Onion, Tomoto price: ಬೆಂಗಳೂರಿನಲ್ಲಿ ಗಗನ ಮುಖಿಯಾದ ತರಕಾರಿಗಳು; ಈರುಳ್ಳಿ, ಟೊಮೆಟೊ ದರ ಹೆಚ್ಚಳಕ್ಕೆ ಇದು ಕೂಡ ಕಾರಣ

ಆಯುಧ ಪೂಜೆ, ದಸರಾ ಸಂಭ್ರಮದಲ್ಲಿರುವ ಜನರಿಗೆ ಬೆಲೆ ಏರಿಕೆ ಬಿಸಿ ಹೆಚ್ಚ ತೊಡಗಿದೆ. ಈಗಾಗಲೇ ದಿನಸಿ ಸಾಮಾಗ್ರಿಗಳು ಗಗನಮುಖಿಯಾಗಿದ್ದು, ಇದರ ಬೆನ್ನಲ್ಲೆ ಇದೀಗ ತರಕಾರಿ ಬೆಲೆಗಳು ಹೆಚ್ಚಿರುವುದು ಗಾಯದ ಮೇಲೆ ಬರೆ ಏಳೆದಂತೆ ಆಗಿದೆ. ಬೆಂಗಳೂರಿನಲ್ಲಿ ಈರುಳ್ಳಿ, ಟೊಮೆಟೊ ಬೆಲೆ 50 ರೂ ದಾಟಿದ್ದು, ಇನ್ನೆರಡು ದಿನದಲ್ಲಿ ಮತ್ತಷ್ಟು ಹೆಚ್ಚಳವಾಗಲಿದೆ

First published:

  • 15

    Onion, Tomoto price: ಬೆಂಗಳೂರಿನಲ್ಲಿ ಗಗನ ಮುಖಿಯಾದ ತರಕಾರಿಗಳು; ಈರುಳ್ಳಿ, ಟೊಮೆಟೊ ದರ ಹೆಚ್ಚಳಕ್ಕೆ ಇದು ಕೂಡ ಕಾರಣ

    ಕಳೆದ ಹದಿನೈದು ದಿನದ ಹಿಂದೆ 20-25ರೂ ಇದ್ದ ಈರುಳ್ಳಿ, ಟೊಮೆಟೊ ಬೆಲೆ ಇದೀಗ 50ರೂ ದಾಟಿದೆ. ಇದರ ಜೊತೆಗೆ ಇತರೆ ತರಕಾರಿಗಳ ಬೆಲೆ ಕೂಡ ಏರಿಕೆಯಾಗಿದೆ. ಇದರಿಂದ ಹಬ್ಬದ ಮುಂದೆ ಜನರಿಗೆ ಈ ಬೆಲೆ ಏರಿಕೆ ಬಿಸಿ ಶಾಕ್​ ಆಗಿದೆ.  ಅಡಿಗೆಗೆ ಮುಖ್ಯವಾಗಿ ಬೇಕಾಗಿರುವ ಈರುಳ್ಳಿ, ಟಮೊಟೊ ದರ ಹೆಚ್ಚಿರುವುದು ಜನರಿಗೆ  ಬರೆ ಎಳೆದಂತೆ ಆಗಿದೆ

    MORE
    GALLERIES

  • 25

    Onion, Tomoto price: ಬೆಂಗಳೂರಿನಲ್ಲಿ ಗಗನ ಮುಖಿಯಾದ ತರಕಾರಿಗಳು; ಈರುಳ್ಳಿ, ಟೊಮೆಟೊ ದರ ಹೆಚ್ಚಳಕ್ಕೆ ಇದು ಕೂಡ ಕಾರಣ

