Ayudha Puja: ಕೆ.ಆರ್​.ಮಾರ್ಕೆಟ್​ನಲ್ಲಿ ಜನಸಾಗರ; ಹೂವು-ಹಣ್ಣು ಖರೀದಿಗೆ ಮುಗಿಬಿದ್ದ ಜನರು

ರಾಜಧಾನಿ ಬೆಂಗಳೂರಿನಲ್ಲಿ ಆಯುಧ ಪೂಜೆ ಸಂಭ್ರಮ ಜೋರಾಗಿದೆ. ಜನರು ಹೂವು, ಹಣ್ಣು, ಬಾಳೆದಿಂಡು ಖರೀದಿಸಲು ಕೆ.ಆರ್​.ಮಾರ್ಕೆಟ್​ಗೆ ಮುಗಿಬಿದ್ದಿದ್ಧಾರೆ. ಬೆಂಗಳೂರಿನ ಕೆ.ಆರ್.ಮಾರ್ಕೆಟ್​​ಗೆ ಹೂವು ಹಣ್ಣು ಖರೀದಿಸಲು ಜನಸಾಗರವೇ ಹರಿದು ಬಂದಿದೆ. ಹೀಗಾಗಿ ಮಾರ್ಕೆಟ್​ ಜನ ಜಂಗುಳಿಯಿಂದ ಗಿಜಿಗುಡುತ್ತಿದೆ. ಹಬ್ಬದ ಸಂಭ್ರಮದಲ್ಲಿರುವ ಗ್ರಾಹಕರು ಹೂವು, ಹಣ್ಣು, ಬಾಳೆದಿಂಡು ಖರೀದಿಯಲ್ಲಿ ನಿರತರಾಗಿದ್ಧಾರೆ. ಸಾವಿರಾರು ಸಂಖ್ಯೆಯಲ್ಲಿ ಜನರು ಮಾರ್ಕೆಟ್​​ನಲ್ಲಿ ಜಮಾಯಿಸಿದ್ಧಾರೆ.

First published: