ತುಂಬಿ ಹರಿಯುತ್ತಿರುವ ತುಂಗಭದ್ರಾ ನದಿ ; ಆತಂಕದಲ್ಲಿ ನದಿ ಪಾತ್ರದ ಜನರು

ಗದಗ ಜಿಲ್ಲೆಯಲ್ಲಿ ಉಕ್ಕಿ ಹರಿಯುತ್ತಿರುವ ತುಂಗಭದ್ರಾ ನದಿಯಿಂದ ಆತಂಕ ಎದುರಾಗಿದೆ. ಜಿಲ್ಲೆಯ ಮುಂಡರಗಿ ತಾಲೂಕಿನ ಕೊರ್ಲಹಳ್ಳಿ ಗ್ರಾಮದ ಬಳಿ ಸಾಕಷ್ಟು ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಗ್ರಾಮಸ್ಥರಲ್ಲಿ ಆತಂಕ ಎದುರಾಗಿದೆ. ಕೊರ್ಲಹಳ್ಳಿ ಗ್ರಾಮದ ಸಮೀಪ ನೀರು ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿರುವುದರಿಂದ  ಗ್ರಾಮಕ್ಕೆ ನೀರು ನುಗ್ಗಿವ ಆತಂಕ ಎದುರಾಗಿದೆ. ಇನ್ನೂ ತುಂಗಭದ್ರಾ ನದಿ ದಡದಲ್ಲಿ ಕೃಷಿ ಉಪಯೋಗಿಸುವ ಪಂಪ‌ ಸೇಟ್ ಸಹ ‌ನೀರಿಗೆ ಆಹುತಿಯಾಗಿವೆ. ಇನ್ನೂ ಜಮೀನಿನಲ್ಲಿ ಬೆಳೆದ ಬೆಳೆ ಗೋವಿನ ಜೋಳ, ಶೇಂಗಾ,ಹತ್ತಿ,ಭತ್ತ ,ಕಬ್ಬು ಸೇರಿದಂತೆ ಹಲವು ಬೆಳೆ ಸಹ ಜಲಾವೃತವಾಗಿದೆ.

First published: