6ನೇ ನಾವಿಕೋತ್ಸವ ವಿಶ್ವಕನ್ನಡ ಸಮ್ಮೇಳನ ನಡೆಸಲು ಅನಿವಾಸಿ ಕನ್ನಡಿಗರ ನಾವು ವಿಶ್ವ ಕನ್ನಡಿಗರು (ನಾವಿಕ) ಸಂಸ್ಥೆಯು ಮುಂದಾಗಿದ್ದು, ದಿನಾಂಕ ನಿಗದಿ ಮಾಡಿದೆ. (ನಾವಿಕ ಫೇಸ್ಬುಕ್ ಪೇಜ್)
2/ 9
ಇದೇ ವರ್ಷದ ಸೆಪ್ಟೆಂಬರ್ 10ರಂದು ಈ ಸಮ್ಮೇಳನ ನಡೆಯುತ್ತಿದ್ದು, ಈ ಬಾರಿ ಸಮ್ಮೇಳನ ಆಫ್ರಿಕಾ ಖಂಡದ ಕೀನ್ಯಾ ದೇಶದ ರಾಜಧಾನಿ ನೈರೋಬಿಯಲ್ಲಿ ನಡೆಯಲಿದೆ. (ನಾವಿಕ ಫೇಸ್ಬುಕ್ ಪೇಜ್)
3/ 9
ಕನ್ನಡ ಸಾಂಸ್ಕೃತಿಕ ಸಂಘ ಕೀನ್ಯಾದ ಸಹಯೋಗದೊಂದಿಗೆ ನಡೆಯುವ ಈ ನಾವಿಕೋತ್ಸವದಲ್ಲಿ ಆಫ್ರಿಕಾ ಖಂಡದ ವಿವಿಧ ದೇಶಗಳ ಕನ್ನಡ ಸಂಘಗಳು ಭಾಗಿಯಾಗಲಿದೆ. (ನಾವಿಕ ಫೇಸ್ಬುಕ್ ಪೇಜ್)
4/ 9
ಕಳೆದೆರಡು ವರ್ಷಗಳಿಂದ ವರ್ಚುಯಲ್ ಆಗಿ ನಡೆದ ಸಮ್ಮೇಳನ ಈ ಬಾರಿ ಅದ್ಧೂರಿಯಾಗಿ ನಡೆಯಲಿದ್ದು, ಇದಕ್ಕಾಗಿ ಈಗಾಗಲೇ ಸಿದ್ಧತೆ ನಡೆದಿದೆ. (ನಾವಿಕ ಫೇಸ್ಬುಕ್ ಪೇಜ್)
5/ 9
ಈ ನಾವಿಕ ಸಂಸ್ಥೆಯು ಬೆಸ ಸಂಖ್ಯೆಗಳಲ್ಲಿ ಅಮೆರಿಕದಲ್ಲಿ ಮತ್ತು ಸರಿ ಸಂಖ್ಯೆಯಲ್ಲಿ ಅಮೆರಿಕದ ಹೊರಗಡೆ ದೇಶದಲ್ಲಿ ಈ ಕಾರ್ಯಕ್ರಮ ರೂಪಿಸಿಕೊಂಡು ಬರುತ್ತಿದೆ. (ನಾವಿಕ ಫೇಸ್ಬುಕ್ ಪೇಜ್)
6/ 9
ಈ ಬಾರಿಯ 6ನೇ ನಾವಿಕೋತ್ಸವ ಸಮ್ಮೇಳನದಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿ, ನಾಟಕ, ಸಂಗೀತ, ನೃತ್ಯ ಹೀಗೆ ವಿವಿಧ ಕ್ಷೇತ್ರಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವುದರ ಜೊತೆಗೆ ಆಫ್ರಿಕಾ ದೇಶದ ಮನೋಹರ ವನ್ಯಜೀವಿಗಳ ಪ್ರಕೃತಿಯನ್ನು ಅನಿವಾಸಿ ಭಾರತೀಯರು ಸವಿಯಲಿದ್ದಾರೆ. (ನಾವಿಕ ಫೇಸ್ಬುಕ್ ಪೇಜ್)
7/ 9
ಅಮೆರಿಕದ ಕನ್ನಡಿಗರು ಈ ನಾವಿಕೋತ್ಸವ ಆಚರಣೆ ಮಾಡಿಕೊಂಡು ಬರುತ್ತಿದ್ದು, ಈ ಸಮ್ಮೇಳನಕ್ಕೆ ಭಾರತದ ಪ್ರಸಿದ್ಧ ಕಲಾವಿದರು, ಪ್ರಮುಖ ವ್ಯಕ್ತಿಗಳನ್ನು ಆಹ್ವಾನಿಸಲಾಗುವುದು. (ಸಾಂದರ್ಭಿಕ ಚಿತ್ರ)
8/ 9
ಈ ಬಾರಿ ಸಮ್ಮೇಳನ ಕಾರ್ಯಕ್ರಮದ ಜೊತೆ ನೈರೋಬಿಯಾದ ಪ್ರಕೃತಿ ಮತ್ತು ವನ್ಯಜೀವಿ ಸಂಪತ್ತನ್ನು ಸವಿಯುವ ಭಾಗ್ಯ ಅನಿವಾಸಿ ಕನ್ನಡಿಗರದ್ದು. (ಸಾಂದರ್ಭಿಕ ಚಿತ್ರ)
9/ 9
ಹೀಗಾಗಿ ಅಮೆರಿಕದಿಂದ ಬರಲಿರುವ ಕನ್ನಡಿಗರಿಗಾಗಿ ಸಮ್ಮೇಳನದ ಜೊತೆಗೆ ಮಸೈಮರಾ ವನ್ಯ ರಕ್ಷಣಾಧಾಮ, ನೈವಷಾ ಸರೋವರ ಮುಂತಾದ ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆಯನ್ನು ಒಳಗೊಂಡ ಒಂದು ವಾರದ ಆಲ್ ಇನ್ಕ್ಲೂಸಿವ್ (All-inclusive) ಟೂರ್ ಪ್ಯಾಕೇಜ್ ಸಿದ್ಧಗೊಳಿಸಿದೆ. (ಸಾಂದರ್ಭಿಕ ಚಿತ್ರ)