ಕೃಷ್ಣೆಯ ರೌದ್ರ ಅವತಾರಕ್ಕೆ ಇಡೀ ಉತ್ತರ ಕರ್ನಾಟಕ ಅಕ್ಷರಶಃ ನಲುಗಿದೆ. ಭೀಕರ ಪ್ರವಾಹ ಉಂಟಾಗಿ ಮನೆ-ಮಠ ಕೊಚ್ಚಿ ಹೋಗಿವೆ. ಕಷ್ಟ ಪಟ್ಟು ಬೆಳೆದಿದ್ದ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ಜನರ ಬದುಕು ಬೀದಿಗೆ ಬಿದ್ದಿದೆ. ನಿನ್ನೆಯಿಂದ ಪ್ರವಾಹ ಇಳಿಮುಖವಾಗಿದೆ. ಕೃಷ್ಣೆಯ ಅಬ್ಬರ ಕಡಿಮೆಯಾಗಿದೆ, ನೆರೆ ಪೀಡಿತ ಪ್ರದೇಶಗಳು ಮತ್ತೆ ಚೇತರಿಕೆ ಕಾಣುವ ತವಕದಲ್ಲಿವೆ. ನೆರೆ ಇಳಿದ ಬಳಿಕ ಬಾಗಲಕೋಟೆಯ ಕೆಲವೊಂದು ದೃಶ್ಯಗಳು ಇಲ್ಲಿವೆ.