ಕತ್ತಲೆ ತೊಡೆದು ಹಾಕಿ ಹೊಸ ಬೆಳಕನ್ನು ಸೃಷ್ಟಿಸುವ ಹಬ್ಬವೇ ದೀಪಾವಳಿ. ಮನೆ ಮನೆಯಲ್ಲಿ ದೀಪ ಬೆಳಕಿಸುವ ಮೂಲಕ ಆಚರಿಸುವ ಈ ಹಬ್ಬಕ್ಕೆ ಹಿಂದೂ ಸಂಪ್ರದಾಯದಲ್ಲಿ ವಿಶೇಷ ಮಾನ್ಯತೆ. ಇನ್ನು ಈ ಹಬ್ಬಕ್ಕಾಗಿ ವಿಶೇಷವಾಗಿ ದೀಪಗಳನ್ನು ತಯಾರಿಸಲಾಗುತ್ತದೆ. ಹಬ್ಬಕ್ಕೆ ತಿಂಗಳು ಬಾಕಿ ಇದೆ ಎನ್ನುವಾಗಲೇ ಹದವಾದ ಮಣ್ಣನ್ನು ಕಲಸಿ, ದೀಪ ಮಾಡಿ ಅದನ್ನು ಸುಟ್ಟಿ ಮಾಡಲಾಗುತ್ತದೆ. ಇದರಿಂದ ದೀಪದ ಆಯುಷ್ಯ ಕೂಡ ದೀರ್ಘಕಾಲ ಇರುತ್ತದೆ.