಿಸಲಾಗಿದೆ. ಮೋದಿ ಭದ್ರತೆ ಕುರಿತು ಎನ್ಎಸ್ ಜಿ ಹಾಗೂ ನಗರ ಪೊಲೀಸರ ಸಮಾಲೋಚನೆ ನಡೆಸಿದೆ.

    MORE
    GALLERIES

  • 37

    Karnataka Elections: ಬಿಜೆಪಿ ಪರ ಮೋದಿ ಪ್ರಚಾರ, ಪ್ರಧಾನಿ ರೋಡ್ ಶೋಗೆ 3 ಸಾವಿರ ಪೊಲೀಸರಿಂದ ಭದ್ರತೆ!

    ಇನ್ನು ಪೊಲೀಸರು ಈಗಾಗಲೇ ಭದ್ರತೆಯ ನೀಲನಕ್ಷೆ ತಯಾರಿಸಿದ್ದು, ಎನ್ಎಸ್ ಜಿ ಮತ್ತು ಪೊಲೀಸರು ರೋಡ್ ಶೋ ನಡೆಸುವ ಮಾರ್ಗ ಪರಿಶೀಲನೆ ನಡೆಸಿದ್ದಾರೆ.

    MORE
    GALLERIES

  • 47

    Karnataka Elections: ಬಿಜೆಪಿ ಪರ ಮೋದಿ ಪ್ರಚಾರ, ಪ್ರಧಾನಿ ರೋಡ್ ಶೋಗೆ 3 ಸಾವಿರ ಪೊಲೀಸರಿಂದ ಭದ್ರತೆ!

    ಮೋದಿ ಭದ್ರತೆಗಾಗಿ ಹೆಚ್ಚುವರಿ ಆಯುಕ್ತರ ನೇತೃತ್ವದಲ್ಲಿ 3 ಡಿಸಿಪಿಗಳು, 20 ಎಸಿಪಿಗಳು, 40 ಇನ್ಸ್‌ಪೆಕ್ಟರ್, 80 ಪಿಎಸ್ಐ ಸೇರಿ ಮೂರು ಸಾವಿರ ಪೊಲೀಸರು ನಿಯೋಜನೆ ಮಾಡಲಾಗಿದೆ.

    MORE
    GALLERIES

  • 57

    Karnataka Elections: ಬಿಜೆಪಿ ಪರ ಮೋದಿ ಪ್ರಚಾರ, ಪ್ರಧಾನಿ ರೋಡ್ ಶೋಗೆ 3 ಸಾವಿರ ಪೊಲೀಸರಿಂದ ಭದ್ರತೆ!

    ರೋಡ್ ಶೋ ವೇಳೆ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತೆ ವಹಿಸಲಾಗಿದ್ದು, ನೈಸ್ ರಸ್ತೆ ಜಂಕ್ಷನ್ ನಿಂದ ಸುಮನಹಳ್ಳಿ ವರೆಗೆ ರೋಡ್ ಶೋ ನಡೆಯಲಿದೆ.

    MORE
    GALLERIES

  • 67

    Karnataka Elections: ಬಿಜೆಪಿ ಪರ ಮೋದಿ ಪ್ರಚಾರ, ಪ್ರಧಾನಿ ರೋಡ್ ಶೋಗೆ 3 ಸಾವಿರ ಪೊಲೀಸರಿಂದ ಭದ್ರತೆ!

    ಸುಮಾರು 5.3 ಕಿಮೀ ರೋಡ್ ಶೋ ನಡೆಸಲಿರುವ ಮೋದಿ ಸುಮನಹಳ್ಳಿಯಿಂದ ರಸ್ತೆ ಮಾರ್ಗವಾಗಿ ರಾಜಭವನಕ್ಕೆ ಆಗಮಿಸಲಿದ್ದಾರೆ. ಹೀಗಾಗಿ ಮಾರ್ಗದುದ್ದಕ್ಕೂ ಪೊಲೀಸ್ ಸರ್ಪಗಾವಲು ನಿಯೋಜಿಸಲಾಗುತ್ತದೆ.

    MORE
    GALLERIES

  • 77

    Karnataka Elections: ಬಿಜೆಪಿ ಪರ ಮೋದಿ ಪ್ರಚಾರ, ಪ್ರಧಾನಿ ರೋಡ್ ಶೋಗೆ 3 ಸಾವಿರ ಪೊಲೀಸರಿಂದ ಭದ್ರತೆ!

    ಇನ್ನು ಮೇ 10ರಂದು ಕರ್ನಾಟಕ ವಿಧಾನಸಭಾ ಚುನಾವಣೆ ನಡೆಯಲಿದ್ದು, 13ರಂದು ಫಲಿತಾಂಶ ಬಹಿರಂಗವಾಗಲಿದೆ. ಹೀಗಿರುವಾಗ ಮುಂದೆ ರಾಜ್ಯದ ಚುಕ್ಕಾಣಿ ಯಾರ ಕೈ ಸೇರಲಿದೆ ಎಂಬ ಕುತೂಹಲ ಮನೆ ಮಾಡಿದೆ.

    MORE
    GALLERIES