ನಾನು ಮತ್ತು ಸತೀಶ್ ಜಾರಕಿಹೊಳಿ ಸ್ಟಾರ್ ಪ್ರಚಾರಕರಿದ್ದಂತೆ, ನೀವು ಎಷ್ಟೆ ಟ್ವಿಸ್ಟ್ ಮಾಡಿ ಪ್ರಶ್ನೆ ಕೇಳಿದರೂ ನಾನು ಪ್ರಶ್ನೆ ಪತ್ರಿಕೆ ಲೀಕ್ ಮಾಡಲ್ಲ. ಕಳೆದ 20 ವರ್ಷದಿಂದ ನಾನು ರ್ಯಾಂಕ್ ಸ್ಟೂಡೇಂಟ್ ನಾನು ಪ್ರಶ್ನೆ ಪತ್ರಿಕೆ ಪೇಪರ್ ಲೀಕ್ ಮಾಡಲ್ಲ ಎಂದು ಗೋಕಾಕ್ ಕಾಂಗ್ರೆಸ್ ಅಭ್ಯರ್ಥಿ ಲಖನ್ ಜಾರಕಿಹೊಳಿ ಹೇಳಿದ್ದಾರೆ. ಈಗಾಗಲೇ ನಾಮಪತ್ರ ಪರಿಶೀಲನೆ ಮುಕ್ತಾಯವಾಗಿದ್ದು, ಪ್ರಚಾರ ಮುಂದುವರೆಸುತ್ತೇವೆ. ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಪ್ರಚಾರಕ್ಕೆ ಬರಲಿದ್ದಾರೆ, ಶಾಸಕರಾದ ಲಕ್ಷ್ಮೀ ಹೆಬ್ಬಾಳ್ಕರ್, ಡಿಕೆ ಶಿವಕುಮಾರ್ ಪ್ರಚಾರಕ್ಕೆ ಬರುವ ಕುರಿತು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಹೇಳುತ್ತಾರೆ ಎಂದರು.