ರೈತರಿಂದ ಲಕ್ಷ ಲಕ್ಷ ಹಣ ಪಡೆದುಕೊಂಡು ಮೋಸ ಮಾಡಿದ್ದ ನಕಲಿ ಸ್ವಾಮಿಯನ್ನು ಹಿಡಿದು ಧರ್ಮದೇಟು ನೀಡಿರುವ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಮುಳಥಳ್ಳಿ ಗ್ರಾಮದಲ್ಲಿ ನಡೆದಿದೆ.
2/ 8
ಗುರುಪಾದಯ್ಯ ವಿರಕ್ತಮಠ ಧರ್ಮದೇಟು ತಿಂದ ನಕಲಿ ಸ್ವಾಮಿ. ಧಾರವಾಡ ಮೂಲದ ವಿರಕ್ತಮಠದ ಸ್ವಾಮೀಜಿ ಎಂದು ಗುರುಪಾದಯ್ಯ ಹೇಳಿಕೊಂಡಿದ್ದನು.
3/ 8
ಗ್ರಾಮಕ್ಕೆ ಬಂದಾಗ ರೈತರಾದ ಉಮೇಶ್ ಹಾಗೂ ವೀರಪ್ಪ ಎಂಬವರಿಗೆ ಟ್ರ್ಯಾಕ್ಟರ್ಗೆ ಟೇಲರ್ ಕೊಡಿಸೋದಾಗಿ ನಂಬಿಸಿದ್ದನು. ಇಬ್ಬರಿಂದಲೂ 5 ಲಕ್ಷ ಹಣ ಪಡೆದುಕೊಂಡಿದ್ದ ಗುರುಪಾದಯ್ಯ ಎಸ್ಕೇಪ್ ಆಗಿದ್ದನು.
4/ 8
ಇದೀಗ ಆಕಸ್ಮಿಕವಾಗಿ ಸಿಕ್ಕಿ ಬಿದ್ದಿರುವ ಗುರುಪಾದಯ್ಯ ಸ್ವಾಮಿಯನ್ನು ಗ್ರಾಮದ ವೀರಭದ್ರೇಶ್ವರ ದೇವಸ್ಥಾನದಲ್ಲಿ ಕೂಡಿಹಾಕಿ ಬಿಸಿ ಮುಟ್ಟಿಸಿದ್ದಾರೆ.
5/ 8
ನಿಜವಾದ ಸ್ವಾಮೀಜಿಗಳಿಗೆ ಕಳಂಕ ತಂದು ರೈತರಿಗೆ ಮೋಸ ಮಾಡುತ್ತೀರಾ ಎಂದು ಗ್ರಾಮಸ್ಥರು ಧರ್ಮದೇಟು ಸಹ ನೀಡಿದ್ದಾರೆ. ರೈತರಿಂದ ಪಡೆದ ಹಣವನ್ನು ಹಿಂದಿರುಗಿಸುವಂತೆ ಗ್ರಾಮಸ್ಥರು ಸ್ವಾಮಿ ರಾತ್ರಿಯೆಲ್ಲಾ ಕಾದಿದ್ದಾರೆ.
6/ 8
ಆರಂಭದಲ್ಲಿ ನಕಲಿ ಸ್ವಾಮಿ ಗ್ರಾಮಸ್ಥರಿಗೆ ಅವಾಜ್ ಹಾಕಿದ್ದನು. ನನಗೆ ಅಮೃತ ದೇಸಾಯಿ, ಜಗದೀಶ್ ಶೆಟ್ಟರ್, ವಿನಯ್ ಕುಲಕರ್ಣಿ ಗೊತ್ತು ಎಂದು ಜನರಿಗೆ ಅವಾಹ್ ಹಾಕಿದ್ದನು. ಅವಾಜ್ ಹಾಕುತ್ತಿದ್ದಂತೆ ಆಕ್ರೋಶಿತರಾದ ಜನರು ಏಟು ನೀಡಿದ್ದಾರೆ.
7/ 8
ಶನಿವಾರ ರಾತ್ರಿಯಿಂದ ಇಂದಿನವರೆಗೂ ನಕಲಿ ಸ್ವಾಮಿಯನ್ನು ದೇವಸ್ಥಾನದಲ್ಲಿ ಕೂಡಿಹಾಕಿ ಕಾದಿದ್ದಾರೆ. ಹಣ ನೀಡುವರೆಗೂ ನಿಮ್ಮನ್ನ ಬಿಡಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ.
8/ 8
ಗ್ರಾಮಸ್ಥರು ಗುರುಪಾದಯ್ಯ ಸ್ವಾಮಿ ತಂದಿದ್ದ ಕಾರ್ ಸಹ ವಶಕ್ಕೆ ಪಡೆದುಕೊಂಡಿದ್ದಾರೆ. ಪಾದಪೂಜೆ ನೆಪದಲ್ಲಿ ಬೇರೆ ಗ್ರಾಮಗಳಲ್ಲಿ ಗುರುಪಾದಯ್ಯ ಮೋಸ ಮಾಡಿರುವ ಬಗ್ಗೆ ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ. (ವರದಿ: ರಮೇಶ್ ಬಿ.ಎಚ್.) (ಸಾಂದರ್ಭಿಕ ಚಿತ್ರ)
First published:
18
Fake Swamy: ರೈತರಿಗೆ ಲಕ್ಷ ಲಕ್ಷ ಪಂಗನಾಮ ಹಾಕಿದ್ದ ನಕಲಿ ಸ್ವಾಮಿಗೆ ಧರ್ಮದೇಟು