Bengaluru: ಜಿಮ್​ಗೆ ಹೋದವ ಕೊಲೆಯಾದ ; ಇತ್ತ ಗಾರೇಬಾವಿಪಾಳ್ಯದಲ್ಲಿ ಅಪರಿಚಿತ ಶವ ಪತ್ತೆ

ಸಿಲಿಕಾನ್ ಸಿಟಿಯಲ್ಲಿ ಬೆಳಗ್ಗೆ ನೆತ್ತರು ಹರಿದಿದೆ. ಹಣಕಾಸಿನ ವಿಷಯಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೋರ್ವನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದ್ರೆ, ಬಂಡೆಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶವ ಪತ್ತೆಯಾಗಿದೆ.

First published:

 • 18

  Bengaluru: ಜಿಮ್​ಗೆ ಹೋದವ ಕೊಲೆಯಾದ ; ಇತ್ತ ಗಾರೇಬಾವಿಪಾಳ್ಯದಲ್ಲಿ ಅಪರಿಚಿತ ಶವ ಪತ್ತೆ

  ಲಿಯಾಖತ್ ಅಲಿಖಾನ್( 44) ಕೊಲೆಯಾದ ವ್ಯಕ್ತಿ. ನಾಯಂಡಹಳ್ಳಿ ಚೆಟ್ಟೀಸ್ ಪೆಟ್ರೊಲ್ ಬಂಕ್ ಬಳಿಯ ಮನೆಯೊಂದರಲ್ಲಿ ಬರ್ಬರ ಹತ್ಯೆ ನಡೆದಿದೆ.

  MORE
  GALLERIES

 • 28

  Bengaluru: ಜಿಮ್​ಗೆ ಹೋದವ ಕೊಲೆಯಾದ ; ಇತ್ತ ಗಾರೇಬಾವಿಪಾಳ್ಯದಲ್ಲಿ ಅಪರಿಚಿತ ಶವ ಪತ್ತೆ

  ಸೋಮವಾರ ರಾತ್ರಿ 8 ಗಂಟೆಗೆ ಜಿಮ್​ಗೆ ಹೋಗ್ತೀನಿ ಅಂತ ಹೇಳಿ ಲಿಯಾಖತ್ ಮನೆಯಿಂದ ಹೊರಗೆ ಹೋಗಿದ್ದರು. ರಾತ್ರಿ 11 ಗಂಟೆಯಾದ್ರೂ ಲಿಯಾಖತ್ ಮನೆಗೆ ಹಿಂದಿರುಗಿರಲಿಲ್ಲ.

  MORE
  GALLERIES

 • 38

  Bengaluru: ಜಿಮ್​ಗೆ ಹೋದವ ಕೊಲೆಯಾದ ; ಇತ್ತ ಗಾರೇಬಾವಿಪಾಳ್ಯದಲ್ಲಿ ಅಪರಿಚಿತ ಶವ ಪತ್ತೆ

  ಮನೆಗೆ ಬರದ ಹಿನ್ನೆಲೆ ಕುಟುಂಬಸ್ಥರು ಕಾಲ್ ಮಾಡಿದ್ದ್ದಾರೆ. ಆದರೆ ಲಿಯಾಖತ್ ಮೊಬೈಲ್ ಸ್ವಿಚ್ಛ್ ಆಫ್ ಆಗಿತ್ತು. ಆತಂಕದಲ್ಲಿ ಕುಟುಂಬಸ್ಥರು ರಾತ್ರಿ ಲಿಯಾಖತ್​​ಗಾಗಿ ಹುಡುಕಾಟ ನಡೆಸಿದ್ದರು.

  MORE
  GALLERIES

 • 48

  Bengaluru: ಜಿಮ್​ಗೆ ಹೋದವ ಕೊಲೆಯಾದ ; ಇತ್ತ ಗಾರೇಬಾವಿಪಾಳ್ಯದಲ್ಲಿ ಅಪರಿಚಿತ ಶವ ಪತ್ತೆ

   ಮನೆಯೊಂದರಲ್ಲಿ ಲಿಯಾಖತ್ ಶವ ಪತ್ತೆ

  ಇಂದು ಬೆಳಗಿನ ಜಾವ ಲಿಯಾಖತ್ ಶವ ನಾಯಂಡಹಳ್ಳಿಯ ಮನೆಯೊಂದರಲ್ಲಿ ಪತ್ತೆಯಾಗಿದೆ. ಸದ್ಯ ಶವವನ್ನ ಮರಣೋತ್ತರ ಪರೀಕ್ಷೆಗೆ ಪೊಲೀಸರು ರವಾನಿಸಿದ್ದಾರೆ.

  MORE
  GALLERIES

 • 58

  Bengaluru: ಜಿಮ್​ಗೆ ಹೋದವ ಕೊಲೆಯಾದ ; ಇತ್ತ ಗಾರೇಬಾವಿಪಾಳ್ಯದಲ್ಲಿ ಅಪರಿಚಿತ ಶವ ಪತ್ತೆ

  ಲಿಯಾಖತ್ ಸ್ನೇಹಿತರಾದ ವಾಸೀಂ ಮತ್ತು  ಜೋಹರ್ ಎಂಬವರು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಹಣಕಾಸಿನ ವೈಷಮ್ಯ ಹಿನ್ನೆಲೆ ಹತ್ಯೆ ನಡೆದಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 68

  Bengaluru: ಜಿಮ್​ಗೆ ಹೋದವ ಕೊಲೆಯಾದ ; ಇತ್ತ ಗಾರೇಬಾವಿಪಾಳ್ಯದಲ್ಲಿ ಅಪರಿಚಿತ ಶವ ಪತ್ತೆ

  ಈ ಸಂಬಂಧ ಚಂದ್ರಾಲೇಔಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ. ವಾಸೀಂ ಮತ್ತು ಜೋಹರ್ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 78

  Bengaluru: ಜಿಮ್​ಗೆ ಹೋದವ ಕೊಲೆಯಾದ ; ಇತ್ತ ಗಾರೇಬಾವಿಪಾಳ್ಯದಲ್ಲಿ ಅಪರಿಚಿತ ಶವ ಪತ್ತೆ

   ಅಪರಿಚಿತ ವ್ಯಕ್ತಿಯ ಬರ್ಬರ ಕೊಲೆ

  ಬೆಳಗಿನ ಜಾವ  ಗಾರೇಬಾವಿಪಾಳ್ಯ ಮುಖ್ಯ ರಸ್ತೆಯಲ್ಲಿ ಅಪರಿಚಿತ ಶವವೊಂದು ಪತ್ತೆಯಾಗಿತ್ತು. ಶವ ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ರಾಡ್​ನಿಂದ ಹೊಡೆದು ವ್ಯಕ್ತಿಯ ಕೊಲೆ ಮಾಡಲಾಗಿತ್ತು. ರಾತ್ರಿ ಎರಡು ಗಂಟೆ ಈ ಕೊಲೆ ನಡೆದಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 88

  Bengaluru: ಜಿಮ್​ಗೆ ಹೋದವ ಕೊಲೆಯಾದ ; ಇತ್ತ ಗಾರೇಬಾವಿಪಾಳ್ಯದಲ್ಲಿ ಅಪರಿಚಿತ ಶವ ಪತ್ತೆ

  ಕೊಲೆಯಾದ ವ್ಯಕ್ತಿಯನ್ನು ಶರವಣ ಎಂದು ಗುರುತಿಸಲಾಗಿದ್ದು, ಮೃತ ವ್ಯಕ್ತಿ ಪುಟ್ಟೇನಹಳ್ಳಿಯಲ್ಲಿ ಹೊಟೇಲ್ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಬಂಡೆಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶವ ಪತ್ತೆಯಾಗಿದೆ. (ಸಾಂದರ್ಭಿಕ ಚಿತ್ರ)

  MORE
  GALLERIES