Puneeth Rajkumar ತಿಥಿ ಕಾರ್ಯದ ದಿನ ಕಾವೇರಿ ನದಿಗೆ ತರ್ಪಣ ಬಿಟ್ಟ ನಟ Vinod Raj
Vinod Raj at Srirangapatna: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (Power Star Puneeth Rajkumar) ಅವರ 11ನೇ ದಿನ ತಿಥಿ(Thithi) ಕಾರ್ಯ ಇಂದು. ಅಪ್ಪು ಪತ್ನಿ ಅಶ್ವಿನಿ(Ashwini Puneeth Rajkumar) , ಮಕ್ಕಳು ಸೇರಿದಂತೆ ಇಡೀ ರಾಜ್ ಕುಟುಂಬ (Raj Family) ಇಂದು ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ತಿಥಿ ಕಾರ್ಯ ನೆರವೇರಿಸಿದರು. ಕುಟುಂಬಸ್ಥರು ಮಾತ್ರವಲ್ಲದೇ ರಾಜ್ಯದ್ಯಂತ ಅಭಿಮಾನಿಗಳ ಸಹ ನೆಚ್ಚಿನ ನಟನ ತಿಥಿ ಕಾರ್ಯವನ್ನು ಮಾಡಿದ್ದಾರೆ.
ಪುನೀತ್ 11ನೇ ದಿನ ತಿಥಿ ಕಾರ್ಯದ ದಿನವಾದ ಇಂದು ಹಿರಿಯ ನಟಿ ಲೀಲಾವತಿ, ಅವರ ಪುತ್ರ-ನಟ ವಿನೋದ್ ರಾಜ್ ಶ್ರೀರಂಗ ಪಟ್ಟಣದಲ್ಲಿ ತರ್ಪಣ ಬಿಟ್ಟಿದ್ದಾರೆ.
2/ 6
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಗಂಜಾಂ ಬಳಿಯ ಕಾವೇರಿ ನದಿಯ ಸಂಗಮದಲ್ಲಿ ವಿನೋದ್ ರಾಜ್ ಹಾಗೂ ಲೀಲಾವತಿ ಅವರು ಪುನೀತ್ ಆತ್ಮಕ್ಕೆ ಸದ್ಗತಿ ದೊರಕುವಂತೆ ಪೂಜೆ ಸಲ್ಲಿಸಿದರು.
3/ 6
ನಂತರ ನಟ ವಿನೋದ್ ರಾಜ್ ಕಾವೇರಿ ನದಿಗೆ ಇಳಿದು ತರ್ಪಣ ಬಿಟ್ಟರು. ಈ ಬಗ್ಗೆ ಮಾಧ್ಯಮಗಳೊಂದಿಗೆ ಲೀಲಾವತಿ ಅವರಾಗಲಿ, ವಿನೋದ್ ರಾಜ್ ಅವರಾಗಲಿ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.
4/ 6
ನದಿ ತಟದಲ್ಲಿ ಆಶ್ಲೇಷ ಬಲಿ ಹಾಗೂ ನಾರಾಯಣ ಬಲಿ ಪೂಜೆ ನೆರವೇರಿಸಿಕೊಟ್ಟ ಅರ್ಚಕರು ಮಾಧ್ಯಮಗಳೊಂದಿಗೆ ಮಾತನಾಡಿ, ಲೀಲಾವತಿ ಹಾಗೂ ವಿನೋದ್ ಅವರು ಪುನೀತ್ ಅವರ ಹೆಸರಲ್ಲಿ ಕಾರ್ಯ ನಡೆಸಿದರು ಎಂದು ತಿಳಿಸಿದರು.
5/ 6
ಇನ್ನು ಇಂದು ಬೆಳಗ್ಗೆ ಪುನೀತ್ ಅವರ ಮನೆಯಲ್ಲಿ ತಿಥಿ ಕಾರ್ಯದ ಪೂಜೆ ನಡೆದಿದೆ. ನಂತರ ಇಡೀ ಕುಟುಂಬ ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್ ಅವರ ಸಮಾಧಿಗೆ ಪೂಜೆ ಸಲ್ಲಿಸುವ ಮೂಲಕ ತಿಥಿ ಕಾರ್ಯ ಮಾಡಿದರು.
6/ 6
ಇನ್ನು ಸಿಎಂ ಬಸವರಾಜ್ ಬೊಮ್ಮಾಯಿ ಅವರು ಸದಾಶಿವನಗರದಲ್ಲಿರುವ ಪುನೀತ್ ಅವರ ಮನೆಗೆ ಭೇಟಿ ನೀಡಿ ನಮನ ಸಲ್ಲಿಸಿದರು.