ಕೊನೆವರೆಗೂ ಪತ್ತೆ ಆಗಲೇ ಇಲ್ಲ ಒಂದು ಮತ: ಬಾಕ್ಸ್ ಜಾಲಾಡಿದ್ರೂ ಸಿಗಲಿಲ್ಲ
ಮಂಗಳವಾರ ವಿಧಾನ ಪರಿಷತ್ ಚುನಾವಣೆಯ ಫಲಿತಾಂಶ (MLC Election Results 2021) ಹೊರ ಬಂದಿದೆ. ಯಾರು ಗೆದ್ರು? ಯಾರು ಎಷ್ಟು ಮತಗಳಿಂದ ಸೋತರು ಅನ್ನೋ ವಿಚಾರ ಬಹಿರಂಗವಾಗಿದೆ. ಆದ್ರೆ ಕಲಬುರಗಿ-ಯಾದಗಿರಿ (Kalaburagi-Yadagiri) ಪರಿಷತ್ ಚುನಾವಣೆ ಫಲಿತಾಂಶದಲ್ಲಿ ಒಂದು ಮತ (Vote) ಮಿಸ್ ಆಗಿದೆ. ಆ ಮತ ಎಲ್ಲಿ ಹೋಯ್ತು ಅನ್ನೋದು ಇದುವರೆಗೂ ಪತ್ತೆಯಾಗಿಲ್ಲ.
ಕಲಬುರಗಿ-ಯಾದಗಿರಿ ಪರಿಷತ್ ಕ್ಷೇತ್ರದಲ್ಲಿ 7,070 ಮತಗಳು ಚಲಾವಣೆಯಾಗಿದೆ. ಆದ್ರೆ ಎಣಿಕೆ ವೇಳೆ ಅಧಿಕಾರಿಗಳಿಗೆ 7,069 ಮತಗಳು ಸಿಕ್ಕಿದ್ದವು. ಆದ್ರೆ ಒಂದು ಮತ ಮಾತ್ರ ಸಿಕ್ಕಿರಲಿಲ್ಲ.
2/ 5
ಇಡೀ ಬಾಕ್ಸ್ ಜಾಲಾಡಿದ್ರೂ ಆ ಒಂದು ಮತ ಅಧಿಕಾರಿಗಳಿಗೆ ಕೊನೆಗೂ ಸಿಕ್ಕಿರಲಿಲ್ಲ. ಹಾಕಿದ ವ್ಯಕ್ತಿಯೇ ತೆಗೆದುಕೊಂಡು ಹೋದನಾ ಅಥವಾ ಮತಪೆಟ್ಟಿಗೆಯಲ್ಲಿ ಹಾಕೋದು ಮರೆತನಾ ಅನ್ನೋ ಪ್ರಶ್ನೆಗಳು ಮೂಡಿವೆ.
3/ 5
ಫಲಿತಾಂಶದಲ್ಲಿ ಬಿಜೆಪಿಯ ಬಿ.ಜಿ.ಪಾಟೀಲ್ (BG Patil) ಗೆಲುವು ಕಂಡಿದ್ದಾರೆ. ಬಿಜೆಪಿ 3452, ಕಾಂಗ್ರೆಸ್ 3303 ಮತ್ತು ಪಕ್ಷೇತರ ಅಭ್ಯರ್ಥಿ 16 ಮತ ಪಡೆದುಕೊಂಡಿದ್ದಾರೆ. ಒಟ್ಟು 298 ಮತಗಳು ತಿರಸ್ಕೃತಗೊಂಡಿವೆ.
4/ 5
ಆ ಒಂದು ಮತವನ್ನು ಹೊರತುಪಡಿಸಿ ಚುನಾವಣಾ ಆಯೋಗ ಫಲಿತಾಂಶ ಪ್ರಕಟಿಸಿದೆ ಆದ್ರೆ ಆ ಒಂದು ಮತದ ಬಗ್ಗೆ ಗೆದ್ದವರು ಕೇಳಲಿಲ್ಲ ಸೋತವರು ಕೇಳಿಲ್ಲ. ಒಂದು ಮತ ಮಿಸ್ ಆದರೂ ಜಿಲ್ಲಾಡಳಿತ ಮಾತ್ರ ಮೌನಕ್ಕೆ ಜಾರಿದೆ. ಒಂದು ಮತ ಮಿಸ್ ಆಗಿದ್ದು ಹೇಗೆ ಅನ್ನೋದೆ ಯಕ್ಷ ಪ್ರಶ್ನೆಯಾಗಿದೆ.
5/ 5
25 ಸ್ಥಾನಗಳ ಪರಿಷತ್ ಚುನಾವಣೆಯಲ್ಲಿ 11 ಸ್ಥಾನಗಳನ್ನ ಗೆದ್ದ ಬಿಜೆಪಿ ಮೇಲ್ಮನೆಯಲ್ಲಿ ಹೊಂದಿರುವ ಸದಸ್ಯರ ಸಂಖ್ಯೆ 37ಕ್ಕೆ ಏರಿದೆ. ಸರಳ ಬಹುಮತಕ್ಕೆ ಕೇವಲ ಒಂದು ಸ್ಥಾನ ಕಡಿಮೆ ಬಿದ್ದಿದೆ. ಕಾಂಗ್ರೆಸ್ ಬಲ 26ಕ್ಕೆ ವೃದ್ಧಿಸಿದೆ. ಜೆಡಿಎಸ್ 11 ಸದಸ್ಯರನ್ನ ಹೊಂದಿದೆ