Bagalakote: ಬರೋಬ್ಬರಿ 14 ಲಕ್ಷ ರೂಪಾಯಿಗೆ ಮಾರಾಟವಾಗಿ ದಾಖಲೆ ನಿರ್ಮಿಸಿದ ಎತ್ತು

ಎರಡೂವರೆ ವರ್ಷದ ಹಿಂದೆ 5 ಲಕ್ಷ ರೂಪಾಯಿಗೆ ಖರೀದಿ ಮಾಡಿದ್ದ ಎತ್ತು, ಈಗ ಬರೋಬ್ಬರಿ 14 ಲಕ್ಷ ರೂಪಾಯಿಗೆ ಮಾರಾಟವಾಗಿದೆ.

First published:

  • 17

    Bagalakote: ಬರೋಬ್ಬರಿ 14 ಲಕ್ಷ ರೂಪಾಯಿಗೆ ಮಾರಾಟವಾಗಿ ದಾಖಲೆ ನಿರ್ಮಿಸಿದ ಎತ್ತು

    ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳುವುದರ ಜತೆಗೆ ಜಾನುವಾರುಗಳತ್ತ ಗಮನ ಹರಿಸಿದರೆ ಲಕ್ಷಗಟ್ಟಲೆ ಆದಾಯ ಗಳಿಸಬಹುದು ಎಂಬುದನ್ನು ರೈತರು ಸಾಬೀತು ಮಾಡುತ್ತಿದ್ದಾರೆ.

    MORE
    GALLERIES

  • 27

    Bagalakote: ಬರೋಬ್ಬರಿ 14 ಲಕ್ಷ ರೂಪಾಯಿಗೆ ಮಾರಾಟವಾಗಿ ದಾಖಲೆ ನಿರ್ಮಿಸಿದ ಎತ್ತು

    ಉದ್ಯೋಗ, ಬ್ಯುಸಿನೆಸ್ ಮಾತ್ರವಲ್ಲದೇ ಜಾನುವಾರುಗಳನ್ನು ಪೋಷಣೆ ಮಾಡಿದರೂ ಉತ್ತಮ ಆದಾಯಗಳಿಸಬಹುದು ಎಂದು ರೈತರೊಬ್ಬರು ಸಾಬೀತು ಮಾಡಿದ್ದಾರೆ.

    MORE
    GALLERIES

  • 37

    Bagalakote: ಬರೋಬ್ಬರಿ 14 ಲಕ್ಷ ರೂಪಾಯಿಗೆ ಮಾರಾಟವಾಗಿ ದಾಖಲೆ ನಿರ್ಮಿಸಿದ ಎತ್ತು

    ಹೌದು, ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಹಲಕಿ ಗ್ರಾಮದ ಕಾಶಿಲಿಂಗಪ್ಪ-ಯಮನಪ್ಪ ಗಡದಾರ ಕುಟುಂಬದ ಎತ್ತು ದಾಖಲೆ ಬೆಲೆಗೆ ಮಾರಾಟವಾಗಿದೆ.

    MORE
    GALLERIES

  • 47

    Bagalakote: ಬರೋಬ್ಬರಿ 14 ಲಕ್ಷ ರೂಪಾಯಿಗೆ ಮಾರಾಟವಾಗಿ ದಾಖಲೆ ನಿರ್ಮಿಸಿದ ಎತ್ತು

    ಬರೋಬ್ಬರಿ 14 ಲಕ್ಷ ರೂಪಾಯಿಗೆ ಎತ್ತು ಮಾರಾಟವಾಗಿದ್ದು, ರಬಕವಿ ಬನಹಟ್ಟಿ ತಾಲೂಕಿನ ನಂದಗಾಂವ ಗ್ರಾಮದ ವಿಠ್ಠಲ ಮ್ಯಾಗಾಡಿ ಎಂಬ ರೈತ 14 ಲಕ್ಷ ರೂಪಾಯಿಗೆ ಎತ್ತನ್ನು ಖರೀದಿ ಮಾಡಿದ್ದಾರೆ.

    MORE
    GALLERIES

  • 57

    Bagalakote: ಬರೋಬ್ಬರಿ 14 ಲಕ್ಷ ರೂಪಾಯಿಗೆ ಮಾರಾಟವಾಗಿ ದಾಖಲೆ ನಿರ್ಮಿಸಿದ ಎತ್ತು

    ಅಂದಹಾಗೇ, ಕಳೆದ ಎರಡೂವರೆ ವರ್ಷದ ಹಿಂದೆ ಗಡದಾರ ಕುಟುಂಬ ಈ ಎತ್ತನ್ನು 5 ಲಕ್ಷ ರೂಪಾಯಿಗೆ ಖರೀದಿ ಮಾಡಿತ್ತು. ಈಗ ಇದೇ ಎತ್ತು 14 ಲಕ್ಷ ರೂಪಾಯಿಗೆ ಮಾರಾಟವಾಗಿದೆ.

    MORE
    GALLERIES

  • 67

    Bagalakote: ಬರೋಬ್ಬರಿ 14 ಲಕ್ಷ ರೂಪಾಯಿಗೆ ಮಾರಾಟವಾಗಿ ದಾಖಲೆ ನಿರ್ಮಿಸಿದ ಎತ್ತು

    ಇದುವರೆಗೂ ಈ ಎತ್ತು ಬರೋಬ್ಬರಿ 50ಕ್ಕೂ ಹೆಚ್ಚು ಸ್ಪರ್ಧೆಗಳಲ್ಲಿ ಜಯಗಳಿಸಿದೆ. ಎತ್ತು ಜಯಿಸಿದ ಬಹುಮಾನಗಳಲ್ಲಿ 6 ಬೈಕ್, 5 ತೊಲೆ ಬಂಗಾರ, 12 ಲಕ್ಷ ರೂಪಾಯಿ ನಗದು ಸೇರಿದೆ.

    MORE
    GALLERIES

  • 77

    Bagalakote: ಬರೋಬ್ಬರಿ 14 ಲಕ್ಷ ರೂಪಾಯಿಗೆ ಮಾರಾಟವಾಗಿ ದಾಖಲೆ ನಿರ್ಮಿಸಿದ ಎತ್ತು

    ಕುಟುಂಬದ ಓರ್ವ ಸದಸ್ಯನಂತೆ ಎತ್ತನ್ನು ಸಾಕಿದ್ದ ಗಡದಾರ ಕುಟುಂಬ, ಇಂದು ಮಾರಾಟವಾದ ಎತ್ತಿಗೆ ಆರತಿ ಎತ್ತಿ, ಗುಲಾಲ್​ ಎರಚಿ ಬೀಳ್ಕೊಟ್ಟಿದ್ದಾರೆ.

    MORE
    GALLERIES