    ಇದು ಕೇವಲ ರಾಜಧಾನಿ ಬೆಂಗಳೂರಿನಲ್ಲಿ ಮಾತ್ರವಲ್ಲದೇ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕೂಡ ತರಕಾರಿ ನಲೆ ಏರಿಕೆಯಾಗಿದೆ. ಈ ರೀತಿ ಏಕಾಏಕಿ ಬೆಲೆ ಏರಿಕೆಯಾಗಿರುವ ಹಿನ್ನಲೆ ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ರೀತಿ ಏಕಾಏಕಿ ಬೆಲೆ ಏರಿಕೆಗೆ ಕಾರಣ ಹಬ್ಬ ಮತ್ತು ಮಳೆ ಎಂದರೆ ತಪ್ಪಾಗಲ್ಲ

    MORE
    GALLERIES

  • 35

    Onion, Tomoto price: ಬೆಂಗಳೂರಿನಲ್ಲಿ ಗಗನ ಮುಖಿಯಾದ ತರಕಾರಿಗಳು; ಈರುಳ್ಳಿ, ಟೊಮೆಟೊ ದರ ಹೆಚ್ಚಳಕ್ಕೆ ಇದು ಕೂಡ ಕಾರಣ

     ತರಕಾರಿ ಬೆಲೆ ಏರಿಕೆಯಾಗಿರುವುದಕ್ಕೆ ಪ್ರಮುಖ ಕಾರಣ ಕಳೆದೊಂದು ವಾರದಿಂದ ರಾಜ್ಯದಲ್ಲಿ ಸುರಿಯುತ್ತಿರು ಭಾರೀ ಮಳೆ. ಬೆಂಗಳೂರು, ಶಿವಮೊಗ್ಗ, ಚಿತ್ರದುರ್ಗ, ಧಾರಾವಾಡ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಳೆದೊಂದು ವಾರದಿಂದ ಭಾರೀ ಮಳೆಯಾಗುತ್ತಿದೆ. 

    MORE
    GALLERIES

  • 45

    Onion, Tomoto price: ಬೆಂಗಳೂರಿನಲ್ಲಿ ಗಗನ ಮುಖಿಯಾದ ತರಕಾರಿಗಳು; ಈರುಳ್ಳಿ, ಟೊಮೆಟೊ ದರ ಹೆಚ್ಚಳಕ್ಕೆ ಇದು ಕೂಡ ಕಾರಣ

    ಇದರ ಬೆನ್ನಲ್ಲೇ ಇದೀಗ ವಿಜಯದಶಮಿ ಮತ್ತು ಆಯುಧ ಪೂಜೆ ಹಬ್ಬ ಇರುವ ಹಿನ್ನಲೆ ಮಾರುಕಟ್ಟೆಯಲ್ಲಿ ಗ್ರಾಹಕರ ಬೇಡಿಕೆ ಕೂಡ ಹೆಚ್ಚಿದೆ. ಅಭಾವ ದ ಜೊತೆಗೆಬೇಡಿಕೆ ಹಿನ್ನಲೆ ತರಕಾರಿಗಳ ಬೆಲೆ  ದಿಢೀರ್​  ಏರಿಕೆಯಾಗಿದೆ.

    MORE
    GALLERIES

  • 55

    Onion, Tomoto price: ಬೆಂಗಳೂರಿನಲ್ಲಿ ಗಗನ ಮುಖಿಯಾದ ತರಕಾರಿಗಳು; ಈರುಳ್ಳಿ, ಟೊಮೆಟೊ ದರ ಹೆಚ್ಚಳಕ್ಕೆ ಇದು ಕೂಡ ಕಾರಣ

    ಇದೇ ಕಾರಣಕ್ಕೆ ಬೆಂಗಳೂರಿನಲ್ಲಿ 20 ರೂ ಇದ್ದ ಟಮೋಟೋ ಬೆಲೆ 80 ರೂ ಆಗಿದೆ, ಮಳೆಯಿಂದಾಗಿ ಉತ್ತಮ ಈರುಳ್ಳಿ ಮಾರುಕಟ್ಟೆಯಲ್ಲಿ ಕ್ವಿಂಟಲ್​ಗೆ 800 ರಿಂದ 1,500 ರೂ ಆಗಿದೆ.

    MORE
    GALLERIES