ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಬರಗಿಯಲ್ಲಿ ಜಮೀನಿಗೆ ತಂತಿ ಬೇಲಿಗೆ ಅಕ್ರಮವಾಗಿ ಹಾಯಿಸಿದ್ದ ವಿದ್ಯುತ್ ತಗುಲಿ ಆನೆಯೊಂದು ಅಸ್ವಸ್ಥಗೊಂಡಿತ್ತು. ಪಶು ವೈದ್ಯರ ಸತತ ಚಿಕಿತ್ಸೆ ಹಾಗೂ ಅರಣ್ಯ ಸಿಬ್ಬಂದಿಯ ಆರೈಕೆ ಬಳಿಕ ಆನೆ ಚೇತರಿಸಿಕೊಂಡಿತ್ತು. ನಂತರ ಆನೆ ಕಾಡಿನತ್ತ ಸುರಕ್ಷಿತವಾಗಿ ಹಿಂದಿರುಗಿತ್ತು. ನಮ್ಮ ಮುಂಚೂಣಿ ಸಿಬ್ಬಂದಿ ನಮ್ಮ ಹೆಮ್ಮೆ ಎಂದು ಕೇಂದ್ರ ಅರಣ್ಯ ಸಚಿವ ಭೂಪೇಂದ್ರ ಯಾದವ್ ಟ್ವೀಟ್ ಮಾಡಿದ್ದರು. ಇದನ್ನು ನೋಡಿ ಸಂತೋಷವಾಯಿತು, ಬಂಡೀಪುರ ಅರಣ್ಯ ಸಿಬ್ಬಂದಿಗೆ ಅಭಿನಂದನೆಗಳು. ನಮ್ಮ ಜನರಲ್ಲಿ ಇಂತಹ ಸಹಾನುಭೂತಿ ಶ್ಲಾಘನೀಯ ಎಂದು ರೀಟ್ವೀಟ್ ಮಾಡಿ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಭೂಪೇಂದ್ರ ಯಾದವ್ ಅವರು ಟ್ವೀಟ್ನಲ್ಲಿ ಎರಡು ವಿಡಿಯೋ ಮತ್ತು ಎರಡು ಫೋಟೋ ಹಂಚಿಕೊಂಡಿದ್ದಾರೆ. ಒಂದು ವಿಡಿಯೋದಲ್ಲಿ ಆನೆಗೆ ಚಿಕಿತ್ಸೆ ನೀಡುತ್ತಿರೋದನ್ನು ಗಮನಿಸಬಹುದಾಗಿದೆ. ಇನ್ನೊಂದು ವಿಡಿಯೋದಲ್ಲಿ ಆನೆ ಹಿಂದಿರುಗಿ ಅರಣ್ಯಕ್ಕೆ ಹೋಗುತ್ತಿರೋದನ್ನು ನೋಡಬಹುದು. ಸದ್ಯ ಈ ವಿಡಿಯೋ ಮತ್ತು ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಅಗ್ತಿವೆ. ಭೂಪೇಂದ್ರ ಯಾದವ್ ಹಂಚಿಕೊಂಡಿರುವ ಒಂದು ವಿಡಿಯೋಗೆ 45 ಸಾವಿರ ಮತ್ತು ಕ್ಲಿಪ್ಗೆ 13 ಸಾವಿರಕ್ಕೂ ಅಧಿಕ ವ್ಯೂವ್ ಬಂದಿವೆ. (ಸಾಂದರ್ಭಿಕ ಚಿತ್ರ)