Vaccination ಬಳಿಕ ಒಂದೂವರೆ ತಿಂಗಳ ಮಗು ಸಾವು ಆರೋಪ; ಈ 3 ಲಸಿಕೆ ಒಟ್ಟಿಗೆ ಹಾಕಿಸಿದರೆ ಅಪಾಯವೇ?
ಮಂಡ್ಯ: ವ್ಯಾಕ್ಸಿನ್ (Vaccine) ನೀಡಿದ 4 ದಿನಗಳ ಬಳಿಕ ಒಂದೂವರೆ ತಿಂಗಳ ಮಗು (Child) ಸಾವನ್ನಪ್ಪಿದೆ. ಲಸಿಕೆಗಳನ್ನು ಪಡೆದ ಬಳಿಕ ಮಗು ತೀವ್ರ ಅನಾರೋಗ್ಯಕ್ಕೆ ತುತ್ತಾಗಿತ್ತು. ನಂತರ 4ನೇ ದಿನ ಕೊನೆಯುಸಿರೆಳೆದಿದೆ ಎಂದು ಪೋಷಕರು (Parent)ಕಣ್ಣೀರಿಡುತ್ತಿದ್ದಾರೆ.
ಶ್ರೀರಂಗಪಟ್ಟಣ ತಾಲೂಕಿನ ಪಾಲಹಳ್ಳಿಯಲ್ಲಿ ತೇಜಸ್ವಿನಿ & ಸೋಮಚಾರಿ ದಂಪತಿಯ ಹೆಣ್ಣು ಮಗು ಮೃತಪಟ್ಟಿದೆ. ಒಂದೇ ಸಲ 3 ವ್ಯಾಕ್ಸಿನ್ ಹಾಕಿದ್ದೇ ಮಗುವಿನ ಸಾವಿಗೆ ಕಾರಣ ಎಂದು ಪೋಷಕರ ಆರೋಪಿಸುತ್ತಿದ್ದಾರೆ. (ಸಾಂದರ್ಭಿಕ ಚಿತ್ರ)
2/ 5
ಕಳೆದ ಗುರುವಾರ ಮಗುವಿಗೆ ಪಾಲಹಳ್ಳಿಯ ಆರೋಗ್ಯ ಕೇಂದ್ರದಲ್ಲಿ ವ್ಯಾಕ್ಸಿನ್ ನೀಡಲಾಗಿತ್ತು. ವೈದ್ಯ ಸುರೇಶ್ ಎಂಬುವರು ಒಂದೂವರೆ ತಿಂಗಳಿಗೆ ನೀಡುವ ಐಪಿವಿ, ಪೆಂಡಾ ಜತೆಗೆ ನೀಮೊಕಾಕಲ್ ಲಸಿಕೆ ಹಾಕಿದ್ದರು. (ಸಾಂದರ್ಭಿಕ ಚಿತ್ರ)
3/ 5
ಕಳೆದ ವಾರದಿಂದಷ್ಟೇ ನೀಮೊಕಾಕಲ್ ವ್ಯಾಕ್ಸಿನ್ ನೀಡಲಾಗುತ್ತಿದೆ. ಈ ಹಿಂದೆ ಒಂದೂವರೆ ತಿಂಗಳು ತುಂಬಿದ ಮಗುವಿಗೆ ಐಪಿವಿ, ಪೆಂಡಾ ಲಸಿಕೆ ಮಾತ್ರ ನೀಡಲಾಗುತ್ತಿತ್ತು. (ಸಾಂದರ್ಭಿಕ ಚಿತ್ರ)
4/ 5
ಇಂಜೆಕ್ಷನ್ ನೀಡುವ ಮೊದಲು ಆರೋಗ್ಯವಾಗಿಯೇ ಇತ್ತು. ಇಂಜೆಕ್ಷನ್ ಹಾಕಿಕೊಂಡು ಬಂದ ಬಳಿಕ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡಿದೆ. (ಸಾಂದರ್ಭಿಕ ಚಿತ್ರ)
5/ 5
ಮಗು ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದರಿಂದ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಮಗು ಮೃತಪಟ್ಟಿದೆ. ಮಗು ಸಾವಿಗೆ ವೈದ್ಯರೇ ಕಾರಣವೆಂದು ಪೋಷಕರ ಆರೋಪಿಸುತ್ತಿದ್ದಾರೆ. (ಪ್ರಾತಿನಿಧಿಕ ಚಿತ್ರ)