Firecrackers: ರಾಜ್ಯದಲ್ಲಿ ಪರಿಸರ ಸ್ನೇಹಿ ಪಟಾಕಿಗೆ ಮಾತ್ರ ಅವಕಾಶ! ಮಾಲಿನ್ಯ ನಿಯಂತ್ರಣಕ್ಕೆ ಕ್ರಮ
ದೀಪಾವಳಿ ಹಬ್ಬದ ಅಂದ್ರೆ ಪಟಾಕಿಯ ಸದ್ದು ಇರಲೇಬೇಕು. ಕಳೆದ ಎರಡು ವರ್ಷದಿಂದ ಕೊರೊನಾ ಹಿನ್ನೆಲೆ ಹಬ್ಬಗಳ ಆಚರಣೆ ಸರಳವಾಗಿತ್ತು. ಈ ಭಾರೀ ಎಲ್ಲಾ ಹಬ್ಬಗಳ ಆಚರಣೆ ಅದ್ಧೂರಿಯಾಗಿದ್ದು, ದೀಪಾವಳಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲು ಮುಂದಾದವರಿಗೆ ಪರಿಸರ ಮಾಲಿನ್ಯ ಮಂಡಳಿ ಶಾಕ್ ನೀಡಿದೆ.
ದೀಪಾವಳಿ ಹಬ್ಬಕ್ಕೆ ಕೆಲವೇ ದಿನಗಳು ಬಾಕಿ ಇದ್ದು, ಮಾಲಿನ್ಯ ಹೆಚ್ಚಾಗದಂತೆ ಪರಿಸರ ಮಾಲಿನ್ಯ ಮಂಡಳಿಯಿಂದ ಅಗತ್ಯ ಕ್ರಮಕ್ಕೆ ಮುಂದಾಗಿದೆ. ಈ ವರ್ಷವು ಹಸಿರು ಪಟಾಕಿಯನ್ನಷ್ಟೇ ಮಾರಲು ಅವಕಾಶ ಕಲ್ಪಿಸಲಾಗಿದೆ.
2/ 8
ಒಂದು ವೇಳೆ ಹಸಿರು ಪಟಾಕಿ ಹೊರೆತು ಪಡಿಸಿ ಬೇರೆ ಪಟಾಕಿ ಇಡುವುದು ಕಂಡುಬಂದರೆ ಮುಲಾಜಿಲ್ಲದೇ ಸೀಜ್ ಮಾಡುವಂತೆ ರಾಜ್ಯದ ಎಲ್ಲಾ ಜಿಲ್ಲೆಗಳ ಡಿಸಿಗಳಿಗೆ, ಪೋಲಿಸ್ ಇಲಾಖೆ, ಅಗ್ನಿ ಶಾಮಾಕ ಇಲಾಖೆ, ಶಿಕ್ಷಣ ಇಲಾಖೆ ಮತ್ತು ಬಿಬಿಎಂಪಿಗೆ ಸೂಚನೆ ನೀಡಲಾಗಿದೆ.
3/ 8
ರಾತ್ರಿ 8 ಗಂಟೆಯಿಂದ ರಾತ್ರಿ 10 ಗಂಟೆಯವರೆಗೂ ಮಾತ್ರ ಪಾಟಾಕಿ ಹೊಡೆಯಲು ಅವಕಾಶ. ಪರಿಸರ ಸ್ನೇಹಿ ಪಾಟಾಕಿಗಳನ್ನ ಹೊಡೆಯುವಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು.
4/ 8
ದೀಪಾವಳಿ ಹಬ್ಬಕ್ಕೂ ಮುಂಚೆ ಹಾಗೂ ನಂತರ ರಾಜಾಧಾನಿ ಹಾಗೂ ಜಿಲ್ಲಾ ವ್ಯಾಪ್ತಿಯಲ್ಲಿ ಎಷ್ಟೇಷ್ಟು ವಾಯುಮಾಲಿನ್ಯ ಹಾಗೂ ಶಬ್ದಮಾಲಿನ್ಯ ಆಗಲಿದೆ ಎನ್ನುವುದನ್ನ ಪತ್ತೆ ಮಾಡಲು ಮಾಪನ ಅಳವಡಿಕೆ ಮಾಡಲಾಗಿದೆ.
5/ 8
ಮಕ್ಕಳಿಗೆ ಪಟಾಕಿ ಕುರಿತು ಜಾಗೃತಿ ಮೂಡಿಸಲು ಶಿಕ್ಷಣ ಇಲಾಖೆಯಿಂದ ವಿಶೇಷ ಕಾರ್ಯಕ್ರಮ ಮಾಡಲಾಗುವುದು. ಕರ್ನಾಟಕದಲ್ಲಿ ಹಸಿರು ಪಟಾಕಿ ಬಗ್ಗೆ ಜನರಿಗೆ ಅರಿವು ಮೂಡಬೇಕಿದೆ,.
6/ 8
ಪಟಾಕಿ ಸ್ಟಾಲ್ಗಳ ಮೇಲೆ ಹದ್ದಿನ ಕಣ್ಣಿಡಲು ಪೋಲಿಸ್ ಇಲಾಖೆಯಗೂ ಸೂಚನೆ ನೀಡಲಾಗಿದೆ. ಪಟಾಕಿಯಿಂದಾಗುವ ತ್ಯಾಜ್ಯವನ್ನ ಹೊರಹಾಕಲು ಘನತ್ಯಾಜ್ಯ ವಾಹನಗಳ ನೇಮಕಕ್ಕೆ ಸ್ಥಳೀಯ ಸಂಸ್ಥೆಗಳಿಗೆ ಸೂಚಿಸಲಾಗಿದೆ.
7/ 8
ಪಟಾಕಿಗಳಿಂದಾಗುವ ಹಾನಿಯನ್ನ ತಪ್ಪಿಸಲು ಅಗ್ನಿಶಾಮಕ ಇಲಾಖೆಯೊಂದಿಗೂ ಚರ್ಚೆ ಮಾಡಿದ್ದು, ವಾಯುಮಾಲಿನ್ಯ ಹೆಚ್ಚಾಗದಂತೆ ಮಾಲಿನ್ಯ ನಿಯಂತ್ರಣ ಮಂಡಳಿ ಅಗತ್ಯ ಕ್ರಮ ತೆಗೆದುಕೊಳ್ಳುತ್ತಿದೆ.
8/ 8
ಕಡಿಮೆ ಬೆಳಕು ಮತ್ತು ಶಬ್ದವನ್ನು ಹೊರ ಹಾಕುವ ಮತ್ತು ಸಿಡಿದ ನಂತರ ನೈಟ್ರೋಜನ್, ಆಕ್ಸೈಡ್, ಸಲ್ಫರ್ ಡೈ ಆಕ್ಸೈಡ್ ಹೊರಚಲ್ಲುವ ಪಟಾಕಿಗಳನ್ನು ಹಸಿರು ಪಟಾಕಿ ಎನ್ನುತ್ತಾರೆ.